newsfirstkannada.com

ಅಂಬರೀಶ್​ 72ನೇ ಜನ್ಮದಿನೋತ್ಸವ.. ರೆಬೆಲ್​ ಸ್ಟಾರ್​ ಬರ್ತ್​ಡೇಗೆ ಸರ್​ಪ್ರೈಸ್​ ಕೊಟ್ಟ ದರ್ಶನ್!​​

Share :

Published May 29, 2024 at 10:44am

Update May 29, 2024 at 10:56am

  ರೆಬಲ್​ ಸ್ಟಾರ್​ ಅಂಬರೀಶ್​ ಅವರ ಹುಟ್ಟುಹಬ್ಬವಿಂದು

  ಪತಿಯನ್ನು ನೆನೆದು ಪೋಸ್ಟ್​ ಹಂಚಿಕೊಂಡ ಸಂಸದೆ ಸುಮಲತಾ

  ಅಪ್ಪಾಜಿಯನ್ನು ನೆನೆದು ಪೋಸ್ಟ್​ ಹಂಚಿಕೊಂಡ ಚಾಲೆಂಜಿಂಗ್​ ಸ್ಟಾರ್​

ಸ್ಯಾಂಡಲ್​ವುಡ್​​ ನಟ ದಿವಂಗತ ಅಂಬರೀಶ್​ ಅವರ 72ನೇ ಜನ್ಮ ದಿನವಿಂದು. ಕನ್ವರ್ಲಾಲ್​​ನ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ಅಪ್ಪಾಜಿಯ ಹುಟ್ಟುಹಬ್ಬವನ್ನು ಸ್ಮರಿಸಿಕೊಂಡಿದ್ದಾರೆ.

ಅಭಿಮಾನಿಗಳು ಸಹ ಈ ದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಸಿಡಿಬಿ ಬಿಡುಗಡೆ ಮಾಡುವ ಮೂಲಕ ನೆನಪಿಸಿಕೊಂಡಿದ್ದಾರೆ. ಅಭಿಮಾನಿಗಳು ರೆಡಿ ಮಾಡಿರುವ ಸಿಡಿಪಿಯನ್ನು ನಟ ದರ್ಶನ್​ ಬಿಡುಗಡೆ ಮಾಡಿದ್ದು, ಇಂತಹ ಅವಕಾಶ ಮಾಡಿಕೊಟ್ಟ ಫ್ಯಾನ್ಸ್​ಗೆ ಧನ್ಯವಾದ ಸಮರ್ಪಿಸಿದ್ದಾರೆ.

ಟ್ವೀಟ್​ ಮಾಡಿರುವ ದರ್ಶನ್​, ‘ನಮ್ಮೆಲ್ಲರ ಅಚ್ಚುಮೆಚ್ಚಿನ ಸಹೃದಯಿ, ರೆಬೆಲ್ ಸ್ಟಾರ್ ಅಂಬಿ ಅಪ್ಪಾಜಿ ರವರ ಹುಟ್ಟುಹಬ್ಬದ ಪ್ರಯುಕ್ತ ಮೂಡಿಬಂದಿರುವ CDP ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟ ಅಭಿಮಾನಿ ಸಮೂಹಕ್ಕೆ ಧನ್ಯವಾದಗಳು. ನಮ್ಮ ನಿಷ್ಠೆಯ ಕೆಲಸ-ಕಾರ್ಯಗಳಲ್ಲಿ ಸದಾ ಬೆನ್ನೆಲುಬಾಗಿ ಅಂಬಿ ಅಪ್ಪಾಜಿ ನಮ್ಮೊಂದಿಗೆ ಜೀವಂತವಾಗಿದ್ದಾರೆ’ ಎಂದು ಬರೆದುಕೊಳ್ಳುವ ಮೂಲಕ ಅಂಬರೀಶ್​ ಅವರನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ADHD ಕಾಯಿಲೆಯಿಂದ ಬಳಲುತ್ತಿರುವ ಫಾಹದ್ ಫಾಸಿಲ್.. ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿ ಕೊಟ್ಟ ನಟ

ಸುಮಲತಾ ಅಂಬರೀಶ್​ ಕೂಡ ಟ್ವೀಟ್​ ಮಾಡಿದ್ದು, ‘‘ನಿನ್ನನ್ನು ನೆನೆಯುವುದು.. ಸದಾ ಮುಗುಳ್ನಗೆಯನ್ನು ತರುತ್ತದೆ.. ನಿನ್ನನ್ನು ಕಳೆದುಕೊಂಡಿರುವ ನೋವು ಹಾಗೆಯೇ ಉಳಿದಿದೆ.. ನೀನು ನಮ್ಮ ಜೀವನದ ಒಂದು ಭಾಗ.. ಪ್ರತಿ ದಿನ ಪ್ರತಿ ಕ್ಷಣ ಮತ್ತು ಎಂದೆಂದಿಗೂ.. ನೀನು ಜೀವನದ ಆಚೆಗೂ… ನೀನೇ ಜೀವನ.. ಸ್ವರ್ಗದಲ್ಲಿರುವ ನಿನಗೆ ಜನ್ಮದಿನದ ಶುಭಾಶಯಗಳು’’ ಎಂದು ಬರೆದುಕೊಂಡಿದ್ದಾರೆ.

ಇದಲ್ಲದೆ ರಾಜಕೀಯ ನಾಯಕರೂ ಸಹ ಅಂಬರೀಶ್ ಅವರ​​ ಹುಟ್ಟುಹಬ್ಬವನ್ನು ಸ್ಮರಿಸಿಕೊಂಡಿದ್ದಾರೆ. ಬಿ.ವೈ ವಿಜಯೇಂದ್ರ, ಡಾ. ಸುಧಾಕರ್​ ಕೂಡ ಟ್ವೀಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಬರೀಶ್​ 72ನೇ ಜನ್ಮದಿನೋತ್ಸವ.. ರೆಬೆಲ್​ ಸ್ಟಾರ್​ ಬರ್ತ್​ಡೇಗೆ ಸರ್​ಪ್ರೈಸ್​ ಕೊಟ್ಟ ದರ್ಶನ್!​​

https://newsfirstlive.com/wp-content/uploads/2024/05/Ambarish.jpg

Load More