ರಾತ್ರಿಯಿಡಿ ಸುರಿದ ಭಾರೀ ಮಳೆಗೆ ತತ್ತರಿಸಿದ ಸಿಲಿಕಾನ್​ ಸಿಟಿ ಜನತೆ; ಏನೆಲ್ಲಾ ಆಗೋಗಿದೆ?

author-image
Veena Gangani
Updated On
ರಾತ್ರಿಯಿಡಿ ಸುರಿದ ಭಾರೀ ಮಳೆಗೆ ತತ್ತರಿಸಿದ ಸಿಲಿಕಾನ್​ ಸಿಟಿ ಜನತೆ; ಏನೆಲ್ಲಾ ಆಗೋಗಿದೆ?
Advertisment
  • 10 ವರ್ಷದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ದಾಖಲೆ ಮಳೆ
  • ಕೆಆರ್ ಸರ್ಕಲ್, ಕಾರ್ಪೊರೇಷನ್, ಮೆಜೆಸ್ಟಿಕ್ ಸುತ್ತಮುತ್ತ ಮಳೆ
  • ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ

ಬೆಂಗಳೂರಿನ ಹಲವೆಡೆ ಮುಂದಿನ 12 ಗಂಟೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕೆಲವು ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: ‘ನನ್ನ ಮಗಳು..’ ಬೇಹುಗಾರಿಕೆ ಆರೋಪ ಹೊತ್ತ ಜ್ಯೋತಿ ಮಲ್ಹೋತ್ರ ಬಗ್ಗೆ ತಂದೆ ಏನಂದ್ರು..?

publive-image

ಹೌದು, ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮಳೆರಾಯ ರಾತ್ರಿ ಇಡೀ ಆರ್ಭಟಿಸಿದ್ದಾನೆ. ನಗರದ ಅಷ್ಟ ದಿಕ್ಕುಗಳಲ್ಲೂ ಮಳೆಯಾಗಿದ್ದು, ವಾರದ ಮೊದಲ ದಿನವೇ ಸಿಟಿ ಮಂದಿಗೆ ಕಿರಿಕಿರಿ ಉಂಟಾಗಿದೆ.

publive-image

ಕೆಆರ್ ಸರ್ಕಲ್, ಕಾರ್ಪೊರೇಷನ್, ಮೆಜೆಸ್ಟಿಕ್ , ಕೆ.ಆರ್. ಮಾರುಕಟ್ಟೆ, ಜಯನಗರ, ವಿಜಯನಗರದಲ್ಲಿ ರಾತ್ರಿಇಡೀ ಭಾರೀ ಮಳೆಯಾಗಿದೆ. ಅಲ್ಲದೇ ಚಂದ್ರಲೇಔಟ್, ರಾಜಾಜಿನಗರ, ಆರ್.ಟಿ ನಗರ, ಹೆಬ್ಬಾಳ, ಕೋರಮಂಗಲ, ಕಾಮಾಕ್ಷಿ ಪಾಳ್ಯದಲ್ಲಿ ವರುಣ ಆರ್ಭಟಿಸಿದ್ದು, ಬೊಮ್ಮನಹಳ್ಳಿ, ನಾಯಂಡಹಳ್ಳಿ, ಆರ್.ಆರ್ ನಗರದಲ್ಲಿ ಜೋರು ಮಳೆಯಾಗಿದೆ.

publive-image

ಜೊತೆಗೆ ಮೇ 21ರಂದು ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆ ಸುರಿಯಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

publive-image

ಇನ್ನೂ ಭಾನುವಾರ ಸಿಲಿಕಾನ್ ಸಿಟಿಯಲ್ಲಿ ದಾಖಲೆಯ ಮಳೆಯಾಗಿದೆ. ರಾತ್ರಿಯಿಂದ ಬೆಳಗ್ಗೆ 5:30ರವರೆಗೆ ನಗರ ವ್ಯಾಪ್ತಿಯಲ್ಲಿ 104 ಮಿ.ಮೀ ಮಳೆಯಾಗಿದೆ. ಕಳೆದ 10 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತಿಹೆಚ್ಚು ಮಳೆ ಇದಾಗಿದೆ. ಭಾರೀ ಮಳೆಗೆ ರಸ್ತೆಗಳಲ್ಲಿ ನೀರು ನಿಂತಿದೆ. ಅಲ್ಲದೇ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

publive-image

ಹೆಚ್​ಎಸ್​ಆರ್​ ಲೇಔಟ್​ನಲ್ಲಿಯೂ ಭಾರೀ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಹೈರಣಾಗಿದ್ದಾರೆ. ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಹೆಚ್​ಎಸ್​ಆರ್​ ಲೇಔಟ್​ನ ಫಸ್ಟ್​​ ಸೆಕ್ಟರ್ ಸಂಪೂರ್ಣ ಜಲಾವೃತವಾಗಿದೆ. ಪರಿಣಾಮ ಅಪಾರ್ಟ್ಮೆಂಟ್ ಬೇಸ್ಮೆಂಟ್ ಹಾಗೂ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಿಂದ ನೀರು ಹೊರಹಾಕಲು ಜನರು ಪರದಾಡುವಂತಾಯಿತು.

ಇದನ್ನೂ ಓದಿ:ಇಡೀ ರಾತ್ರಿ ಸುರಿದ ಮಳೆಗೆ ಬೆಂಗಳೂರಲ್ಲಿ ಸಮಸ್ಯೆಗಳ ಸರಮಾಲೆ.. ಜನ ಪರದಾಟ

publive-image

ಶಾಂತಿನಗರದ ಸಿಸಿಬಿ ಕಚೇರಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸಿಸಿಬಿ ಕಚೇರಿ ಕಟ್ಟಡದ ಗ್ರೌಂಡ್ ಫ್ಲೋರ್​ನಲ್ಲಿ ನೀರು ನುಗ್ಗಿದ ಪರಿಣಾಮ ದಾಖಲೆಗಳು ಹಾನಿಗೊಳಗಾಗಿವೆ. ಜೊತೆಗೆ ಸುಮಾರು 8ಕ್ಕೂ ಹೆಚ್ಚು ರೂಮ್​ಗಳಲ್ಲಿದ್ದ ಫೈಲ್​ಗಳ ನಾಶವಾಗಿದೆ. ಮಾತ್ರವಲ್ಲದೇ ರಾಜಕಾಲುವೆ ಚೆಂಬರ್ ಕೂಡ ಸಂಪೂರ್ಣ ಜಲಾವೃತಗೊಂಡಿದ್ದು ಕಾರು, ಜೀಪುಗಳು ಕೂಡ ಮುಳುಗಡೆಯಾಗಿವೆ.

publive-image

ಮಳೆ ಬಂದ್ರೆ ಒಂಥರಾ ಕಷ್ಟ ಆದ್ರೆ, ಮಳೆ ನಿಂತ ಮೇಲೆ ಮತ್ತೊಂದು ರೀತಿಯ ಸಮಸ್ಯೆಗಳು ಶುರುವಾಗ್ತಿದೆ. ಇದು ಮಳೆ ತಂದ ರಗಳೆಯೋ ಹಿಂದಿನ ಪಾಲಿಕೆ ಅಧಿಕಾರಿಗಳ ಅನ್ ಪ್ಲಾನಡ್ ಕಾಮಗಾರಿಯೋ ಗೊತ್ತಿಲ್ಲ. ಇದರಿಂದ ಕೊತ್ತನೂರು ಹೆಣ್ಣೂರು ಕ್ರಾಸ್​ ಸಂಪೂರ್ಣ ಮುಳುಗಡೆಯಾಗಿದೆ. ಮನೆಯೊಳಗಡೆ ನೀರು ನಿಂತಿರೊದ್ರಿಂದ ನಿವಾಸಿಗಳು ಹೈರಾಣಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment