/newsfirstlive-kannada/media/post_attachments/wp-content/uploads/2023/07/Kohli-chahal.jpg)
ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಅನುಭವಿ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಅವರು ಭಾರೀ ಮೊತ್ತಕ್ಕೆ ಸೇಲಾದ್ರು. ಆರಂಭದಲ್ಲೇ ಚಹಾಲ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾಟ್ ಟೈಟನ್ಸ್ ತಂಡಗಳ ಮಧ್ಯೆ ಪೈಪೋಟಿ ನಡೆಯಿತು. ಕೊನೆಗೆ ಪಂಜಾಬ್ ತಂಡ ಎಂಟ್ರಿಯಾಗಿ ಚಹಾಲ್ ಅವರನ್ನು 18 ಕೋಟಿಗೆ ಖರೀದಿ ಮಾಡಿದೆ.
ಖರೀದಿಗೆ ಮುಂದಾಗಿದ್ದ ಆರ್‌ಸಿಬಿ
ಚಹಾಲ್ ಹೆಸರು ಕೇಳುತ್ತಿದ್ದಂತೆ ಆರ್‌ಸಿಬಿ ಫ್ಯಾನ್ಸ್ ಸಖತ್ ಎಕ್ಸೈಟ್ ಆಗಿದ್ದರು. ಆರ್‌ಸಿಬಿ ಇವರನ್ನು ಖರೀದಿ ಮಾಡಬಹುದು ಎಂದು ಆಸೆ ಇಟ್ಟುಕೊಂಡಿದ್ದರು. ಬಿಡ್ ಆರಂಭದಲ್ಲಂತೂ ಆರ್‌ಸಿಬಿ ಇವರನ್ನು ಕೊಳ್ಳಲು ಯಾವುದೇ ಆಸಕ್ತಿ ತೋರಲಿಲ್ಲ. ರಾಜಸ್ಥಾನ ರಾಯಲ್ಸ್ ತಂಡದಿಂದ ಕೈ ಬಿಡಲಾದ ಚಹಾಲ್ ಖರೀದಿಗೆ ಪೈಪೋಟಿ ನಡೆಯಿತು. ಬಿಡ್ 7 ಕೋಟಿ ದಾಟುತ್ತಿದ್ದಂತೆ ಚೆನ್ನೈ ಹಾಗೂ ಗುಜರಾತ್ ತಂಡಗಳು ಹಿಂದೆ ಸರಿದವು. 14 ಕೋಟಿ ಬಿಡ್ ಆಗಿದ್ದಾಗ ಆರ್‌ಸಿಬಿ ಇವರ ಖರೀದಿಗೆ ಮುಂದಾಗಿತ್ತು. ತನ್ನ ಮಾಜಿ ಆಟಗಾರನನ್ನು ಕೊಳ್ಳಲು ಹಣ ಹೂಡಲು ಆರ್‌ಸಿಬಿ ಮುಂದಾಯಿತು. ಪಂಜಾಬ್ ಸವಾಲು ಮಾಡಿ ಚಹಾಲ್ ಖರೀದಿ ಮಾಡಿತು.
ಆರ್‌ಸಿಬಿ ಹಿಂದೇಟು ಹಾಕಿದ್ದೇಕೆ?
ಮುಂದಿನ ಸೀಸನ್ನಲ್ಲಿ ಆರ್‌ಸಿಬಿ ಕಪ್ ಗೆಲ್ಲಲು ಬ್ಯಾಲೆನ್ಸಿಂಗ್ ತಂಡ ಕಟ್ಟಬೇಕಿತ್ತು. ಹಾಗಾಗಿ 10 ಕೋಟಿಗಿಂತಲೂ ಹೆಚ್ಚು ಯಾರ ಮೇಲೂ ಸುರಿಯಬಾರದು ಎಂದು ನಿರ್ಧಾರ ಮಾಡಿತ್ತು. ಚಹಾಲ್ ಯಾವಾಗ 15 ಕೋಟಿ ದಾಟಿದ್ರೋ ಆಗಲೇ ಆರ್‌ಸಿಬಿ ಹರಾಜು ಕಣದಿಂದ ಹಿಂದೆ ಸರಿಯಿತು. ಇವರ ಬದಲಿಗೆ ಸುಯಾಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ಅವರನ್ನು ಖರೀದಿಸಿದೆ ಆರ್‌ಸಿಬಿ.
ಚಹಾಲ್ ಹೈಎಸ್ಟ್ ವಿಕೆಟ್ ಟೇಕರ್
ಬೆಂಗಳೂರು ತಂಡಕ್ಕೆ ಹಲವು ವರ್ಷಗಳಿಂದ ಕಾಡುತ್ತಿರೋ ದೊಡ್ಡ ಸಮಸ್ಯೆ ಎಂದರೆ ಸ್ಪಿನ್ ಬೌಲರ್ ಕೊರತೆ. ಯಜುವೇಂದ್ರ ಚಹಾಲ್ ಅವರನ್ನು ಕೈ ಬಿಟ್ಟು ತಪ್ಪು ಮಾಡಿದ್ದ ಆರ್ಸಿಬಿಗೆ ಬಳಿಕ ಒಳ್ಳೆಯ ಸ್ಪಿನ್ ಬೌಲರ್ ಸಿಗಲೇ ಇಲ್ಲ. ಚಹಾಲ್ ಐಪಿಎಲ್ನಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ಸೈ ಎನಿಸಿಕೊಂಡಿದ್ದಾರೆ. ತಂಡಕ್ಕೆ ಅಗತ್ಯವಿದ್ದಾಗ ವಿಕೆಟ್ ತೆಗೆಯುವ ಸಾಮರ್ಥ್ಯ ಇದೆ. ವಿಶೇಷ ಎಂದರೆ ಆರ್‌ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಚಹಾಲ್ ಹೆಸರಿನಲ್ಲಿದೆ. 2014 ರಿಂದ 2021 ರವರೆಗೆ ಆರ್‌ಸಿಬಿ ಪರ 114 ಪಂದ್ಯಗಳನ್ನಾಡಿದ್ದ ಯುಜ್ವೇಂದ್ರ ಚಹಾಲ್ ಒಟ್ಟು 139 ವಿಕೆಟ್ ಕಬಳಿಸಿದ್ದರು. 2024ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಚಹಾಲ್ ಹೈಎಸ್ಟ್ ವಿಕೆಟ್ ಟೇಕರ್ ಆಗಿದ್ದರು.
ಇದನ್ನೂ ಓದಿ:WPL ಮಿನಿ ಹರಾಜು.. ನಾಲ್ವರಿಗೆ ಕೋಟಿ ಕೋಟಿ ಜಾಕ್ಪಾಟ್.. ಅತ್ಯಂತ ದುಬಾರಿ ಆಟಗಾರ್ತಿ ಯಾರು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್