/newsfirstlive-kannada/media/post_attachments/wp-content/uploads/2025/03/sumalatha.jpg)
ಬೆಂಗಳೂರು: ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಹೌದು, ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅವರ ಮೊಮ್ಮಗನ ನಾಮಕರಣ ಶಾಸ್ತ್ರ ನಡೆದಿದೆ.
ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಈ ಶುಭ ಸಮಾರಂಭ ನಡೆದಿದೆ. ಈ ಶಾಸ್ತ್ರದಲ್ಲಿ ಅನೇಕ ತಾರೆಯರು ಭಾಗಿಯಾಗಿ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: ಮಗನಿಗೆ ಅಪ್ಪನ ಹೆಸರಿಟ್ಟ ಅಭಿಷೇಕ್ ಅಂಬರೀಶ್.. ರೆಬೆಲ್ ಸ್ಟಾರ್ ಮೊಮ್ಮಗನ ಹೆಸರೇನು ಗೊತ್ತಾ?
ಸಾಕಷ್ಟು ಮಂದಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೊಮ್ಮಗನಿಗೆ ಏನು ಹೆಸರು ಇಡಬಹುದು ಅಂತ ಅಂದಾಜಿಸುತ್ತಿದ್ದರು. ಕೊನೆಗೂ ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನ ಹೆಸರನ್ನು ರಿವೀಲ್ ಮಾಡಲಾಗಿದೆ.
ಹೌದು, ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೊಮ್ಮಗನಿಗೆ ರಾಣಾ ಅಮರ್ ಅಂಬರೀಶ್ ಹೆಸರನಿಟ್ಟು ನಾಮಕರಣ ಮಾಡಲಾಗಿದೆ.
ಈ ಮೂಲಕ ಮೊಮ್ಮಗನಿಗೂ ಅಂಬರೀಶ್ ಜೊತೆಯಲ್ಲಿ ಅಮರ್ ಹೆಸರನ್ನು ಕೂಡ ಸೇರಿಸಲಾಗಿದೆ. ಮಳವಳ್ಳಿ ಹುಚ್ಚೇಗೌಡ ಅಮರ್‌ನಾಥ್ ಎಂಬ ವ್ಯಕ್ತಿಯೇ ಇಂದು ಅಂಬರೀಶ್ ಆಗಿ ಕನ್ನಡ ನಾಡಿಗೆ ಪರಿಚಿತರಾಗಿದ್ದಾರೆ.
ಅಂದಹಾಗೆ ರಾಣಾ ಎಂದರೆ ಪರ್ಷಿಯನ್ ಶಬ್ದದಲ್ಲಿ ಕಾಂತಿಯುತವಾದ, ಹೊಳೆಯುವ ಎಂದರ್ಥ. ಇನ್ನೂ, ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ನಟ ಕಿಚ್ಚ ಸುದೀಪ್ ಅವರು ಆಗಮಿಸಿದ್ದಾರೆ.
ಕಿಚ್ಚ ಸುದೀಪ್ ಅವರು ಪತ್ನಿ ಪ್ರಿಯಾ ಜೊತೆಗೆ ಬಂದಿದ್ದು ವಿಶೇಷವಾಗಿತ್ತು. ಜೊತೆಗೆ ಸುಮಲತಾ ಅವರ ಮೊಮ್ಮನಿಗೆ ಕಿಚ್ಚ ಸುದೀಪ್ ಅವರು ವಿಶೇಷ ಗಿಫ್ಟ್ ಕೂಡ ತೆಗೆದುಕೊಂಡು ಬಂದಿದ್ದರು.
ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನಿಗೆ ತೊಟ್ಟಿಲು ರೀತಿಯ ಬುಟ್ಟಿಯಲ್ಲಿ ಪುಟ್ಟ, ಪುಟ್ಟ ಟೆಡ್ಡಿ ಬೇರ್, ಮೊಲದ ಮರಿಗಳನ್ನು ಉಡುಗೊರೆಯಾಗಿ ನೀಡಲಾಗಿದೆ.
ಇನ್ನೂ, ಅವಿವಾ ಬಿಡಪ್ಪ ಹಾಗೂ ಅಭಿಷೇಕ್ ಅಂಬರೀಶ್ ಮಗನ ನಾಮಕರಣಕ್ಕೆ ಗುರುಕಿರಣ್, ರಾಕ್ಲೈನ್ ವೆಂಕಟೇಶ್ ಹಾಗೂ ಕುಟುಂಬದ ಆಪ್ತರು ಬಂದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ