/newsfirstlive-kannada/media/post_attachments/wp-content/uploads/2025/06/boeing-787-1.jpg)
ಅಹ್ಮದಾಬಾದ್​ನಿಂದ ಲಂಡನ್​ಗೆ ಹೊರಟಿದ್ದ ಏರ್​ ಇಂಡಿಯಾದ ಬೋಯಿಂಗ್-787 ಡ್ರೀಮ್‌ಲೈನರ್ ವಿಮಾನ ( Boeing 787 Dreamliner) ಘೋರ ದುರಂತಕ್ಕೆ ಒಳಗಾಗಿದೆ. ಮಧ್ಯಾಹ್ನ 1.38ಕ್ಕೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಮಘಾನಿನಗರ ಪ್ರದೇಶದ ಬಿಜೆ ಎಂಬಿಬಿಎಸ್ ಹಾಸ್ಟೆಲ್​​ ಮೇಲೆ ಬಂದು ಅಪ್ಪಳಿಸಿತು. ಪರಿಣಾಮ ವಿಮಾನದಲ್ಲಿದ್ದ 241 ಪ್ರಯಾಣಿಕರು ಹಾಗೂ ಹಾಸ್ಟೆಲ್​​ನಲ್ಲಿದ್ದ 24 ಭಾವಿ ವೈದ್ಯರು ಜೀವಬಿಟ್ಟಿದ್ದಾರೆ. ಇನ್ನು, ವಿಮಾನದಲ್ಲಿದ್ದ ಓರ್ವ ಪ್ರಯಾಣಿಕ ಜಿಗಿದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ವಿಮಾನದ ಬೆಲೆ 2.18 ಸಾವಿರ ಕೋಟಿ ರೂ.. ಪತನಗೊಂಡ Boeing 787 ವಿಶೇಷತೆ ಏನೇನು..?
ವಿಮಾನ ಅಪಘಾತಕ್ಕೆ ಮೂಲ ಕಾರಣಗಳೇನು..?
- ವಿಮಾನದ ಎಂಜಿನ್, ಟೇಕ್ ಆಫ್ ವೇಳೆ ಮೇಲೆ ಹಾರಲು ಅಗತ್ಯವಾದ ಒತ್ತಡ ಕಳೆದುಕೊಂಡಿರಬಹುದು
- ಎಂಜಿನ್‌ಗೆ ಹಕ್ಕಿಗಳು ಡಿಕ್ಕಿ ಹೊಡೆದು ಎಂಜಿನ್ ಮೇಲೆ ಪರಿಣಾಮ ಬೀರಿ ಪತನ ಆಗಿರಬಹುದು
- ವಿಮಾನ ಮೇಲೇರಿದರೂ ಲ್ಯಾಂಡಿಂಗ್ ಗೇರ್ ಹೊರಗಿದ್ದ ಕಾರಣ 2ನೇ ಎಂಜಿನ್‌ಗೆ ಶಕ್ತಿ ಸಿಗದೇ ಅನಾಹುತ
- 825 ಅಡಿಗಳಷ್ಟು ಕಡಿಮೆ ಎತ್ತರದಲ್ಲಿ ವಿಮಾನ ಮೇಲೇರಲು ಸಾಧ್ಯವಾಗದೇ ಪತನಗೊಂಡಿರಬಹುದು
- ತಪ್ಪಾದ ವಿಧಾನದಲ್ಲಿ ವಿಮಾನವನ್ನು ಟೇಕ್ ಆಫ್ ಮಾಡಿದ್ದು ಕೂಡ ಪತನಕ್ಕೆ ಕಾರಣವಾಗಿರಬಹುದು
- ವಿಮಾನ ಇಂಧನ ಟ್ಯಾಂಕ್ ಪೂರ್ಣ ಭರ್ತಿ ಆಗಿದ್ದರಿಂದ ಅದು ಸ್ಫೋಟಗೊಂಡು ಹೆಚ್ಚು ಅನಾಹುತ ಶಂಕೆ
- 1985ರ ಕನಿಷ್ಕಾ ವಿಮಾನ ದುರಂತದಂತೆ ಈ ಸಲವೂ ವಿಧ್ವಂಸಕ ಕೃತ್ಯಗಳಿಂದ ವಿಮಾನ ಪತನದ ಸಾಧ್ಯತೆ
- ಮೇಡೇ ಕರೆಗೂ ಮೊದಲು ಪೈಲಟ್ ವಿಮಾನ ಏರುಗತಿಯಲ್ಲೇ ಇರುವಂತೆ ನೋಡಿಕೊಳ್ಳಲು ಕಷ್ಟಪಡುತ್ತಿದ್ದರು
ಇದನ್ನೂ ಓದಿ: ವಿಮಾನ ದುರಂತದಿಂದ ಮಹಿಳೆ ಗ್ರೇಟ್ ಎಸ್ಕೇಪ್.. ಈಕೆಯ ಜೀವ ಉಳಿಸಿದ್ದು ಟ್ರಾಫಿಕ್ ಜಾಮ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ