/newsfirstlive-kannada/media/post_attachments/wp-content/uploads/2024/10/magnesium-oil-1.jpg)
ನಿತ್ಯ ರಾತ್ರಿ ಮಲಗುವು ಮುನ್ನ ಮೆಗ್ನಿಷಿಯಮ್ ಆಯಿಲ್ನಿಂದ ನಿಮ್ಮ ಪಾದಗಳನ್ನು ತಿಕ್ಕಿ , ಚೆನ್ನಾಗಿ ಮಸಾಜ್ ಮಾಡುವುದರಿಂದ ಹಲವು ಆರೋಗ್ಯದ ಪ್ರಯೋಜನಗಳಿವೆ. ಈ ಒಂದು ಲೇಖನದಲ್ಲಿ ನಾವು ನಿಮಗೆ ಮೆಗ್ನಿಷಿಯಮ್ ಎಣ್ಣೆಯಿಂದಾಗುವ ಹಲವು ಪ್ರಯೋಜನಗಳ ಬಗ್ಗೆ ಹೇಳುತ್ತೇವೆ. ಮೆಗ್ನಿಷಷಿಯಮ್ ನಮ್ಮ ದೇಹಕ್ಕೆ ಸುಮಾರು 300ರಷ್ಟು ಜೀವರಾಸಾಯನಿಕ ಪ್ರತಿಕ್ರಿಯೆಗಳನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಆದ್ರೆ ಶೇಕಡಾ 75 ರಷ್ಟು ಮಂದಿ ಇದನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯುತ್ತಿಲ್ಲ ಎಂಬ ವರದಿಯಿದೆ. ತಜ್ಞರು ಸಲಹೆ ನೀಡುವ ಪ್ರಕಾರ ಹೆಣ್ಣು ಮಕ್ಕಳು ನಿತ್ಯ 310 ರಿಂದ 320 ಮಿಲಿಗ್ರಾಮ್ನಷ್ಟು ಮೆಗ್ನಿಷಿಯಮ್ ಸೇವಿಸಬೇಕು. ಗಂಡು ಮಕ್ಕಳು 400 ರಿಂದ 420 ಮಿಲಿಗ್ರಾಮ್ ಸೇವಿಸಬೇಕು ಅಂತ ಇದೆ.
ಇದನ್ನೂ ಓದಿ:ಕರಿಮೆಣಸಿನಲ್ಲಿದೆ ಹಲವು ಆರೋಗ್ಯಕಾರಿ ಅಂಶಗಳು; ಯಾವೆಲ್ಲಾ ಸಮಸ್ಯೆಗಳಿಗೆ ರಾಮಬಾಣ ಗೊತ್ತಾ?
ಮೆಗ್ನಿಷಿಯಮ್ನ್ನು ನೇರವಾಗಿ ಚರ್ಮಕ್ಕೆ ಹಚ್ಚುವುದರಿಂದ ಅನೇಕ ಲಾಭಗಳಿವೆ ಎಂದು ಹೇಳಲಾಗುತ್ತದೆ. ಇದರಿಂದ ಅನೇಕ ಧನಾತ್ಮಕ ಪ್ರಯೋಜನಗಳಿವೆ ಎಂದು ಕೂಡ ಹೇಳಲಾಗುತ್ತದೆ. ಸರಳವಾಗಿ ಚರ್ಮಕ್ಕೆ ಮೆಗ್ನಿಷಿಯಮ್ ಆಯಿಲ್ ಸ್ಪ್ರೇ ಮಾಡುವ ಮೂಲಕ ಪಾದವನ್ನು ಚೆನ್ನಾಗಿ ಮಸಾಜ್ ಮಾಡಿ ದೇಹಕ್ಕೆ ಮೆಗ್ನಿಷಿಯಮ್ ಒದಗಿಸುವ ಒಂದು ವಿಧಾನವಿದೆ. ಈ ರೀತಿ ಮಾಡುವುದರಿಂದ ಅನೇಕ ಲಾಭಗಳಿವೆ ಎನ್ನುತ್ತಾರೆ ತಜ್ಞರು. ನೀವು ಒಂದು ವೇಳೆ ಮಲಗಲು ತುಂಬಾ ಒದ್ದಾಡುತ್ತಿದ್ದರೆ, ನಿಮ್ಮನ್ನು ಮೆಗ್ನಿಷಿಯಮ್ ಆಯಿಲ್ ಸುಖವಾಗಿ ನಿದ್ರಿಸುವಂತೆ ಮಾಡುತ್ತದೆ.
ಸ್ನಾಯು ನೋವನ್ನು ನಿವಾರಿಸುತ್ತದೆ.
ನಿತ್ಯ ಮೆಗ್ನಿಷಿಯಮ್ ಆಯಿಲ್ನಿಂದ ಪಾದವನ್ನು ಚೆನ್ನಾಗಿ ಮಸಾಜ್ ಮಾಡುವುದರಿಂದ ದೇಹಕ್ಕೆ ಯಾವುದೋ ಒಂದು ನಿರಾಳತೆ ದೊರಕುತ್ತದೆ. ಇದರಿಂದ ಅದೆಷ್ಟೇ ದೀರ್ಘಕಾಲದ ಸ್ನಾಯು ಸೆಳತ,ಸ್ನಾಯುನೋವುಗಳಿದ್ದರೂ ಹೊರಟುಹೋಗುತ್ತದೆ.
ಒತ್ತಡ ನಿವಾರಿಸುತ್ತದೆ ಈ ಮೆಗ್ನೆಷಿಯಮ್ ಆಯಿಲ್
ಮುಂಜಾನೆದ್ದರೆ ಸೋಮವಾರ ಮತ್ತೆ ಮೀಟಿಂಗ್ಗಳ ಕಿರಿಕಿರಿ, ಸಂಬಂಧಗಳಲ್ಲಿ ಸಮಸ್ಯೆಗಳು ಇಂತಹ ಸಹಜವಾದ ಒತ್ತಡಗಳು ಸರಳವಾಗಿ ನಿವಾರಿಸುತ್ತದೆ ಇ ಮೆಗ್ನಿಷಿಯಂ ಎಣ್ಣೆ. ನಿತ್ಯ ನಿಮ್ಮ ಪಾದಗಳಿಗೆ ಮೆಗ್ನಿಷಿಯಮ್ ಎಣ್ಣೆಯನ್ನು ಹಾಕಿ ಚೆನ್ನಾಗಿ ತಿಕ್ಕಿ ಒಂದು 20 ರಿಂದ 30 ನಿಮಿಷ ಬಿಟ್ಟು ಕಾಲು ತೊಳೆದುಕೊಂಡು ಮಲಗಿ. ಆಗ ನೋಡಿ ಒಂದು ಚಮತ್ಕಾರವೇ ನಡೆದು ಹೋಗಿರುತ್ತದೆ. ಬೆಳಗ್ಗೆ ಎದ್ದ ಮೇಲೆ ನಿಮ್ಮ ಒತ್ತಡಗಳೆಲ್ಲಾ ದೂರವಾಗಿ ಪ್ರಶಾಂತವಾದ ಮನಸ್ಸು ನಿಮ್ಮದಾಗಿರುತ್ತದೆ.
ಮಲಬದ್ಧತೆಯ ಸಮಸ್ಯೆಯಿಂದ ನಿರಾಳತೆ
ಮೆಗ್ನಿಷಿಯಮ್ ಆಯಿಲ್ನ ಈ ಮಸಾಜ್ ಹಾಗೂ ನೇರವಾಗಿ ಸೇವಿಸುವುದರಿಂದ ಮಲಬದ್ಧತೆಯಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ. ಈಗಾಗಲೇ ಹೇಳಿದಂತೆ ದಿನಕ್ಕೆ ಇಂತಿಷ್ಟು ಪ್ರಮಾಣ ಅಂತ ಮೆಗ್ನಿಷಿಯಮ್ ಆಯಿಲ್ ಸೇವಿಸುವುದರಿಂದ ಅದು ಕರಳಿನ ಮೇಲಿರುವ ಒತ್ತಡವನ್ನು ನಿವಾರಿಸಿ. ದೇಹದಲ್ಲಿರುವ ತ್ಯಾಜ್ಯವನ್ನು ಸರಳವಾಗಿ ಹೊರಹಾಕುವುದರಲ್ಲಿ ಈ ಮೆಗ್ನಿಷಿಯಮ್ ಎಣ್ಣೆ ಬಹಳಷ್ಟು ಸಹಕಾರಿ
ಇದನ್ನೂ ಓದಿ:ಜನರು ನಿತ್ಯ ಅಂದಾಜು ಎಷ್ಟು ಹೆಜ್ಜೆ ನಡೆಯುತ್ತಿದ್ದಾರೆ? ಉತ್ತಮ ಆರೋಗ್ಯಕ್ಕೆ ಎಷ್ಟು ಹೆಜ್ಜೆ ನಡೆಯಬೇಕು?
ಹೀಗೆ ಹಲವು ಆರೋಗ್ಯದಾಯಕ ಪ್ರಯೋಜನಗಳನ್ನು ಮೆಗ್ನಿಷಿಯಮ್ ಆಯಿಲ್ ಹೊಂದಿದೆ. ಇನ್ನು ಅನೇಕ ಆಹಾರಗಳಲ್ಲಿ ಮೆಗ್ನಿಷಿಯಮ್ ಅಂಶ ಇದೆ. ಬಾದಾಮ್, ಗೊಡಂಬಿ, ಕುಂಬಳಕಾಯಿ ಬೀಜಗಳು, ಡಾರ್ಕ್ ಚಾಕಲೇಟ್, ಹೀಗೆ ಅನೇಕ ಆಹಾರಗಳಲ್ಲಿ ಮೆಗ್ನಿಷಿಯಮ್ ಇದ್ದು ಅವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಿನ್ನುವುದರ ಮೂಲಕವೂ ಕೂಡ ನಾವು ದೇಹಕ್ಕೆ ಮೆಗ್ನಿಷಿಯಮ್ ಒದಗಿಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ