newsfirstkannada.com

ಇಂಗ್ಲೆಂಡ್​​-ಆಸಿಸ್ ಬೋರ್ಡ್​ನಿಂದ BCCI ಈ ಪಾಠ ಕಲಿಯಲೇಬೇಕು.. ಟೀಂ ಇಂಡಿಯಾ ಸೋಲಿಗೆ ಕಾರಣ ಇದೇ..!

Share :

Published January 30, 2024 at 9:48am

Update January 30, 2024 at 10:06am

  ಧೈರ್ಯವಿಲ್ಲದೇ ಮೊದಲ ಟೆಸ್ಟ್​ ಸೋತ ಭಾರತ

  ಇಂಗ್ಲೆಂಡ್​​ ತಂಡಕ್ಕಿರೋ ಧೈರ್ಯ ಭಾರತಕ್ಕೆ ಯಾಕಿಲ್ಲ..?

  ಹಿಂಜರಿಕೆ ಬಿಟ್ಟು ಪರ್ಫೆಕ್ಟ್​​​​​​​​​​​​​​​​​​​​​​​​ ತಂಡ ಆಡಿಸೋದ್ಯಾವಾಗ..?

ಟೀಮ್ ಇಂಡಿಯಾ ಹೈದ್ರಾಬಾದ್ ಟೆಸ್ಟ್ ಸೋತಿದೆ. ಪರಾಭವದ ಬಳಿಕ ಸೋಲಿಗೆ ನಾನಾ ಕಾರಣಗಳನ್ನು ಹುಡುಕಲಾಗ್ತಿದೆ. ಆದರೆ ರೋಹಿತ್​ ಪಡೆಯ ಹಿನ್ನಡೆಗೆ ಅಸಲಿ ಕಾರಣ ಏನು ಗೊತ್ತಾ? ಅದೇ ಹಿಂಜರಿಕೆ. ಭಾರತ ತಂಡದಲ್ಲಿ ಧೈರ್ಯ ಅನ್ನೋದೇ ಮಾಯವಾಗಿದೆ. ಧೈರ್ಯ ಇದ್ದಿದ್ರೆ ತವರಿನಲ್ಲಿ ಇಂಡಿಯನ್​​​​​​​ ಕಲಿಗಳಿಗೆ ಇಂತಹ ಪರಿಸ್ಥಿತಿ ಬರ್ತಾನೆ ಇರ್ಲಿಲ್ಲ.

ಹೈದ್ರಾಬಾದ್​​ ಟೆಸ್ಟ್​ನಲ್ಲಿ ಭಾರತೀಯ ಹುಲಿಗಳ ಆಟ ನಡೀಲಿಲ್ಲ. ಇಂಗ್ಲೆಂಡ್ ತಂಡ, ಭಾರತವನ್ನು ಬಡಿದು ಬಾಯಿಗೆ ಹಾಕಿಕೊಳ್ತು. ಆ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡೋ ಓವರ್​ ಕಾನ್ಫಿಡೆನ್ಸ್​​ನಲ್ಲಿದ್ದ ರೋಹಿತ್​​ ಶರ್ಮಾ ಪಡೆಗೆ ತಕ್ಕ ಶಾಸ್ತಿ ಆಗಿದೆ. ಹಾಗಾದ್ರೆ 2ನೇ ಟೆಸ್ಟ್​ ಕಥೆ ಏನು? ವಿಶಾಖಪಟ್ಟಣಂ ಟೆಸ್ಟ್ ಗೆಲ್ಲಬೇಕಾದ್ರೆ ಆದಷ್ಟು ಬೇಗ ಮಿಸ್ಟೇಕ್ಸ್ ತಿದ್ದಿಕೊಳ್ಳಬೇಕಿದೆ. ಆಗ ಮಾತ್ರ ಕಮ್​ಬ್ಯಾಕ್ ಸಾಧ್ಯ. ಅದು ಸಾಧ್ಯವಾಗಬೇಕಾದ್ರೆ ರೋಹಿತ್​​​​​ ಆ್ಯಂಡ್​​ ಗ್ಯಾಂಗ್ ಮೊದಲು ಧೈರ್ಯದಿಂದ ಮುನ್ನುಗ್ಗಬೇಕು.

ಇಂಗ್ಲೆಂಡ್​​ ತಂಡಕ್ಕಿರೋ ಧೈರ್ಯ ಭಾರತಕ್ಕೆ ಯಾಕೆ ಇಲ್ಲ..?
ಮೊದಲ ಟೆಸ್ಟ್​​ನಲ್ಲಿ ಭಾರತ ಮುಗ್ಗರಿಸಲು ಕಾರಣ ಇಂಗ್ಲೆಂಡ್​​​ ತೋರಿದ ಧೈರ್ಯ. ಹೌದು, ಕ್ಯಾಪ್ಟನ್ ಬೆನ್​ ಸ್ಟೋಕ್ಸ್​​​​​​​ ಒಬ್ಬೆ ಒಬ್ಬ ಸ್ಪೆಷಲಿಸ್ಟ್​​​​​ ಫಾಸ್ಟ್​​​ ಬೌಲರ್​​ನ ಆಡಿಸಿ ಧೈರ್ಯ ಪ್ರದರ್ಶಿಸಿದ್ರು. ಮೂವರು ಸ್ಪಿನ್ನರ್ಸ್​ ಆಡಿಸಿ ಸಕ್ಸಸ್ ಕಂಡರು ಕೂಡ. ಅದೇ ಪ್ರವಾಸಿ ಇಂಗ್ಲೆಂಡ್​ ತೋರಿದ ಧೈರ್ಯವನ್ನು ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​​ ಆಯ್ಕೆಯಲ್ಲಿ ತೋರಲಿಲ್ಲ. ಇಬ್ಬರ ಪೈಕಿ ಓರ್ವ ವೇಗಿ ಆಡಿಸಿ ಮತ್ತೊಬ್ಬ ಸ್ಪಿನ್ನರ್ ಆಡಿಸಿದ್ರೆ ಗೆಲುವು ನಮ್ದೆ ಆಗ್ತಿತ್ತು.

ಫ್ಲಾಪ್ ಸ್ಟಾರ್​​ ​​​​​​​​​​​​​​​​​​​​ಗಿಲ್​​​-ಶ್ರೇಯಸ್​​​​​​ಗೆ ಗೇಟ್​ಪಾಸ್​​​ ಯಾಕಿಲ್ಲ..?
ಶುಭ್​​ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಸತತ ಫೇಲ್ಯೂರ್ ಕಾಣ್ತಿದ್ದಾರೆ. ಗಿಲ್​ ಕಳೆದ ನಾಲ್ಕು ಇನ್ನಿಂಗ್ಸ್​ಗಳಲ್ಲಿ 17 ಎವರೇಜ್​ನಲ್ಲಿ ಬ್ಯಾಟ್​ ಬೀಸಿದ್ರೆ, 2023 ರಲ್ಲಿ ಬರೀ 258 ರನ್​​ ಬಾರಿಸಿದ್ರು. ಇನ್ನು ಶ್ರೇಯಸ್​ ಕಳೆದ 12 ಇನ್ನಿಂಗ್ಸ್​ಗಳಿಂದ ಒಂದೂ ಅರ್ಧಶತಕ ಸಿಡಿಸಿಲ್ಲ. ಇಂತಹ ಪರ್ಫಾಮೆನ್ಸ್​ ನೀಡ್ತಿರೋ ಇಬ್ಬರನ್ನ ಇನ್ನೂ ತಂಡದಲ್ಲಿ ಇಟ್ಟುಕೊಳ್ಳಲಾಗಿದೆ. ಗಿಲ್​​​-ಶ್ರೇಯಸ್ ಬಿಟ್ರೆ ಬೇರೆ ಯಾರು ಗತಿನೇ ಇಲ್ವಾ ? ಮುಲಾಜಿಲ್ಲದೇ ಈ ಫ್ಲಾಪ್​ ಸ್ಟಾರ್​ಗಳನ್ನ ತಂಡದಿಂದ ಡ್ರಾಪ್ ಮಾಡಬೇಕಿದೆ.

ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ ಕ್ಯಾಪ್ಟನ್ ರೋಹಿತ್
ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ರೂ ಕ್ಯಾಪ್ಟನ್ ರೋಹಿತ್​​​ ಫೇಲ್​ ಆದ​​​​​ ಆಟಗಾರರಿಗೆ ಬ್ಯಾಕ್ ಟು ಬ್ಯಾಕ್ ಚಾನ್ಸ್ ನೀಡ್ತಿದ್ದಾರೆ. ರೋಹಿತ್ ಇದನ್ನ ಮೊದಲು ಬಿಡಬೇಕಿದೆ. ರಿಸಲ್ಟ್ ಏನೇ ಬರಲಿ. ಮೊದಲು ಧೈರ್ಯದಿಂದ ಕಠಿಣ ನಿರ್ಧಾರ ಕೈಗೊಳ್ಳಲಿ. ರಿಂಕು ಸಿಂಗ್ ಹಾಗೂ ಶಿವಂ ದುಬೆ ಡೊಮೆಸ್ಟಿಕ್ ರನ್​ ಮಷೀನ್ಸ್​​​. ಇವರಿಗೆ ಗಿಲ್​ ಹಾಗೂ ಶ್ರೇಯಸ್ ಸ್ಥಾನವನ್ನ ತುಂಬುವ ಸಾಮರ್ಥ್ಯವಿದೆ. ಕ್ಯಾಪ್ಟನ್​ ಹಾಗೂ ಕೋಚ್​​​​ ಇವರ ಆಯ್ಕೆ ಬಗ್ಗೆ ಗಮನ ಹರಿಸಬೇಕು.

ಇಂಗ್ಲೆಂಡ್​​-ಆಸಿಸ್ ಬೋರ್ಡ್​ನಿಂದ ಪಾಠ ಕಲಿಯುತ್ತಾ ಬಿಸಿಸಿಐ..?
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್​​​ ಬೋರ್ಡ್​ಗಳಿಗೆ ರಿಸಲ್ಟ್ ಮುಖ್ಯ. ಎಂತಹ ದೊಡ್ಡ ಸ್ಟಾರ್ ಇದ್ರೂ ಅವರನ್ನ ಬರೀ ಆಟಗಾರರಾಗಿ ಮಾತ್ರ ನೋಡ್ತಾರೆ. ಕಳಪೆ ಆಟವಾಡಿದ್ರೆ ಮುಲಾಜಿಲ್ಲದೆ ತಂಡದಿಂದ ಕಿತ್ತೆಸೆಯುತ್ತಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡ್ತಾರೆ. ಆದ್ರೆ ನಮ್ಮಲ್ಲಿ ಹಾಗಲ್ಲ. ಸ್ಟಾರ್​​ಗಿರಿ ಹಿಂದೆ ಬಿದ್ದು ಎಷ್ಟೇ ಕೆಟ್ಟ ಪ್ರದರ್ಶನ ನೀಡಿದ್ರೂ ಪದೇ ಪದೇ ಅವಕಾಶ ನೀಡಲಾಗುತ್ತೆ. ಸದ್ಯ ಶುಭ್​​ಮನ್ ಗಿಲ್​​​​​​-ಶ್ರೇಯಸ್ ವಿಚಾರದಲ್ಲಿ ಆಗಿರೋದು ಇದೆ.

ಟೀಮ್ ಇಂಡಿಯಾದ ಇನ್ನಾದ್ರು ಎಚ್ಚೆತ್ತುಕೊಳ್ಳಬೇಕಿದೆ. ಎಂತಹ ಸೂಪರ್​ಸ್ಟಾರ್​ ಆಟಗಾರರಾದ್ರು ಸೈ. ಒಮ್ಮೆ ಬಿಸಿ ಮುಟ್ಟಿಸಿದ್ರೆ ತಾವಾಗಿಯೇ ದಾರಿಗೆ ಬರ್ತಾರೆ. ಇಲ್ಲವಾದ್ರೆ ಕಳಪೆ ಪ್ರದರ್ಶನ ನೀಡಿಯೂ ತಂಡದಲ್ಲಿ ಚಾನ್ಸ್ ಕೊಟ್ರೆ ಅದನ್ನೇ ಅಡ್ವಾಂಟೇಜ್​​​​​ ಮಾಡಿಕೊಂಡು ಬಿಡ್ತಾರೆ. ಇಂತವರಿಗೆ ಬುದ್ಧಿ ಕಲಿಸಬೇಕಾದ್ರೆ ಟೀಮ್ ಇಂಡಿಯಾ ಆಸಿಸ್ ಹಾಗೂ ಇಂಗ್ಲೆಂಡ್​​​ ಮಂಡಳಿಗಳಿಂದ ಪಾಠ ಕಲಿತು ಹೊಸಬರಿಗೆ ಮಣೆ ಹಾಕಬೇಕಿದೆ. ಹಾಗಾದ್ದಲ್ಲಿ ಮಾತ್ರ 2ನೇ ಟೆಸ್ಟ್​​​ನಲ್ಲಿ ಗೆಲುವಿನ ಟ್ರ್ಯಾಕ್​ಗೆ ಮರಳಲು ಸಾಧ್ಯ. ಇಲ್ಲವಾದ್ರೆ ಟೀಮ್ ಇಂಡಿಯಾಗೆ ವಿಶಾಖಪಟ್ಟಣಂನಲ್ಲಿ ಮತ್ತೊಂದು ಸೋಲು ತಪ್ಪಿದ್ದಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇಂಗ್ಲೆಂಡ್​​-ಆಸಿಸ್ ಬೋರ್ಡ್​ನಿಂದ BCCI ಈ ಪಾಠ ಕಲಿಯಲೇಬೇಕು.. ಟೀಂ ಇಂಡಿಯಾ ಸೋಲಿಗೆ ಕಾರಣ ಇದೇ..!

https://newsfirstlive.com/wp-content/uploads/2023/11/BCCI-3.jpg

Load More