/newsfirstlive-kannada/media/post_attachments/wp-content/uploads/2025/04/IAF_OFFICER_NEW.jpg)
ನವದೆಹಲಿ: ಜಮ್ಮುಕಾಶ್ಮೀರದ ಪಹಲ್ಗಾಮ್ ಪ್ರದೇಶದ ಬಳಿ ಉಗ್ರರು ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಲೆಫ್ಟಿನೆಂಟ್ ಅಧಿಕಾರಿ, ವಿದೇಶಿಯರು, ಐಬಿ ಸಿಬ್ಬಂದಿ ಸೇರಿದಂತೆ ಅನೇಕರ ಜೀವವನ್ನು ಉಗ್ರರು ಬಲಿ ಪಡೆದಿದ್ದಾರೆ. ಇದರ ಜೊತೆ ಅರುಣಾಚಲ ಪ್ರದೇಶದ ಭಾರತೀಯ ವಾಯುಪಡೆ (ಐಎಎಫ್)ಯ ಅಧಿಕಾರಿಯೊಬ್ಬರು ಕೂಡ ಸೇರಿದ್ದಾರೆ.
ಭಾರತೀಯ ವಾಯುಪಡೆಯ ಅಧಿಕಾರಿ ಕಾರ್ಪೋರಲ್ ತೇಜ್ ಹೈಲ್ಯಾಂಗ್ (30) ಅವರು ತನ್ನ ಹೆಂಡತಿ ಜೊತೆ ಜಮ್ಮುಕಾಶ್ಮೀರದ ಪ್ರವಾಸದಲ್ಲಿದ್ದರು. ಇವರು ಪಹಲ್ಗಾಮ್ನಲ್ಲಿ ಪ್ರವಾಸದ ಮಾಡುವಾಗ ಭಯೋತ್ಪಾದಕರು ಭಯಾನಕವಾದ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕಾರ್ಪೋರಲ್ ತೇಜ್ ಹೈಲ್ಯಾಂಗ್ ಅವರು ಪ್ರಾಣ ಬಿಟ್ಟಿದ್ದಾರೆ. ಇವರು 4 ತಿಂಗಳ ಹಿಂದೆ ಅಂದರೆ ಕಳೆದ ಡಿಸೆಂಬರ್ನಲ್ಲಿ ಮದುವೆ ಆಗಿದ್ದರು.
ಇದನ್ನೂ ಓದಿ:ಉಗ್ರರ ಗುಂಡಿನ ದಾಳಿಯಲ್ಲಿ ಜೀವ ಬಿಟ್ಟ ಮೂವರ ಕುಟುಂಬಸ್ಥರಿಗೆ ಸಿಎಂ ಪರಿಹಾರ ಘೋಷಣೆ
ತೇಜ್ ಹೈಲ್ಯಾಂಗ್ ಅವರು ಅರುಣಾಚಲ ಪ್ರದೇಶದ ಜಿರೋದ ತಾಜಾಂಗ್ ಎನ್ನುವ ಗ್ರಾಮದವರು ಆಗಿದ್ದಾರೆ. ಇವರ ತಂದೆ ತೇಗೆತಾಡೆ ಎನ್ನುವ ಗ್ರಾಮದ ಮುಖಂಡರು ಎಂದು ಹೇಳಲಾಗಿದೆ. ತೇಜ್ ಹೈಲ್ಯಾಂಗ್ ಸಹೋದರ ಕೂಡ ಭಾರತೀಯ ಸೇನೆಯಲ್ಲಿದ್ದು ಸದ್ಯ ಜೀರೋದಲ್ಲಿ ಕರ್ತವ್ಯದಲ್ಲಿದ್ದಾರೆ. ಕಾರ್ಪೋರಲ್ ತೇಜ್ ಹೈಲ್ಯಾಂಗ್ ಅವರನ್ನು ಶ್ರೀನಗರದ ವಾಯು ನೆಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಆದರೆ ರಜೆ ಹಿನ್ನೆಲೆಯಲ್ಲಿ ಹೆಂಡತಿ ಜೊತೆ ಪ್ರವಾಸ ಎಂಜಾಯ್ ಮಾಡಲು ಬಂದಾಗ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಉಗ್ರರ ಗುಂಡಿಗೆ ಗಂಡ ಜೀವ ಬಿಟ್ಟಿದ್ದನ್ನು ಹೆಂಡತಿ ಏಪ್ರಿಲ್ 21 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಫೋನ್ ಕಾಲ್ ಮಾಡಿ ಪೋಷಕರಿಗೆ, ಕುಟುಂಬದವರಿಗೆ ಹೇಳಿದ್ದರು. ಇದರಿಂದ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ