Advertisment

‘ದೇವರ ಸರೋವರ’ ಅತ್ಯಂತ ಅಪಾಯಕಾರಿ..! ಪ್ರಾಣಿ-ಪಕ್ಷಿಗಳು ನೀರಿಗೆ ಹೋದ ತಕ್ಷಣ ಕಲ್ಲುಗಳಾಗಿ ಬಿಡುತ್ತವೆ..!

author-image
Ganesh
Updated On
‘ದೇವರ ಸರೋವರ’ ಅತ್ಯಂತ ಅಪಾಯಕಾರಿ..! ಪ್ರಾಣಿ-ಪಕ್ಷಿಗಳು ನೀರಿಗೆ ಹೋದ ತಕ್ಷಣ ಕಲ್ಲುಗಳಾಗಿ ಬಿಡುತ್ತವೆ..!
Advertisment
  • ರಕ್ತದ ಹಾಗೆ ಕೆಂಪಾಗಿರುವ ಸರೋವರದ ಬಗ್ಗೆ ಗೊತ್ತಾ?
  • ವಿಶ್ವದ ಅತ್ಯಂತ ಮಾರಕ ಜಲರಾಶಿಗಳನ್ನು ಹೊಂದಿದೆ
  • ಪ್ರಾಣಿಗಳು ಗಟ್ಟಿಯಾಗುತ್ತದೆ, ಕಲ್ಲಿನಂತೆ ಆಗುತ್ತವೆ

ಆಫ್ರಿಕಾದಲ್ಲಿ ರಕ್ತದ ಹಾಗೆ ಕೆಂಪಾಗಿರುವ ಸರೋವರ ಒಂದಿದೆ. ಅದರ ಹೆಸರು ನ್ಯಾಟ್ರಾನ್ (Lake Natron). ಇದು ಭಯಾನಕ ಸರೋವರಾಗಿದ್ದು, ಇದು ಪ್ರಾಣಿಗಳನ್ನೂ ಕಲ್ಲುಗಳಾಗಿ ಪರಿವರ್ತಿಸುತ್ತದೆ. ಇದು ವಿಶ್ವದ ಅತ್ಯಂತ ಮಾರಕ ಜಲರಾಶಿಗಳಲ್ಲಿ ಒಂದಾಗಿದೆ. ನ್ಯಾಟ್ರಾನ್ ಸರೋವರದ ನೀರು ಕಾಸ್ಟಿಕ್ ಕ್ಷಾರೀಯ ಬ್ರೈನ್ ಆಗಿ ಮಾರ್ಪಟ್ಟಿದೆ. ಮೇಲ್ಮೈಯಲ್ಲಿ ಉಪ್ಪಿನ ಪದರವನ್ನು ಬಿಡುತ್ತದೆ. ನೀರಿನಲ್ಲಿ ಕಂಡು ಬರುವ ಸೂಕ್ಷ್ಮಾಣು ಜೀವಿಗಳ ಕಾರಣದಿಂದ ಹೆಚ್ಚಾಗಿ ಕೆಂಪು ಅಥವಾ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ.

Advertisment

ಇದನ್ನೂ ಓದಿ:ಔಟ್ ಆಗಿದ್ಕೆ ಕೋಪ.. ನೀರಿನ ಬಾಕ್ಸ್​ಗೆ ಬ್ಯಾಟ್​​ನಿಂದ ಬಡಿದ ಕೊಹ್ಲಿ -ವಿಡಿಯೋ

ಬಣ್ಣ ಯಾಕೆ ಕೆಂಪು..?
ನ್ಯಾಟ್ರಾನ್ ಸರೋವರದ ನೀರನಲ್ಲಿ ಹೆಚ್ಚಿನ ಪ್ರಮಾಣದ ಸೈನೋಬ್ಯಾಕ್ಟೀರಿಯಾ (Cyanobacteria) ಇರುತ್ತದೆ. ಈ ಸೈನೋಬ್ಯಾಕ್ಟೀಯಾಗಳು ನೀರಿನೊಳಗೆ ಬೆಳೆಯುವ ಸೂಕ್ಷ್ಮಜೀವಿಗಳ ಒಳಗೆ ಬೆಳೆಯುತ್ತವೆ. ಇಲ್ಲಿರುವ ಉಪ್ಪನ್ನು ಸೂಕ್ಷ್ಮಜೀವಿಗಳು ಹೆಚ್ಚಾಗಿ ಇಷ್ಟಪಡುತ್ತವೆ. ಈ ಬ್ಯಾಕ್ಟೀರಿಯಾಗಳಿಂದಾಗಿಯೇ ಸರೋವರದ ಬಣ್ಣವು ಕೆಂಪಾಗಿದೆ.

ಗಟ್ಟಿಯಾಗುತ್ತದೆ, ಕಲ್ಲಿನಂತೆ ಆಗುತ್ತದೆ
ಸರೋವರದ ನೀರನಲ್ಲಿ ಸೋಡಾ ಮತ್ತು ಉಪ್ಪಿನ ಪ್ರಮಾಣವು ತುಂಬಾ ಹೆಚ್ಚಾಗಿದೆ. ಪ್ರಾಣಿಗಳು ಹೇಗೆ ಸಾಯುತ್ತವೆ. ಅವು ಯಾಕೆ ಕಾಂಕ್ರೀಟ್ ಆಗಿ ಪರಿವರ್ತನೆ ಆಗುತ್ತವೆ ಅನ್ನೋದಕ್ಕೆ ಕಾರಣ ತಿಳಿದಿಲ್ಲ. ನೀರಿಗೆ ಇಳಿಯುತ್ತಿದ್ದಂತೆಯೇ ಅವುಗಳ ದೇಹ ಕೊಳೆಯಲು ಶುರುವಾಗುತ್ತದೆ. ನಂತರ ಆ ಪ್ರಾಣಿ, ಪಕ್ಷಿಗಳ ಆಕಾರವು ಸರೋವರದ ರೀತಿಯಲ್ಲೇ ಆಗುತ್ತದೆ. ಗಟ್ಟಿಯಾಗುತ್ತದೆ, ಕಲ್ಲಿನಂತೆ ಕಾಣುತ್ತದೆ. ಸಾವಿನ ನಂತರ ಪ್ರಾಣಿಗಳ ದೇಹವು ಅದೇ ರೂಪದಲ್ಲಿ ಉಳಿಯುತ್ತದೆ. ಇನ್ನು ಇದೇ ಸರೋವರದ ಮೇಲೆ ಕಾಲೋಚಿತವಾಗಿ ರೂಪುಗೊಂಡ ದ್ವೀಪಗಳಲ್ಲಿ ಕೆಲವು ಪಕ್ಷಿ ಪ್ರಭೇದಗಳು ಗೂಡುಕಟ್ಟುತ್ತವೆ. ಇದು ಕಾಸ್ಟಿಕ್ ಪರಿಸರದ ಕಾರಣದಿಂದ ಪರಭಕ್ಷಗಳಿಂದ ರಕ್ಷಿಸಲ್ಪಟ್ಟಿದೆ.

Advertisment

ಇದನ್ನೂ ಓದಿ:KL ರಾಹುಲ್ ಮಾಡಿದ ದೊಡ್ಡ ತಪ್ಪು ಇದು; ಬೆಂಗಳೂರಿನ ಆಟಕ್ಕೆ ಬೆಲೆ ತೆತ್ತ ಸ್ಟಾರ್​​..!

ಅಂದ್ಹಾಗೆ ಈ ಸರೋವರವು 35 ಮೈಲಿಗಳಷ್ಟು ಉದ್ದ, 14 ಮೈಲಿಗಳಷ್ಟು ಅಗಲವಿದೆ. ಅದರ ಗಾತ್ರದ ಹೊರತಾಗಿಯೂ ತಾಂಜಾನಿಯಾದ ಆರನೇ ದೊಡ್ಡ ಸರೋವರ ಇದಾಗಿದೆ. ದೇವರ ಪರ್ವತ ಎಂದೂ ಕೂಡ ಕರೆಯುತ್ತಾರೆ. ಮಸಾಯಿ ಜನರು ನ್ಯಾಟ್ರಾನ್ ಸರೋವರದ ಸುತ್ತಲಿನ ಪ್ರದೇಶಗಳಲ್ಲ ವಾಸಿಸುತ್ತಿದ್ದಾರೆ. ಅದನ್ನು ಅವರು ಪವಿತ್ರವೆಂದು ಪರಿಗಣಿಸುತ್ತಾರೆ. ತಜ್ಞರ ಪ್ರಕಾರ ಪ್ರಾಚೀನ ಈಜಿಪ್ಟನ್​​ನವರು ಸತ್ತವರ ದೇಹಗಳಲ್ಲಿ ಮಮ್ಮಿ ಮಾಡಲು ಸೋರವೋವರನ್ನು ಬಳಸುತ್ತಿದ್ದರು ಎಂದು ನಂಬಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment