Advertisment

ಕೆಂಪು, ನೀಲಿ, ಹಸಿರು.. ರೈಲಿನ ಬಣ್ಣಕ್ಕೂ ವೇಗಕ್ಕೂ ಇರೋ ಲಿಂಕ್‌ ಏನು? ಓದಲೇಬೇಕಾದ ಸ್ಟೋರಿ ಇದು!

author-image
Veena Gangani
Updated On
ಕೆಂಪು, ನೀಲಿ, ಹಸಿರು.. ರೈಲಿನ ಬಣ್ಣಕ್ಕೂ ವೇಗಕ್ಕೂ ಇರೋ ಲಿಂಕ್‌ ಏನು? ಓದಲೇಬೇಕಾದ ಸ್ಟೋರಿ ಇದು!
Advertisment
  • ಭಾರತೀಯ ರೈಲ್ವೆಗೆ ಹೊಸದಾಗಿ ಸೇರ್ಪಡೆಯಾದ ರೈಲುಗಳು ಯಾವುದು?
  • ತುರ್ತು ಕೆಲಸ ಬಂದ್ರೆ ಸಾಕು ಮೊದಲು ನೆನಪಾಗುವುದೇ ರೈಲು ಪ್ರಯಾಣ
  • ಬೂದು ಕೋಚ್​ಗಳ ಮೇಲಿನ ಕೆಂಪು ಪಟ್ಟಿ ಏನನ್ನು ಸೂಚಿಸುತ್ತದೆ ಗೊತ್ತಾ?

ಭಾರತೀಯ ರೈಲ್ವೆ ನೆಟ್​ವರ್ಕ್ ಏಷ್ಯಾದಲ್ಲಿ 2ನೇ ಮತ್ತು ವಿಶ್ವದಲ್ಲೇ 4ನೇ ದೊಡ್ಡ ನೆಟ್​ವರ್ಕ್​ ಹೊಂದಿದೆ. ರೈಲು ಪ್ರಯಾಣ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ. ರೈಲಿನಲ್ಲಿ ಪ್ರಯಾಣ ಮಾಡುವುದು ಅದೆಷ್ಟೋ ಪ್ರಯಾಣಕರಿಗೆ ರೋಮಾಂಚನ ಅನುಭವ ನೀಡುತ್ತೆ. ರೈಲು ಬೋಗಿ ಒಂದು ಮಿನಿ ಭಾರತದಂತೆಯೇ ಇರುತ್ತದೆ.

Advertisment

publive-image

ತುರ್ತು ಕೆಲಸ ಬಿಟ್ಟರೆ ದೀರ್ಘ ಪ್ರಯಾಣಕ್ಕೆ ಜನ ಆಯ್ಕೆ ಮಾಡಿಕೊಳ್ಳುವುದೇ ರೈಲು ಪ್ರಯಾಣವನ್ನು. ಸಾಮಾನ್ಯವಾಗಿ ರೈಲು ಪ್ರಯಾಣದ ಸಮಯದಲ್ಲಿ ನೀವು ಬಣ್ಣ ಬಣ್ಣದ ರೈಲು ಕೋಚ್​ಗಳನ್ನು ನೋಡಿರುತ್ತೀರಿ. ಆದರೆ ರೈಲು ಕೋಚ್​ಗಳಿಗೆ ವಿವಿಧ ಬಣ್ಣಗಳನ್ನು ಏಕೆ ಹಾಕಿರುತ್ತಾರೆ ಅಂತ ಸಾಕಷ್ಟು ಮಂದಿಗೆ ತಿಳಿದಿಲ್ಲ. ಆದರೆ ಅದೇ ವಿಧ ವಿಧವಾದ ಬಣ್ಣಗಳ ಹಿಂದೆ ಹಲವು ಕಾರಣಗಳಿವೆ. ಹೌದು, ರೈಲು ಕೋಚ್​ಗಳ ಬಣ್ಣ, ವಿನ್ಯಾಸ ವಿಭಿನ್ನವಾದ ಅರ್ಥವನ್ನು ಹೊಂದಿದೆ. ಕೋಚ್​ಗಳ ಬಣ್ಣ, ವಿನ್ಯಾಸವನ್ನು ಅದರ ವೇಗದೊಂದಿಗೆ ಸಂಬಂಧಪಟ್ಟಿದೆ. ಹಾಗಾದ್ರೆ ಕೆಂಪು, ನೀಲಿ, ಹಸಿರು ಸೇರಿ ವಿವಿಧ ಬಣ್ಣಗಳ ರೈಲಿನ ವೇಗ ಎಷ್ಟು ಅಂತ ತಿಳಿಯೋಣ.

ಇದನ್ನೂ ಓದಿ: RRR ಬಳಿಕ ದೇವರದಲ್ಲಿ ಜೂನಿಯರ್ NTR ಅಬ್ಬರ.. ಸಿನಿಮಾ ರಿವ್ಯೂ ಏನ್ ಹೇಳುತ್ತೆ?

publive-image

ರೈಲು ನೀಲಿ ಬಣ್ಣದಾಗಿದ್ದರೆ ಅದನ್ನು ಐಸಿಎಫ್ ಕೋಚ್ ಎಂದು ಕರೆಯುತ್ತಾರೆ. ಐಸಿಎಫ್​ ಎಂದರೆ ಚೆನ್ನೈ ಬಳಿಯ ಪೆರಂಬೂರ್​​ನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ. ಆ ರೈಲಿನ ವೇಗ ಗಂಟೆಗೆ 70 ರಿಂದ 140 ಕಿಮೀ ವರೆಗೆ ಇರುತ್ತದೆ. ಸರಾಸರಿ ಗಂಟೆಗೆ 120 ಕಿಮೀ ವರೆಗೆ ವೇಗವನ್ನು ಹೊಂದಿರುತ್ತದೆ. ಇವುಗಳನ್ನು ಸಾಮಾನ್ಯವಾಗಿ ಮೇಲ್ ಅಥವಾ ಸೂಪರ್ ಫಾಸ್ಟ್​ ರೈಲುಗಳಲ್ಲಿ ಕಂಡು ಬರುತ್ತವೆ.

Advertisment

publive-image

ಕೆಂಪು ಬಣ್ಣದ ರೈಲ್ವೆ ಕೋಚ್​ನ್ನು ಲಿಂಕ್​ ಹಾಫ್ಮನ್ ಬುಶ್ (Linke-Hofmann-Busch)  ಎಂದೂ ಕರೆಯುತ್ತಾರೆ. ಸದ್ಯ ಪಂಜಾಬ್​ನ ಕಪೂರ್ತಲಾದಲ್ಲಿ ಉತ್ಪಾದಿಸಲಾಗುತ್ತಿದೆ. ಇವುಗಳ ಸರಾಸರಿ ವೇಗ 200 ಕಿಮೀ ಪ್ರತಿ ಗಂಟೆಗೆ ಇದೆ. ಕೆಂಪು ಕೋಚ್​ಗಳನ್ನು ರಾಜಧಾನಿ ಮತ್ತು ಶತಾಬ್ದಿಗಳಲ್ಲಿ ಬಳಸಲಾಗುತ್ತದೆ. ಹೆಚ್ಚಾಗಿ ಗರೀಬ್​ ರಥಗಳಲ್ಲಿ ಕಂಡು ಬರುವ ಹಸಿರು ಬಣ್ಣದ ಕೋಚ್​ಗಳಿರುವ ರೈಲುಗಳು ಪ್ರತಿ ಗಂಟೆಗೆ 160 ರಿಂದ 200 ಕಿಮೀ ವೇಗ ಹೊಂದಿವೆ. ಕಿರಿದಾದ ಮಾರ್ಗದಲ್ಲಿ ಸಂಚರಿಸುವ ಮೀಟರ್​ ಗೇಜ್ ರೈಲುಗಳಲ್ಲಿ ಕಂದು ಬಣ್ಣದ ಕೋಚ್ ಬಳಸಲಾಗುತ್ತದೆ.

publive-image

ಕೆಲವು ರೈಲುಗಳು ಆಯ್ದ ಮಾರ್ಗದಲ್ಲಿ ಮಾತ್ರ ಸಂಚರಿಸುತ್ತವೆ. ಸ್ಪೀಪರ್ ಬದಲಿಗೆ ಆಸನ ಹೊಂದಿರುವ ಡಬಲ್ ಡೆಕ್ಕರ್ ಆಗಿದ್ದು, ಹಳದಿ, ಕಿತ್ತಳೆ ಬಣ್ಣ ಹೊಂದಿರುತ್ತದೆ. ದೆಹಲಿ ಮತ್ತು ಆಗ್ರಾ ನಡುವೆ ಸಂಚರಿಸುವ ಗತಿಮಾನ್ ರೈಲು ಭಾರತೀಯ ರೈಲ್ವೆಗೆ ಹೊಸ ಸೇರ್ಪಡೆ. ಇದು ಗಂಟೆಗೆ ಸರಾಸರಿ 150 ಕಿಮೀ ವೇಗ ಇರುತ್ತದೆ. ಇದು ನೀಲಿ ಕೋಚ್ ಹೊಂದಿದ್ದು, ಕೆಳಭಾಗದಲ್ಲಿ ಬೂದು ಬಣ್ಣ, ಹಳದಿ ಪಟ್ಟಿ ಇರುತ್ತದೆ.

publive-image

ಭಾರತೀಯ ರೈಲ್ವೆಯಲ್ಲಿ ಆಧುನಿಕ ಕೋಚ್​ ತೇಜಸ್. ಇಲ್ಲಿ ಬಾಗಿಲುಗಳು ಸ್ವಯಂಚಾಲಿತವಾಗಿ ತೆರೆಯುತ್ತವೆ. ಕೋಚ್​ಗಳು ವಿಶಿಷ್ಟವಾದ ಹಳದಿ, ಕಿತ್ತಳೆ ಮಿಶ್ರಿತವಾಗಿರುತ್ತವೆ. ಹಸಿರು ಪಟ್ಟಿ ಹೊಂದಿರುವ ಬೂದು ಬಣ್ಣದ ಕೋಚ್ ಮಹಿಳೆಯರಿಗೆ ಮಾತ್ರ ಎಂದು ಸೂಚಿಸುತ್ತದೆ. ಬೂದು ಕೋಚ್​ಗಳ ಮೇಲಿನ ಕೆಂಪು ಪಟ್ಟಿಗಳು EMU/MEMU ರೈಲುಗಳಲ್ಲಿ ಪ್ರಥಮ ದರ್ಜೆಯ ಕ್ಯಾಬಿನ್ ಅನ್ನು ಸೂಚಿಸುತ್ತದೆ.

Advertisment

ವರದಿ- ವಿಶ್ವನಾಥ್ ಜಿ. ಹಿರಿಯ ಕಾಪಿ ಎಡಿಟರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment