ಕೆಂಪುಕೋಟೆಗೂ ಭಾರತದ ಸ್ವಾತಂತ್ರ್ಯ ದಿನೋತ್ಸವಕ್ಕೂ ಇರುವ ನಂಟೇನು?
1947ರಲ್ಲಿ ಭಾರತದ ಮೊದಲ ಪ್ರಧಾನಿ ತಮ್ಮ ಭಾಷಣಕ್ಕೆ ಈ ಕೋಟೆ ಆರಿಸಿದ್ದೇಕೆ?
78 ವರ್ಷಗಳಿಂದಲೂ ಈ ಪರಂಪರೆ ಹೀಗೆ ಮುಂದುವರೆದು ಬಂದಿದ್ದಾರು ಹೇಗೆ?
ನವದೆಹಲಿ: ಭಾರತವು ತನ್ನ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಅಸಂಖ್ಯಾತ ಹೋರಾಟಗಾರರ ತ್ಯಾಗ ಬಲಿದಾನಗಳ ಫಲವಾಗಿ ಇಂದು ನಾವು ಆಚರಿಸುತ್ತಿರುವ ಸ್ವಾತಂತ್ರ್ಯೋತ್ಸವ ಆ ಮಹಾನ್ ಹೋರಾಟಗಾರರಿಗೆ ನೀಡುವ ಬಹುದೊಡ್ಡ ಗೌರವ. ಚಾಪೇಕರ್ ಸಹೋದರರಿಂದ ಹಿಡಿದು ಮಹಾತ್ಮ ಗಾಂಧಿಯವರೆಗೆ ಪ್ರತಿ ಹೋರಾಟಗಾರರು ಈ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ. ಅದೆಲ್ಲದರ ಪ್ರತಿಫಲವೇ ಇಂದು ನಾವು, ನೀವೆಲ್ಲರೂ ಸಂಭ್ರಮದಿಂದ ಅಚರಿಸುತ್ತಿರುವ ಸ್ವಾತಂತ್ರ್ಯೋತ್ಸವ.
ವಾಡಿಕೆಯಂತೆ ಇಂದು 11ನೇ ಬಾರಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. 1947ರಿಂದ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಈಗಿನ ಮೋದಿವರೆಗೂ ಎಲ್ಲ ಪ್ರಧಾನಿಗಳೂ ಕೆಂಪುಕೋಟೆಯಲ್ಲಿಯೇ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಪರಂಪರೆ ಹೀಗೆಯೇ ಮುಂದುವರಿಯಲಿದೆ. ಹಾಗಿದ್ದರೆ ಕೆಂಪುಕೋಟೆಯಲ್ಲಿಯೇ ಏಕೆ ಧ್ವಜಾರೋಹಣ ಮಾಡುವುದು. ಅದಕ್ಕೂ ಭಾರತಕ್ಕೂ ಇರುವ ನಂಟೇನು ಅನ್ನೋದರ ವಿಚಾರದ ಬಗ್ಗೆ ತಿಳಿದುಕೊಳ್ಳೋಣ!
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯ ಈ ಮಹತ್ವ ಸಂಗತಿಗಳ ಬಗ್ಗೆ ನಿಮಗೆಷ್ಟು ಗೊತ್ತು? ಭಾರತೀಯರು ಓದಲೇಬೇಕಾದ ಸ್ಟೋರಿ
ಕೆಂಪುಕೋಟೆ ಈ ದೇಶದ ಇತಿಹಾಸದ ಒಂದೊಂದು ಕಥೆಯನ್ನು ಹೇಳುತ್ತದೆ. 400 ವರ್ಷಗಳ ಈ ದೇಶದ ಇತಿಹಾಸಕ್ಕೆ ಮೌನ ಸಾಕ್ಷಿಯಾಗಿ ನಿಂತಿದೆ ಈ ಕೋಟೆ.
ಅಂದಿನಿಂದಲೂ ಈ ಒಂದು ಪರಂಪರೆಯ ಮೂಲಕ ಕೆಂಪುಕೋಟೆ ಬ್ರಿಟಿಷ್ ವಶಾತುಶಾಹಿಯ ಅಂತ್ಯದ ಹಾಗೂ ಭಾರತದ ಸಾರ್ವಭೌಮತ್ವದ ಹೆಗ್ಗುರುತಾಗಿ ನಿಲ್ಲುತ್ತದೆ. ಅಂದಿನಿಂದ ಇಂದಿನವರೆಗೂ ಅದೇ ಪರಂಪರೆಯನ್ನು ದೇಶದ ಎಲ್ಲಾ ಪ್ರಧಾನಿಗಳು ಮುಂದುವರಿಸಿಕೊಂಡು ಬಂದಿದ್ದಾರೆ. ಕೆಂಪುಕೋಟೆ ಕೇವಲ ಮೊಘಲರ ಕಾಲದ ಪಳೆಯುಳಿಕೆಯಾಗಿ ಉಳಿಯುವ ಬದಲು. ಈ ದೇಶದ ಸಾರ್ವಭೌಮತ್ವದ ಹೆಗ್ಗುರುತಾಗಿ ಸುಮಾರು 400 ವರ್ಷಗಳಿಂದ ಸಾಗಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ