IND vs AUS: ಸಿಡ್ನಿ ಟೆಸ್ಟ್​​ ಹೀನಾಯ ಸೋಲಿಗೆ 5 ಕಾರಣ ರಿವೀಲ್..!

author-image
Ganesh
Updated On
IND vs AUS: ದುಃಖದಲ್ಲಿ ಟೀಂ ಇಂಡಿಯಾ.. ಕಪ್ಪುಪಟ್ಟಿ ಧರಿಸಿ ಮೈದಾನಕ್ಕೆ ಇಳಿದ ಆಟಗಾರರು..
Advertisment
  • ಸಿಡ್ನಿ ಸಮರದಲ್ಲಿ ಟೀಮ್​ ಇಂಡಿಯಾಗೆ ಮುಖಭಂಗ
  • WTC​ ಫೈನಲ್​ ಎಂಟ್ರಿಯ ಕನಸು ನುಚ್ಚು ನೂರು
  • 6 ವಿಕೆಟ್​ಗಳ ಹೀನಾಯ ಸೋಲಿಗೆ ಕಾರಣ ಏನು..?

ಸಿಡ್ನಿ ಸಮರದಲ್ಲೂ ಟೀಮ್​ ಇಂಡಿಯಾ ಹೀನಾಯ ಮುಖಭಂಗ ಅನುಭವಿಸಿದೆ. ಅಂತಿಮ ಟೆಸ್ಟ್​ನಲ್ಲಿ ಸೋಲುಂಡ ಟೀಮ್​ ಇಂಡಿಯಾ ಬಾರ್ಡರ್​-ಗವಾಸ್ಕರ್​ ಸರಣಿಯನ್ನ ಕೈ ಚೆಲ್ಲಿದೆ. ಇದ್ರೊಂದಿಗೆ ಟೀಮ್​ ಇಂಡಿಯಾದ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಎಂಟ್ರಿಯ ಕನಸು ನುಚ್ಚುನೂರಾಗಿದೆ.

ಸಿಡ್ನಿ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ನಲ್ಲಿ ಫ್ಲಾಪ್​ ಆದ್ರೂ ಬೌಲಿಂಗ್​ನಲ್ಲಿ ಟೀಮ್​ ಇಂಡಿಯಾ ದರ್ಬಾರ್ ನಡೆಸಿತ್ತು. ಆಸಿಸ್​ ಪಡೆಯನ್ನ ಕೇವಲ 181 ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಬೌಲರ್ಸ್​ ಯಶಸ್ವಿಯಾಗಿದ್ರು. ಅಲ್ಪ ಮೊತ್ತಗಳಿಸಿದ್ರೂ 4 ರನ್​ಗಳ ಲೀಡ್​ ಸಿಕ್ಕಿತ್ತು. 2ನೇ ಇನ್ನಿಂಗ್ಸ್​ನಲ್ಲೂ​ ಟೀಮ್​ ಇಂಡಿಯಾ ಬ್ಯಾಟರ್ಸ್​​ ಸಿಡಿದೇಳಲಿಲ್ಲ. ಕಾಂಗರೂಗಳ ಆರ್ಭಟದ ಮುಂದೆ ಮಂಡಿಯೂರಿಬಿಟ್ರು.

ಕಾರಣಗಳು:

ಸಿಗಲಿಲ್ಲ ಗುಡ್​ ಸ್ಟಾರ್ಟ್​: ಸಿಡ್ನಿ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಸೋಲಿಗೆ ಮೊದಲ ಮುನ್ನುಡಿ ಬರೆದಿದ್ದೇ ಓಪನರ್ಸ್​. ಮೊದಲ ಇನ್ನಿಂಗ್ಸ್​ನಲ್ಲೂ ಗುಡ್​ ಸ್ಟಾರ್ಟ್​ ಸಿಗಲಿಲ್ಲ. ಅಟ್ಲೀಸ್ಟ್​​ 2ನೇ ಇನ್ನಿಂಗ್ಸ್​ನಲ್ಲಾದ್ರೂ ಒಂದೊಳ್ಳೆ ಆರಂಭ ಸಿಕ್ಕಿದ್ರೆ ಪಂದ್ಯದಲ್ಲಿ ಟೀಮ್​ ಇಂಡಿಯಾ ಪಾರಮ್ಯ ಮೆರೆಯಬಹುದಿತ್ತು. ಎರಡನೇ ಇನ್ನಿಂಗ್ಸ್​ನಲ್ಲೂ ಅದೇ ರಾಗ ಅದೇ ಹಾಡು. ಮೊದಲ ಇನ್ನಿಂಗ್ಸ್​ನಲ್ಲಿ 11, 2ನೇ ಇನ್ನಿಂಗ್ಸ್​ನಲ್ಲಿ 42 ರನ್. ಗುಡ್​ ಸ್ಟಾರ್ಟ್​ ಸಿಗದೇ ಇದ್ದಿದ್ದೇ ದೊಡ್ಡ ಹಿನ್ನಡೆಯಾಯ್ತು.

ಇದನ್ನೂ ಓದಿ:ವಿರಾಟ್ ಕೊಹ್ಲಿ ವಿರುದ್ಧ ಹರಿಹಾಯ್ದ ಇರ್ಫಾನ್ ಪಠಾಣ್; ಅಷ್ಟಕ್ಕೂ ಆಗಿದ್ದೇನು?

ಶೈನ್​​ ಆಗದ ಗಿಲ್​​: ರನ್​ಗಳಿಕೆಗೆ ಪರದಾಟ ನಡೆಸ್ತಿದ್ದ ರೋಹಿತ್​ ಶರ್ಮಾ ಮುನ್ನ ಬಿಗ್​ ಡಿಸಿಷನ್​ ತೆಗೆದುಕೊಂಡು ಅಂತಿಮ ಟೆಸ್ಟ್​ನಿಂದ ಹೊರಗುಳಿದಿದ್ದರು. ನನ್ನ​ ಬ್ಯಾಟಿಂದ ರನ್​ ಬರ್ತಿಲ್ಲ. ನೀನು ಆಡು ಅಂತಾ ಗಿಲ್​ಗೆ ಚಾನ್ಸ್​ ನೀಡಿದ್ರು. ಪ್ಲೇಯಿಂಗ್​ ಇಲೆವೆನ್​ಗೆ ಎಂಟ್ರಿ ಕೊಟ್ಟ ಗಿಲ್​ ಶೈನ್​ ಆಗಲೇ ಇಲ್ಲ.

ಕೊಹ್ಲಿ ಕೆರಳಲಿಲ್ಲ: ಕೊಹ್ಲಿ ಬ್ಯಾಟಿಂಗ್​ ಮರೆತು ಬಿಟ್ಟಂತಿದೆ. ಸೀನಿಯರ್​ ಆಟಗಾರನಾಗಿ ಮುಂದೆ ನಿಂತು ಹೋರಾಡಬೇಕಿದ್ದ ಕೊಹ್ಲಿ, ಮೊದಲ ಇನ್ನಿಂಗ್ಸ್​ನಲ್ಲಿ 17, 2ನೇ ಇನ್ನಿಂಗ್ಸ್​ನಲ್ಲಿ 6 ರನ್​ಗಳಿಸಿ ಔಟಾದರು.

ಇದನ್ನೂ ಓದಿ:ಹಿಮ್ಮಡಿಗಳು ಬಿರುಕು ಬಿಡುತ್ತಿವೆಯೇ..? ನಿಮ್ಮ ಪಾದಗಳ ಸಮಸ್ಯೆಗೆ ಪರಿಹಾರ ಏನು?

ಪರದಾಡಿದ ಆಲ್​​ರೌಂಡರ್ಸ್​: ಮೆಲ್ಬೋರ್ನ್​​​ನಂತೆ ಸಿಡ್ನಿಯಲ್ಲೂ ಮೂವರು ಆಲ್​​ರೌಂಡರ್​ಗಳೊಂದಿಗೆ ಟೀಮ್​ ಇಂಡಿಯಾ ಕಣಕ್ಕಿಳಿದಿತ್ತು. ಆಲ್​​​ರೌಂಡರ್ಸ್​ ಬ್ಯಾಟಿಂಗ್​​ನಲ್ಲೂ ಮಿಂಚಲಿಲ್ಲ. ಬೌಲಿಂಗ್​ನಲ್ಲೂ ಸೌಂಡ್​ ಮಾಡ್ಲಿಲ್ಲ. ನಿತೀಶ್​ ಕುಮಾರ್​ ರೆಡ್ಡಿ 2 ವಿಕೆಟ್​ ಕಬಳಿಸಿದ್ದು ಬಿಟ್ರೆ, ವಾಷಿಂಗ್ಟನ್​ ಸುಂದರ್​, ರವಿಂದ್ರ ಜಡೇಜಾ ಸಿಡ್ನಿ ಟ್ರ್ಯಾಕ್​ನಲ್ಲಿ ಪರದಾಡಿದರು.

ಬುಮ್ರಾ ಇಲ್ಲದೇ ಧಮ್​ ಇಲ್ಲ: ಟೀಮ್​ ಇಂಡಿಯಾದ ಬೌಲಿಂಗ್​ ಅಟ್ಯಾಕ್​ನಲ್ಲಿ ಧಮ್​ ಇಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್​ ಆಯ್ತು. ಬುಮ್ರಾ ಬಲದೊಂದಿಗೆ ಆಸ್ಟ್ರೇಲಿಯಾ ತಂಡವನ್ನು ಫಸ್ಟ್​ ಇನ್ನಿಂಗ್ಸ್​ನಲ್ಲಿ 181 ರನ್​ಗಳಿಗೆ ಭಾರತ ತಂಡ ಕಟ್ಟಿ ಹಾಕಿತ್ತು. ಗಾಯಗೊಂಡಿದ್ದ ಬುಮ್ರಾ 2ನೇ ಇನ್ನಿಂಗ್ಸ್​ನಲ್ಲಿ ಕಣಕ್ಕಿಳಿಯಲಿಲ್ಲ. ಬುಮ್ರಾ ಇಲ್ಲದ ಬೌಲಿಂಗ್​ ದುರ್ಬಲವಾಗಿ ಬಿಡ್ತು. 162 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಆಸ್ಟ್ರೇಲಿಯಾ ಮೊದಲ 3 ಓವರ್​ಗಳಲ್ಲೇ 30 ಚಚ್ಚಿರೋದು ಬೆಸ್ಟ್​ ಎಕ್ಸಾಂಪಲ್​.

ಇದನ್ನೂ ಓದಿ:ರಾಜಕೀಯ ಸಂಕ್ರಾಂತಿ; ಇಂದು ದೆಹಲಿಗೆ ಡಿ.ಕೆ ಶಿವಕುಮಾರ್ ಭೇಟಿ.. ಕಾರಣ ಇದೆನಾ?

ಕನ್ನಡಿಗ ಪ್ರಸಿದ್ಧ್​ ಕೃಷ್ಣ ಹೊರತುಪಡಿಸಿದ್ರೆ, 2ನೇ ಇನ್ನಿಂಗ್ಸ್​ನಲ್ಲಿ ಉಳಿದ್ಯಾವ ಬೌಲರ್​ ಕೂಡ ಎಫೆಕ್ಟಿವ್​ ಅನ್ನಿಸಲಿಲ್ಲ. ಸಿರಾಜ್​, ನಿತೀಶ್​ ಕುಮಾರ್​ ರೆಡ್ಡಿ ಟಿ20ಯಂತೆ 5ಕ್ಕೂ ಹೆಚ್ಚಿನ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟರು. ಆನ್​​ಫೀಲ್ಡ್​ನಲ್ಲಿ ಮಾಡಿದ ಸಾಲು ಸಾಲು ಮಿಸ್ಟೇಕ್​ಗಳು ಟೀಮ್​ ಇಂಡಿಯಾವನ್ನ ಸಿಡ್ನಿ ಟೆಸ್ಟ್​ನಲ್ಲಿ ಮುಗ್ಗರಿಸುವಂತೆ ಮಾಡಿವೆ. 6 ವಿಕೆಟ್​ಗಳ ಸೋಲಿನೊಂದಿಗೆ ಸರಣಿಯೂ ಆಸ್ಟ್ರೇಲಿಯಾ ಪಾಲಾಗಿದೆ. ಈ ಸರಣಿ ಸೋಲು ಟೀಮ್​ ಇಂಡಿಯಾಗೊಂದು ಪಾಠ.

ಇದನ್ನೂ ಓದಿ:ರಾಜಕೀಯ ಸಂಕ್ರಾಂತಿ; ಇಂದು ದೆಹಲಿಗೆ ಡಿ.ಕೆ ಶಿವಕುಮಾರ್ ಭೇಟಿ.. ಕಾರಣ ಇದೆನಾ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment