/newsfirstlive-kannada/media/post_attachments/wp-content/uploads/2025/06/cm-siddu4.jpg)
ಬೆಂಗಳೂರು: ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಚಿನ್ನಸ್ವಾಮಿಯಲ್ಲಿ ಬುಧುವಾರ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಕಮಿಷನರ್ ಸೇರಿ 5 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ:ಬಿ.ದಯಾನಂದ್ ತಲೆದಂಡ ಬೆನ್ನಲ್ಲೇ ಹೊಸ ಆಯುಕ್ತರ ನೇಮಕ.. ನೂತನ ಪೊಲೀಸ್ ಕಮಿಷನರ್ ಇವರೇ..!
ಪೊಲೀಸ್ ಕಮಿಷನರ್ ಬಿ.ದಯಾನಂದ್, ಹೆಚ್ಚುವರಿ ಕಮಿಷನರ್ ವಿಕಾಸ್ ಕುಮಾರ್, ಸೆಂಟ್ರಲ್ ಡಿಸಿಪಿ ಶೇಖರ್ ತೆಕ್ಕಣ್ಣನವರ್, ಎಸಿಪಿ ಬಾಲಕೃಷ್ಣ, ಇನ್‌ಸ್ಪೆಕ್ಟರ್ ಗಿರೀಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಪ್ ಗೆದ್ದಿದ್ದು ಆರ್‌ಸಿಬಿ.. ಸಂಭ್ರಮಿಸಬೇಕಾದವ್ರು ಅಭಿಮಾನಿಗಳು.. ಈ ನಡುವೆ ಮೈಲೇಜ್ ತೆಗೆದುಕೊಳ್ಳೋದಕ್ಕೆ ಮುಂದಾಗಿದ್ದು ರಾಜಕೀಯ ಮುಖಂಡರು. ಕಾಲ್ತುಳಿತ ದುರಂತಕ್ಕೆ ಪೊಲಿಟಿಕಲ್ ಹಪಾಹಪಿಯೂ ಕಾರಣವಾಗಿರೋವಾಗ ಪೊಲೀಸ್ ಇಲಾಖೆಯ ಮೇಲಷ್ಟೇ ತಪ್ಪು ಹೊರಿಸಿ ಐವರು ಪೊಲೀಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ. ಇಲ್ಲಿ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನ ಹರಕೆಯ ಕುರಿ ಮಾಡಿ ಬಿಡ್ತಾ ಎಂಬ ಪ್ರಶ್ನೆ ಮೂಡಿದೆ. ಚಿನ್ನಸ್ವಾಮಿ ದುರಂತಕ್ಕೆ ಪೊಲೀಸ್ ಇಲಾಖೆ ಮಾತ್ರವೇ ಹೊಣೆನಾ ಅಂತ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾದ FIR ಸಿಐಡಿಗೆ ವರ್ಗಾವಣೆ -ಕಾಲ್ತುಳಿತದ ವಿರುದ್ಧ ಸರ್ಕಾರ 6 ಆದೇಶ
ಪೊಲೀಸರ ತಲೆದಂಡಕ್ಕೆ ಸರ್ಕಾರ ಕೊಟ್ಟ ಕಾರಣವೇನು?
ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ಕಾರಣಗಳನ್ನ ನೀಡಿದೆ. ಜೂ.3ರಂದೇ ಕಮಿಷನರ್ ಬಳಿ ಅನುಮತಿ ಕೇಳಲಾಗಿತ್ತು. ಅನುಮತಿ ನಿರಾಕರಿಸಿ ಲಿಖಿತ ಉತ್ತರ ನೀಡುವಲ್ಲಿ ವಿಫಲವಾಗಿದೆ. ಆರ್‌ಸಿಬಿ ಮೇಲೆ, ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಡಿಎನ್ಎ, ಕೆಎಸ್ಸಿಎ ಅನ್ನು ಯಾರೆಲ್ಲ ಪ್ರತಿನಿಧಿಸುತ್ತಾರೋ ಅವರನ್ನ ಅರೆಸ್ಟ್ ಮಾಡಲು ಸರ್ಕಾರ ಸೂಚನೆ ನೀಡಿದೆ. ಜೊತೆಗೆ RCB, DNA, KSCA ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಇನ್ನು, ಕಾಲ್ತುಳಿತ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದರ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಅಮಾನತಿಗೆ ಸರ್ಕಾರ ಕೊಟ್ಟ ಕಾರಣವೇನು?
RCB ಸಿಇಓ ಜೂ.3ರಂದೇ ಕಮಿಷನರ್‌ಗೆ ವಿಕ್ಟರಿ ಪರೇಡ್‌ಗೆ ಅನುಮತಿ ಕೇಳಿದ್ದರು. ಪೊಲೀಸ್ ಕಮಿಷನರ್ ಅನುಮತಿ ನಿರಾಕರಿಸಿ ಲಿಖಿತ ಉತ್ತರವನ್ನ ನೀಡಿರಲಿಲ್ಲ. ಆದ್ರೆ ಆರ್‌ಸಿಬಿ, KSCA (Karnataka State Cricket Association) ಯಿಂದ ಚಿನ್ನಸ್ವಾಮಿಗೆ ಅಭಿಮಾನಿಗಳ ಆಹ್ವಾನಿಸಿ ಪೋಸ್ಟ್ ಶೇರ್ ಮಾಡಲಾಗಿದೆ. ಅಲ್ಲದೇ ಟಿಕೆಟ್, ಪಾಸ್ ಯಾವುದೇ ಸಾಮಾನ್ಯ ಪ್ರಕ್ರಿಯೆಯನ್ನು ಮಾಡಿರಲಿಲ್ಲ. ಕಾರ್ಯಕ್ರಮ ಆಯೋಜನೆಯಲ್ಲಿ ಅಧ್ವಾನ, ಸರಿಯಾಗಿ ಮಾಹಿತಿ ಹಂಚಿಕೊಂಡಿರಲಿಲ್ಲ. ಈ ರೀತಿ ಪರಿಸ್ಥಿತಿಯಿದೆ ಅನ್ನೋದನ್ನ ಮೇಲಾಧಿಕಾರಿಗಳ ಗಮನಕ್ಕೂ ತಂದಿಲ್ಲ. ಈ ಎಲ್ಲಾ ಕಾರಣಗಳಿಂದ ಪರಿಸ್ಥಿತಿ ಕೈಮೀರಿ, ನಿಯಂತ್ರಣ ತಪ್ಪಿ, ಭಾರೀ ದುರಂತ ಸಂಭವಿಸಿದೆ ಎಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ