/newsfirstlive-kannada/media/post_attachments/wp-content/uploads/2025/03/RCB-win.jpg)
ಕೋಲ್ಕತ್ತಾದ ಈಡನ್ ಗಾರ್ಡನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ. ಈ ಮೂಲಕ ಆರ್‌ಸಿಬಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕೊಡಲಿ ಪೆಟ್ಟು ನೀಡಿದೆ.
ಇನ್ನು, ಆರ್‌ಸಿಬಿ 2025ರ ಐಪಿಎಲ್ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಆರ್‌ಸಿಬಿ 2ನೇ ಸ್ಥಾನದಲ್ಲಿದೆ. ಆರ್‌ಸಿಬಿ ಗೆಲುವಿನ ಪ್ರಮುಖ ಐದು ಕಾರಣಗಳು ಹೀಗಿವೆ.
ಕೃನಾಲ್ ಪಾಂಡ್ಯ ಮೋಡಿ
ಐಪಿಎಲ್ ಹರಾಜಿನಲ್ಲಿ ಅನುನವಿ ಕೃನಾಲ್ ಪಾಂಡ್ಯ ಅವರನ್ನು ಆರ್‌ಸಿಬಿ ಖರೀದಿ ಮಾಡಿತ್ತು. ಮೊದಲ ಪಂದ್ಯದಲ್ಲೇ ಕೃನಾಲ್ ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು. ತಮ್ಮ ನೈಜ ಸ್ಪಿನ್ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಿದ್ರು. ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಅವರಿಗೆ ಖೆಡ್ಡಾ ತೋಡಿ ಆರ್ಸಿಬಿಯನ್ನು ಡೇಜರಸ್ ಜೋನ್ನಿಂದ ಪಾರು ಮಾಡಿದರು.
ಭರ್ಜರಿ ಕಮ್ಬ್ಯಾಕ್
ಮೊದಲ 10 ಓವರ್‌ಗಳಲ್ಲಿ ಆರ್‌ಸಿಬಿ 10.70 ಸರಾಸರಿಯಲ್ಲಿ ರನ್ ನೀಡಿತು. ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿದ ಆರ್‌ಸಿಬಿ ಬೌಲರ್ಗಳು 11 ರಿಂದ 20 ಓವರ್‌ಗಳಲ್ಲಿ 6.7 ದರದಲ್ಲಿ ರನ್ ನೀಡಿ 6 ವಿಕೆಟ್ ಕಿತ್ತರು. ಕೊನೆಯ ನಾಲ್ಕು ಓವರ್‌ಗಳಲ್ಲಿ ಕೇವಲ 23 ರನ್ ನೀಡಿದ್ದು ಗೆಲುವಿಗೆ ಮತ್ತೊಂದು ಕಾರಣ.
ಸುಯೇಶ್ ಶರ್ಮಾ ಇಂಪ್ಯಾಕ್ಟ್
ಇನ್ನು, ಆರ್‌ಸಿಬಿ ತಂಡದ ಪರ ಸುಯೇಶ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಂಡರು. ಸುಯೇಶ್ ತನ್ನ ಬೌಲಿಂಗ್ ಮ್ಯಾಜಿಕ್ ಮಾಡಿದ್ರು. ಸ್ಫೋಟಕ ಬ್ಯಾಟರ್ ಆಂಡ್ರೋ ರಸೆಲ್ಗೆ ಖೆಡ್ಡಾ ತೋಡಿದರು.
ಭರ್ಜರಿ ಓಪನಿಂಗ್
ಆರ್‌ಸಿಬಿ ತಂಡದ ಪರ ಬ್ಯಾಟರ್ಗಳು ಅದ್ಭುತ ಬ್ಯಾಟಿಂಗ್ ಮಾಡಿದರು. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲೂ ಅದ್ಭುತ ಫಾರ್ಮ್ ಮುಂದುವರಿಸಿದರು. ವಿರಾಟ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಫಿಲ್ ಸಾಲ್ಟ್ ಆರ್‌ಸಿಬಿಗೆ ಭರ್ಜರಿ ಓಪನಿಂಗ್ ನೀಡಿದರು. ಈ ಜೋಡಿ ಆಟವೇ ಆರ್‌ಸಿಬಿ ದಿಕ್ಕನ್ನು ಬದಲಾಯಿಸಿತು.
ಸಮರ್ಥ ನಾಯಕತ್ವ
18ನೇ ಸೀಸನ್ನಲ್ಲಿ ಆರ್‌ಸಿಬಿ ತಂಡವನ್ನು ಕ್ಯಾಪ್ಟನ್ ರಜತ್ ಪಾಟಿದಾರ್ ಲೀಡ್ ಮಾಡುತ್ತಿದ್ದಾರೆ. ರಜತ್ ಪಾಟಿದಾರ್ ತಮ್ಮಲ್ಲಿರೋ ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದರು. ಇವರು ಬೌಲಿಂಗ್ನಲ್ಲಿ ಮಾಡಿದ ಮೇಜರ್ ಚೇಂಜಸ್ ತಂಡದ ಗೆಲುವಿಗೆ ಕಾರಣವಾಯ್ತು.
ಇದನ್ನೂ ಓದಿ:6,6,6,6,4,4,4,4,4,4,4; ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್; ಸಿಡಿಲಬ್ಬರದ ಅರ್ಧಶತಕ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ