/newsfirstlive-kannada/media/post_attachments/wp-content/uploads/2024/01/drone-prathap.jpg)
ತುಮಕೂರು: ನೀರಿನಲ್ಲಿ ಕೆಮಿಕಲ್ ಹಾಕಿ ಬ್ಲಾಸ್ಟ್ ಮಾಡಿದ್ದ ಕೇಸ್​ನಲ್ಲಿ ಮಾಜಿ ಬಿಗ್​ ಸ್ಪರ್ಧಿ ಡ್ರೋನ್​ ಪ್ರತಾಪ್​ ಅವರನ್ನು ಅರೆಸ್ಟ್​ ಮಾಡಲಾಗಿದೆ. ಸ್ಫೋಟಕ ವಸ್ತು ನೀರಿನಲ್ಲಿ ಎಸೆದು ಬ್ಲಾಸ್ಟ್ ಮಾಡಿದ್ದ ಪ್ರತಾಪ್ ಬಂಧನವಾಗಿದೆ.
ಇಂದು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್​ನನ್ನು ಬಂಂಧಿಸಿದ್ದಾರೆ. ವಿಡಿಯೋ ಆಧರಿಸಿ ಎಫ್​ಐಆರ್​ ಮಾಡಲಾಗಿದೆ. ಮಿಡಿಗೇಶಿ ಪೊಲೀಸರು BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿಕೊಂಡು ಡ್ರೋನ್ ಪ್ರತಾಪ್ ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಕೇಸ್​​?
ಕೃಷಿ ಹೊಂಡದಲ್ಲಿ ನೀರಿಗೆ ಕೆಮಿಕಲ್ ಹಾಕಿ ಬ್ಲಾಸ್ಟ್ ಮಾಡಿದ್ದರು. ಕೆಮಿಕಲ್ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿತ್ತು. ಬೆಂಕಿ ಸಹ ಚಿಮ್ಮಿತ್ತು. ಬಾಂಬ್ ಬ್ಲಾಸ್ಟ್ ರೀತಿ ದೃಶ್ಯ ಕಂಡು ಬಂದಿದ್ದು, ಇದನ್ನು ವಿಡಿಯೋ ಕೂಡ ಮಾಡಿದ್ರು. ನಗುತ್ತಲೇ ವಿಡಿಯೋ ಮಾಡಿದ್ದ ಪ್ರತಾಪ್​​, ದೊಡ್ಡ ಬ್ಲಾಸ್ಟ್ ಇದು ಎಂದು ಕೂಗಿದ್ದರು. ಈ ವಿಡಿಯೋ ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು.
ಇದು ಕಾನೂನು ಬಾಹಿರ. ಹೀಗಾಗಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಆಗಿತ್ತು. ಯಾವೆಲ್ಲ ಕೆಮಿಕಲ್ ಹಾಕಿದರೆ ಬ್ಲಾಸ್ಟ್ ಆಗುತ್ತೆ ಎಂದು ಬೇರೆ ಪ್ರತಾಪ್​ ಲೈವ್​ನಲ್ಲಿ ಹೇಳಿದ್ರು. ಇದನ್ನು ಕಿಡಿಗೇಡಿಗಳು ಕೃತ್ಯಕ್ಕೆ ಬಳಸುವ ಸಾಧ್ಯತೆ ಇದೆ. ಕೂಡಲೇ ಪ್ರತಾಪ್​ ಅವರನ್ನು ಅರೆಸ್ಟ್​ ಮಾಡಬೇಕು ಎಂದು ಒತ್ತಾಯ ಮಾಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us