/newsfirstlive-kannada/media/post_attachments/wp-content/uploads/2025/01/SHOLAY-DELETED-SCENE.jpg)
ಶೋಲೆ ಸಿನಿಮಾ ಯಾರಿಗೆ ಗೊತ್ತಿಲ್ಲ. ಬಾಲಿವುಡ್ ಸಿನಿಮಾ ಜಗತ್ತು ಎಂದೂ ಮರೆಯದ ಒಂದು ದಾಖಲೆಯನ್ನು ಕ್ರಿಯೇಟ್ ಮಾಡಿದ ಸಿನಿಮಾ. 50 ವರ್ಷಗಳು ತುಂಬಲು ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ . ಸತತ 49 ವರ್ಷಗಳ ಕಾಲ ಅದೇ ಚಾರ್ಮ್​ ಉಳಿಸಿಕೊಂಡು ಬಂದ ಸಿನಿಮಾ ಶೋಲೆಯದ್ದು. ಈಗ 49 ವರ್ಷಗಳ ಬಳಿಕ ಮತ್ತೆ ಸುದ್ದಿಯಲ್ಲಿದೆ ಶೋಲೆ ಸಿನಿಮಾ. 49 ವರ್ಷ ಹಿಂದ ಸೆನ್ಸಾರ್ ವಿಚಾರವಾಗಿ ಕಟ್ ಮಾಡಲಾಗಿದ್ದ ಸಿನಿಮಾದ ಸೀನ್​ನ್ನ ಈಗ ಮತ್ತೆ ಸೇರಿಸಲಾಗಿದೆ.
/newsfirstlive-kannada/media/post_attachments/wp-content/uploads/2025/01/SHOLAY-DELETED-SCENE-1.jpg)
ಓಲ್ಡ್ ಇಸ್ ಗೋಲ್ಡ್ ಎಂಬ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಮರುಸೇರ್ಪಡೆಯಾದ ಸೀನ್​ ಫೋಟೋ ಹಾಕಲಾಗಿದೆ. ಸಿನಿಮಾ ಎಡಿಟ್ ಆಗಿ ಬಿಡುಗಡೆ ಆದ ಮೇಲೆ ಕಟ್ ಮಾಡಲಾಗಿದ್ದ ಸೀನ್​ನ್ನು ಈಗ ವಾಪಸ್ ಸೇರಿಸಲಾಗಿದೆ. ಸಿನಿಮಾದಲ್ಲಿ ಗಬ್ಬರ್ ಸಿಂಗ್ ಪಾತ್ರದ ಮತ್ತಷ್ಟು ನಿರ್ದಯ ಹಾಗೂ ಕ್ರೂರ ವ್ಯಕ್ತಿತ್ವದ ಸೀನ್ ಮರುಸೇರ್ಪಡಿಸಲಾಗಿದ್ದು.. ಸದ್ಯ ಸಿನಿಮಾದ ಆ ಸನ್ನಿವೇಶವನ್ನು ನೋಡಲು ಸಿನಿ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ:ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್.. ಹೊಸ ಫೋಟೋ ವೈರಲ್!
1975ರಲ್ಲಿ ಬಿಡುಗಡೆಯಾಗಿದ್ದ ಶೋಲೆ ಸಿನಿಮಾ ಭಾರತೀಯ ಸಿನಿಮಾ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ನೆಟ್ಟಿತ್ತು. ಭಾರತೀಯ ಸರ್ವಶ್ರೇಷ್ಠ ಸಿನಿಮಾಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು. ರಮೇಶ್ ಸಿಪ್ಪಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಧರ್ಮೇಂದ್ರ, ಹೇಮಾಮಾಲಿನಿ, ಜಯಾ ಬಚ್ಚ್, ಸಂಜೀವ್ ಕುಮಾರ್, ಅಮ್ಜದ್ ಖಾನ್ ಸೇರಿ ಹಲವು ದಿಗ್ಗಜರ ನಟನೆಯಿತ್ತು. ಈ ಸಿನಿಮಾ ಸಂಭಾಷಣೆಯಿಂದ ಹಾಗೂ ಗಬ್ಬರ್ ಸಿಂಗ್ ಎಂಬ ವಿಲಿನ್ ಪಾತ್ರದಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಭಾರತೀಯ ಆ್ಯಕ್ಷನ್ ಸಿನಿಮಾಗಳ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯಿಂದ ಗುರುತಿಸಿಕೊಂಡಿತ್ತು ಶೋಲೆ ಸಿನಿಮಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us