/newsfirstlive-kannada/media/post_attachments/wp-content/uploads/2024/11/Guruprasad_NEW.jpg)
ಬೆಂಗಳೂರು: ಒಬ್ಬ ಯಶಸ್ವಿ ಡೈರೆಕ್ಟರ್ ಸೂಸೈಡ್ ಮಾಡ್ಕೊಂಡಿದ್ದಾರೆ ಅಂದ್ರೆ ಅಲ್ಲೇನೋ ಆಗಿರ್ಲೇ ಬೇಕಲ್ವಾ? ಗುರು ದಾರಿ ತಪ್ಪಿದ್ದು ಎಲ್ಲಿ? ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೋವು ಏನಿತ್ತು? ಅವ್ರ ಜೀವನ ಶೈಲಿಯೇ ಅವ್ರಿಗೆ ಮುಳುವಾಯ್ತಾ? ಸಿನಿಮಾಗಾಗಿ ಮಾಡಿದ್ದ ಸಾಲವೇ ಶೂಲವಾಯ್ತಾ? ಹೀಗೆ ನಿರ್ದೇಶಕ ಗುರುಪ್ರಸಾದ್ ಸಾವಿನ ಹಿಂದೆ ಅನುಮಾನಗಳ ಹುತ್ತವೇ ಬೆಳೆದು ನಿಂತಿದೆ.
ಡೈರೆಕ್ಟರ್ ಆಗಿಯೇ ಸಾಯೋದು. ನಾನು ಕನ್ನಡ ಸಿನಿಮಾ ನಿರ್ದೇಶಕನಾಗಿಯೇ ಸಾಯೋದು ಅಂತಾ ಪಣತೊಟ್ಟಿದ್ದ ಡೈರೆಕ್ಟರ್ ಗುರುಪ್ರಸಾದ್. ಈ ರೀತಿ ತಮ್ಮ ಬದುಕಿಗೆ ವಿದಾಯ ಹೇಳ್ತಾರೆ ಅಂತಾ ಯಾರೂ ಕೂಡ ಕಲ್ಪನೆ ಮಾಡಿರಲಿಲ್ಲ.
ಸಾಲಗಾರರ ಕಾಟ.. ಪದೇ ಪದೇ ಮನೆ ಬದಲಾವಣೆ..!
ನಿರ್ದೇಶಕ ಗುರುಪ್ರಸಾದ್ ಸಾವಿನ ಹಿಂದೆ ಸಾಲದ ವಿಚಾರ ದೊಡ್ಡದಾಗಿ ಕೇಳಿ ಬರುತ್ತಿದೆ. ಗುರುಪ್ರಸಾದ್ ಸುಮಾರು ಮೂರು ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ. ಸಾಲ ತೀರಿಸಲಾಗದೇ ಪರದಾಡ್ತಿದ್ದ ಗುರುಪ್ರಸಾದ್ಗೆ ಸಾಲಗಾರರ ಕಾಟ ಹೆಚ್ಚಳವಾಗಿತ್ತಂತೆ.
ಇನ್ನು, ಸಾಲ ಕೊಟ್ಟವರ ಕಾಟ ತಾಳಲಾರದೇ ಗುರುಪ್ರಸಾದ್ ಪದೇ ಪದೇ ಮನೆ ಬದಲಾಯಿಸ್ತಾ ಇದ್ರಂತೆ. ಅದಲ್ಲದೇ, ಸಾಲಗಾರರು ಗುರುಪ್ರಸಾದ್ ವಿರುದ್ಧ ಹಲವು ಕೇಸ್ ಕೂಡ ದಾಖಲಿಸಿದ್ರು.
ಬಂಧನ ಭೀತಿಯಿಂದ ಜರ್ಜರಿತ!
ಗುರುಪ್ರಸಾದ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಚೆಕ್ ಬೌನ್ಸ್ ಕೇಸ್ವೊಂದ್ರಲ್ಲಿ ಕೋರ್ಟ್ ಕಚೇರಿ ಅಲೆಯುತ್ತಿದ್ರಂತೆ. ಈ ನಡುವೆ ಪುಸ್ತಕ ಖರೀದಿ ಮಾಡಿ ಹಣ ನೀಡಿಲ್ಲ ಅಂತಾ ಜಯನಗರದಲ್ಲಿ ಮತ್ತೊಂದು ಕೇಸ್ ದಾಖಲಾಗಿತ್ತು. ಆರ್ಥಿಕವಾಗಿ ಸಮಸ್ಯೆ ಎದುರಿಸ್ತಿದ್ದ ಗುರುಪ್ರಸಾದ್, ಒಂಟಿ ಜೀವನ ನಡೆಸ್ತಿದ್ರು. ಸ್ನೇಹಿತರ ಬಳಗ ಕೂಡ ಕಮ್ಮಿ ಇತ್ತು. ಸದಾ ನಡ್ಕೊಂಡೇ ಓಡಾಡ್ತಾ ಇರ್ತಿದ್ರು.
ಸಿನಿಮಾಗಳಲ್ಲಿ ಹಿನ್ನಡೆ, ಕೋಟಿಗಟ್ಟಲೇ ಸಾಲ..!
ಇನ್ನು, ಗುರುಪ್ರಸಾದ್ ಯಶಸ್ವಿ ನಿರ್ದೇಶಕನಾಗಿದ್ರೂ, ಸಿನಿಮಾ ಬಿಡುಗಡೆ ಮಾಡಲು ಒದ್ದಾಡ್ತಾಯಿದ್ರಂತೆ. ಎದ್ದೇಳು ಮಂಜುನಾಥ್ ಪಾರ್ಟ್ 2 ಸಿನಿಮಾದಲ್ಲಿ ಡೈರೆಕ್ಷನ್ ಜೊತೆಗೆ ನಾಯಕ ನಟನಾಗಿ ಅಭಿನಯಿಸಿದ್ರು. ಅತ್ತ, ಬಂಡವಾಳ ಇಲ್ಲದೇ, ಕೋಟಿ ಕೋಟಿ ಸಾಲದ ಮೊರೆ ಹೋಗಿದ್ರಂತೆ. ಅತ್ತ, ಎದ್ದೇಳು ಮಂಜುನಾಥ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ರೂ ಬಿಡುಗಡೆಯಾಗಿಲ್ಲ.
ಪ್ರತಿಭಾವಂತ ನಿರ್ದೇಶಕನ ಬಲಿ ಪಡೆಯಿತಾ ಲೈಫ್ ಸ್ಟೈಲ್?
ಪ್ರತಿಭಾವಂತ ನಿರ್ದೇಶಕನಾಗಿದ್ದ ಗುರುಪ್ರಸಾದ್ ಸಾವಿಗೆ ಅವ್ರ ಲೈಫ್ ಸ್ಟೈಲ್ ಕೂಡ ಒಂದು ಕಾರಣ ಎನ್ನಲಾಗ್ತಿದೆ. ಹಲವು ಚಟಗಳಿಗೆ ದಾಸರಾಗಿದ್ದ ಗುರು, ಇಂಡಸ್ಟ್ರಿಯಲ್ಲೂ ನಂಬಿಕೆ ಕಳ್ಕೊಂಡಿದ್ರಂತೆ. ಹಲವು ನಿರ್ಮಾಪಕರಿಗೂ ಭಾರೀ ನಷ್ಟ ಉಂಟಾಗಿತ್ತು ಅನ್ನೋ ಮಾಹಿತಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ