newsfirstkannada.com

ಅಭಿಮಾನಿಗಳ ವಿಶ್ವಕಪ್​ ಕನಸು ನುಚ್ಚು ನೂರು; ಬಲಿಷ್ಠ ಟೀಂ ಇಂಡಿಯಾ ಸೋಲಿಗೆ 7 ಕಾರಣ

Share :

Published November 20, 2023 at 12:35pm

  ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಸೋಲು

  ಫೈನಲ್​ ಪಂದ್ಯದಲ್ಲಿ ರೋಹಿತ್​ ಪಡೆ ಎಡವಿದ್ದೆಲ್ಲಿ..?

  ‘ಅಜೇಯ’ ಓಟ ನಡೆಸಿದ ತಂಡ ಸೋತಿದ್ದು ಎಲ್ಲಿ..?

ಆಸ್ಟ್ರೇಲಿಯಾ ವಿರುದ್ಧ ಸೋತಾಗಿದೆ. ಅಪಾರ ಅಭಿಮಾನಿಗಳ ಕಪ್​ ಕನಸೂ ನುಚ್ಚುನೂರಾಗಿದೆ. ಟೂರ್ನಿಯಲ್ಲಿ ಅಜೇಯ ಓಟ ನಡೆಸಿದ ಟೀಮ್​ ಇಂಡಿಯಾ ಫೈನಲ್​ ಫೈಟ್​ನಲ್ಲಿ ಎಡವಿದ್ದೆಲ್ಲಿ? ಟೀಮ್​ ಇಂಡಿಯಾದ ಸೋಲಿಗೆ ಕಾರಣ ಏನು? ನಮೋ ಮೈದಾನದಲ್ಲಿ ರೋಹಿತ್​ ಪಡೆ ಮಾಡಿದ ಮಿಸ್ಟೇಕ್​​ಗಳು ಏನು?

ಅಸಂಖ್ಯ ಅಭಿಮಾನಿಗಳ ಹೃದಯ ಚೂರು ಚೂರಾಗಿದೆ. ಮಾಡಿದ ಪ್ರಾರ್ಥನೆ ಎಲ್ಲಾ ವ್ಯರ್ಥವಾಗಿದೆ. ಕಳೆದ 2 ತಿಂಗಳಿಂದ ಕಟ್ಟಿಕೊಂಡಿದ್ದ ಕನಸು ನುಚ್ಚು ನೂರಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಫೈನಲ್​ ಸೋಲು ಇಡೀ ಭಾರತದ ಖುಷಿಯನ್ನ ಕಸಿದಿದೆ.

ಅಜೇಯ ಓಟ ನಡೆಸಿದ ಟೀಮ್​ ಇಂಡಿಯಾ ಎಡವಿದ್ದೆಲ್ಲಿ?

ನಮೋ ಅಂಗಳದಲ್ಲಿ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೋತ ಮೇಲೆ ಎಲ್ಲರನ್ನೂ ಕಾಡ್ತಿರುವ ಪ್ರಶ್ನೆಯಿದು. ಲೀಗ್​ ಹಂತದಲ್ಲಿ ಟೀಮ್​ ಇಂಡಿಯಾ ಸೋಲನ್ನೇ ಕಾಣಲಿಲ್ಲ.. ಸೆಮಿಫೈನಲ್​ ಪಂದ್ಯದಲ್ಲೂ ಅದ್ಭುತವಾದ ಜಯ ಸಾಧಿಸಿತು. ಹೀಗಾಗಿ ಫೈನಲ್​ ಫೈಟ್​ನಲ್ಲಿ ಗೆದ್ದೆ ಗೆಲ್ಲುತ್ತೆ ಅನ್ನೋ ಆಶಾಬಾವ ಎಲ್ಲರದ್ದಾಗಿತ್ತು. ಆದ್ರೆ, ಆಗಿದ್ದೇ ಬೇರೆ. ಇದಕ್ಕೆಲ್ಲಾ ಆನ್​ಫೀಲ್ಡ್​ ಮಾಡಿದ ತಪ್ಪುಗಳೇ ಕಾರಣ.

ಕಾರಣ ನಂ.1: ಟೀಮ್​ ಇಂಡಿಯಾಗೆ ಹಿನ್ನಡೆಯಾದ ಟಾಸ್​

ಟೀಮ್​ ಇಂಡಿಯಾದ ಸೋಲಿನಲ್ಲಿ ಟಾಸ್​ ಪ್ರಮುಖ ಪಾತ್ರ ನಿರ್ವಹಿಸಿತು. ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದ್ರೆ ಟೀಮ್​ ಇಂಡಿಯಾ ಗೆಲುವಿನ ಅವಕಾಶ ಇತ್ತು. ಪಿಚ್​ ಆರಂಭದಲ್ಲಿ ಬೌಲರ್​ಗಳಿಗೆ ಸಹಾಯ ಮಾಡಿತು. ಇದ್ರ ಅಡ್ವಾಂಟೇಜ್​ ಆಸಿಸ್​ ಪಡೆದುಕೊಳ್ತು. ಟೀಮ್​ ಇಂಡಿಯಾ ಬೌಲಿಂಗ್​ ವೇಳೆ ಬೌಲ್​ ಹೆಚ್ಚು ಪುಟಿಯಲೇ ಇಲ್ಲ. ಜೊತೆಗೆ ಡ್ಯೂ ಫ್ಯಾಕ್ಟರ್​ ಕೂಡ ತಂಡಕ್ಕೆ ಹಿನ್ನಡೆಯಾಗಿ ಕಾಡಿತು.

ಕಾರಣ ನಂ.2: ಒತ್ತಡ ನಿರ್ವಹಿಸುವಲ್ಲಿ ವಿಫಲರಾದ ಬ್ಯಾಟ್ಸ್​ಮನ್​ಗಳು​

ಲೀಗ್​ ಹಂತದಲ್ಲಿ ಡೇರ್​ ಡೆವಿಲ್​ ಬ್ಯಾಟಿಂಗ್​ ನಡೆಸಿದ ಟೀಮ್​ ಇಂಡಿಯಾ ಆಟಗಾರರು ಫೈನಲ್​ ಪಂದ್ಯದಲ್ಲಿ ತೀರಾ ಡಿಫೆನ್ಸಿವ್​ ಆಟವಾಡಿದ್ರು. ವಿಕೆಟ್​ಗಳನ್ನ ಕಳೆದುಕೊಂಡಾಗ ಒತ್ತಡಕ್ಕೆ ಸಿಲುಕಿದ್ರು. ವಿಕೆಟ್​ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿ ನಿಧಾನಗತಿಯ ಇನ್ನಿಂಗ್ಸ್​ ಕಟ್ಟಿದ್ರು. ಪ್ರೆಶರ್​ ಹ್ಯಾಂಡೆಲ್​ ಮಾಡುವಲ್ಲಿ ವಿಫಲರಾಗಿ ವಿಕೆಟ್​ ಒಪ್ಪಿಸಿದ್ರು.

ಕಾರಣ ನಂ.3: ಶುಭ್​ಮನ್​, ಶ್ರೇಯಸ್​, ಸೂರ್ಯ ಕುಮಾರ್​ ವೈಫಲ್ಯ

ಟೀಮ್​ ಇಂಡಿಯಾ ಆರಂಭಿಕ ಆಟಗಾರ ಶುಭ್​ಮನ್​ ಗಿಲ್​ ಆರಂಭದಲ್ಲೇ ವಿಕೆಟ್​ ಒಪ್ಪಿಸಿದ್ರು. ಫಾರ್ಮ್​ನಲ್ಲಿದ್ದ ಶ್ರೇಯಸ್​​ ಅಯ್ಯರ್​, ಕೇವಲ 4 ರನ್​ಗಳಿಸಿ ನಿರ್ಗಮಿಸಿದ್ರು. ಅತ್ಯುತ್ತಮ ಇನ್ನಿಂಗ್ಸ್​ ಕಟ್ಟಬಹುದಾಗಿದ್ದ ಚಿನ್ನದಂತಾ ಅವಕಾಶವನ್ನ ಸೂರ್ಯಕುಮಾರ್​ ಯಾದವ್​ ಮಣ್ಣು ಪಾಲು ಮಾಡಿದ್ರು. ಈ ಮೂವರನ್ನ ಟೀಮ್​ ಇಂಡಿಯಾ ಅತಿ ಹೆಚ್ಚು ನೆಚ್ಚಿಕೊಂಡಿತ್ತು. ಆದ್ರೆ, ಇವ್ರೆ ಕೈ ಕೊಟ್ಟಿದ್ದು ಹಿನ್ನಡೆಯಾಯ್ತು.

ಕಾರಣ ನಂ.5: ಬಿಗ್​ ಟಾರ್ಗೆಟ್​​ ಸೆಟ್​ ಮಾಡುವಲ್ಲಿ ವಿಫಲ

ನಮೋ ಮೈದಾನದ ಪಿಚ್​ನಲ್ಲಿ ಟೀಮ್​ ಇಂಡಿಯಾದ ಸೆಟ್​ ಮಾಡಿದ ಟಾರ್ಗೆಟ್​​ ಸವಾಲಿನದ್ದೇನಾಗಿರಲಿಲ್ಲ. ಗೆಲುವಿಗೆ ಇನ್ನೂ 30ರಿಂದ 40 ರನ್​ಗಳು ಹೆಚ್ಚುವರಿ ಅಗತ್ಯವಿದ್ವು ಅನ್ನೋದನ್ನ ಸ್ವತಃ ಕೋಚ್ ರಾಹುಲ್​​ ದ್ರಾವಿಡೇ ಒಪ್ಪಿಕೊಂಡಿದ್ದಾರೆ.

ಕಾರಣ ನಂ.6: ಹೆಡ್​-ಲಬುಶೇನ್​ ಜೊತೆಯಾಟ ಬ್ರೇಕ್​ ಮಾಡುವಲ್ಲಿ ಫೇಲ್​

241 ರನ್​ಗಳ ಸಾದಾರಣ ಟಾರ್ಗೆಟ್​ ನೀಡಿದ್ರೂ, ಟೀಮ್ ಇಂಡಿಯಾ ಬೌಲಿಂಗ್​ ವೇಳೆ ಆರಂಭದಲ್ಲಿ ಮೇಲುಗೈ ಸಾಧಿಸಿತ್ತು. 47 ರನ್​ಗಳಿಸುವಷ್ಟರಲ್ಲಿ ಆಸಿಸ್​​ನ ಟಾಪ್​ ಆರ್ಡರ್​ನ 3 ವಿಕೆಟ್​ ಕಬಳಿಸಿದ್ರು. ಆದ್ರೆ, ಆ ಬಳಿಕ ಜೊತೆಯಾದ ಟ್ರಾವಿಸ್​ ಹೆಡ್​​, ಮಾರ್ನಸ್​ ಲಬುಶೇನ್​ ಜೊತೆಯಾಟವನ್ನ ಬ್ರೇಕ್​ ಮಾಡಲೇ ಇಲ್ಲ.. ಇವರಿಬ್ಬರ ಆಟ ಟೀಮ್​ ಇಂಡಿಯಾವನ್ನ ಸೋಲಿಗೆ ಗುರಿ ಮಾಡಿತು.

ಕಾರಣ ನಂ.7: ಗೆಲ್ಲೋ ಛಲ, ಆತ್ಮವಿಶ್ವಾಸದ ಕೊರತೆ,

ಸಾಧಾರಣ ಟಾರ್ಗೆಟ್​ ಡಿಫೆಂಡ್​ ಮಾಡಿಕೊಳ್ಳುವಲ್ಲಿ ಟೀಮ್​ ಇಂಡಿಯಾ ಎಡವಲು ಮುಖ್ಯವಾದ ಕಾರಣವೇ ಗೆಲುವಿನ ಛಲ ಹಾಗೂ ಆತ್ಮವಿಶ್ವಾಸದ ಕೊರತೆ. ಬೌಲಿಂಗ್​ ಆರಂಭಿಸಿದಾಗಲೇ ವೈಡ್​, ಬೈಸ್​ ರೂಪದಲ್ಲಿ ಆಸಿಸ್​ಗೆ ರನ್​ ಗಿಫ್ಟ್​ ನೀಡಲಾಯ್ತು. ಆಸಿಸ್​​ ಬ್ಯಾಟ್ಸ್​ಮನ್​ ಬೌಂಡರಿಗಳನ್ನ ಸಿಡಿಸಿದಾಗಲೆಲ್ಲಾ ಆಟಗಾರರ ವಿಶ್ವಾಸ ಕುಂದಿದ್ದು ಸ್ಪಷ್ಟವಾಗಿ ತಿಳಿತಿತ್ತು. ಗೆಲ್ಲಬೇಕು ಅನ್ನೋ ಛಲ ಹಾಗೂ ಆತ್ಮವಿಶ್ವಾಸ ಕೊರತೆ ಟೀಮ್​ ಇಂಡಿಯಾ ಮ್ಯಾಸಿವ್​ ಸೆಟ್​ಬ್ಯಾಕ್​ ಆಯ್ತು ಅಂದ್ರೆ ತಪ್ಪಿಲ್ಲ.

ವಿಶೇಷ ವರದಿ: ವಸಂತ್​ ಮಳವತ್ತಿ

ಅಭಿಮಾನಿಗಳ ವಿಶ್ವಕಪ್​ ಕನಸು ನುಚ್ಚು ನೂರು; ಬಲಿಷ್ಠ ಟೀಂ ಇಂಡಿಯಾ ಸೋಲಿಗೆ 7 ಕಾರಣ

https://newsfirstlive.com/wp-content/uploads/2023/11/TEAM_INDIA-17.jpg

Load More