newsfirstkannada.com

ಭೀಕರ ಕಾರ್​​ ಅಪಘಾತದಲ್ಲಿ ಮೂವರು ಸಾವು ಕೇಸ್​ಗೆ ಟ್ವಿಸ್ಟ್​​.. ಅಸಲಿಗೆ ಆಗಿದ್ದೇನು?

Share :

Published January 19, 2024 at 8:41pm

Update January 19, 2024 at 8:43pm

    ದುರ್ಗದ ರಾಷ್ಟ್ರಿಯ ಹೆದ್ದಾರಿ-4ರಲ್ಲಿ ತಿಂಗಳಿಗೆ 3-4 ಅಪಘಾತ

    ಯಾವುದೇ ಕ್ರಮ ಕೈಗೊಳ್ಳದೇ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ

    ಇಂದು ಸಂಬಂಧಿ ತಿಥಿಗೆ ಹೊರಟವರು ಮಸಣ ಸೇರಿದ್ರು!

ಚಿತ್ರದುರ್ಗ: ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಅಪಘಾತವೊಂದು ಮಗು ಸೇರಿ ಒಂದೇ ಕುಟುಂಬದ ಮೂವರನ್ನ ಬಲಿಪಡೆದಿದೆ. ಇಡೀ ಕುಟುಂಬ ಸಂಬಂಧಿಯ ತಿಥಿಗೆಂದು ಬೆಂಗಳೂರಿನಿಂದ ಹೊಸಪೇಟೆ ಕಡೆಗೆ ಹೊರಟಿತ್ತು. ಆದ್ರೆ, ಚಿತ್ರದುರ್ಗದ ಹೈವೇನಲ್ಲಿ ಯಮಪಾಶ ಹಿಡಿದು ಕಾದು ಕುಳಿತಿದ್ದ ಜವರಾಯ ಅಟ್ಟಹಾಸ ಮೆರೆದೇ ಬಿಟ್ಟಿದ್ದಾನೆ.

ಎರಡು ವರ್ಷದ ಮಗು ಸೇರಿ ಮೂವರ ದುರ್ಮರಣ

ಕೋಟೆ ನಾಡು ಚಿತ್ರದುರ್ಗದ ಬಳಿ ಜವರಾಯ ಇಂದು ಬೆಳ್ಳಂಬೆಳಿಗ್ಗೆ ಮತ್ತೆ ಅಟ್ಟಹಾಸ ಮೆರೆದಿದ್ದಾನೆ. ಬೆಂಗಳೂರಿನಿಂದ ಹೊಸಪೇಟೆಗೆ ಸಂಬಂಧಿಯ ತಿಥಿಗೆ ಹೊರಟಿದ್ದವರು ಮಸಣ ಸೇರಿದ್ದಾರೆ. ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ. ರಸ್ತೆಯಲ್ಲಿ ಮುಂದೆ ಚಲಿಸುತ್ತಿದ್ದ ಬೃಹತ್ ಟ್ಯಾಂಕರ್​ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಎರಡು ವರ್ಷದ ಕಂದ ಯಶಸ್ ಕೂಡ ಸಾವಿನ ಕದ ತಟ್ಟಿದ್ದಾನೆ. ತನ್ನ ಮಗನನ್ನು ಕಳೆದುಕೊಂಡ ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ. ಚಿತ್ರದುರ್ಗದ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದ್ದು, ಘಟನಾ ಸ್ಥಳಕ್ಕೆ ಸಿಪಿಐ ಮುದ್ದುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೆದ್ದಾರಿಯಲ್ಲಿ ಜವರಾಯ

ಬೆಂಗಳೂರಿನಿಂದ ಹೊಸಪೇಟೆಗೆ ತಿಥಿ ಕಾರ್ಯಕ್ಕೆ ಹೊರಟ್ಟಿದ್ದಾಗೆ ಈ ದುರ್ಘಟನೆ ಸಂಭವಿಸಿದೆ. ಚಿತ್ರದುರ್ಗದ ಮದಕರಿಪುರ ಹೊಸ ಹೈವೇ ಬ್ರೀಡ್ಜ್ ಬಳಿ ಅಪಘಾತ ನಡೆದಿದ್ದು, ಬೆಂಗಳೂರು ಮೂಲದ 55 ವರ್ಷದ ನಿರ್ಮಲ, 40 ವರ್ಷದ ವಿನುತ, 2 ವರ್ಷದ ಪುಟ್ಟ ಕಂದ ಯಶಸ್ ಉಸಿರು ಚೆಲ್ಲಿದ್ದಾರೆ. ಇನ್ನೂ, ಅಪಘಾತದಲ್ಲಿ 37 ವರ್ಷದ ಫಣಿರಾಜು, 27 ವರ್ಷದ ರಶ್ಮಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನ ಬಸವೇಶ್ವರ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೂ, ಆಸ್ಪತ್ರೆ ಮುಂದೆ ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ.

ಅಪಘಾತವಾಗ್ತಿದ್ರೂ ಕ್ರಮ ಕೈಗೊಳ್ಳದ ಹೆದ್ದಾರಿ ಪ್ರಾಧಿಕಾರ..!

ಇನ್ನೂ ಈ ಹೆದ್ದಾರಿ ನಿರ್ಮಾಣವಾದ ಮೇಲೆ ಪದೇ ಪದೇ ಈ ರೀತಿಯ ಅಪಘಾತಗಳು ಸಂಭವಿಸುತ್ತಾನೇ ಇವೆ. ಈ ಸ್ಥಳದಲ್ಲೇ ಕಳೆದ ತಿಂಗಳು ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ರು. ಈ ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದು, ಅಪಘಾತಗಳಿಗೆ ಕಾರಣ ಏನು ಅನ್ನೋದನ್ನು ಹುಡುಕಿ ಸಮಸ್ಯೆ ಬಗೆ ಹರಿಸಿ, ಮತ್ತೆ ಇಂತಹ ದುರ್ಘಟನೆ ಸಂಭವಿಸದಂತೆ ತಡೆಯಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾರಿನವರ ತಪ್ಪೋ, ಟ್ಯಾಂಕರ್​ನವರ ತಪ್ಪೋ ಗೊತ್ತಿಲ್ಲ, ಆದ್ರೆ, ಸಂಬಂಧಿಯ ತಿಥಿ ಕಾರ್ಯಕ್ಕೆ ಹೊರಟವರು ಮಸಣ ಸೇರಿದ್ದು ಮಾತ್ರ ನಿಜಕ್ಕೂ ದುರಂತ.

ಭೀಕರ ಕಾರ್​​ ಅಪಘಾತದಲ್ಲಿ ಮೂವರು ಸಾವು ಕೇಸ್​ಗೆ ಟ್ವಿಸ್ಟ್​​.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/01/Chitradurga-11.jpg

Load More