/newsfirstlive-kannada/media/post_attachments/wp-content/uploads/2025/06/REDMI_PAD_2_1.jpg)
ಮೊಬೈಲ್ ಬಂದಿದ್ದೇ ಬಂದಿದ್ದು ಜಗತ್ತಿನಲ್ಲಿ ಬದಲಾವಣೆ ಆಗುತ್ತ ಹೊರಟಿದೆ. ಮೊದಲು ಕೀಪ್ಯಾಡ್ ಮೊಬೈಲ್ಗಳಿದ್ದವು. ಈಗ ಎಲ್ಲಿ ನೋಡಿದರೂ ಸ್ಮಾರ್ಟ್ ಸ್ಕ್ರೀನ್ ಟಚ್ ಮೊಬೈಲ್ಸ್ ಹೆಚ್ಚಾಗಿವೆ. ದಿನನಿತ್ಯ ಹಲವಾರು ಕಂಪನಿಗಳು ಮೊಬೈಲ್ ತಂತ್ರಜ್ಞಾನದಲ್ಲಿ ಸಾಕಷ್ಟು ಬೆಳವಣಿಗೆ ಸಾಧಿಸುತ್ತಿವೆ. ಇಂತಹ ಬೆಳವಣಿಗೆ ಬೆನ್ನಲ್ಲೇ ರೆಡ್ಮಿ ಪ್ಯಾಡ್ 2 (Redmi Pad 2 ) ಲಾಂಚ್ ಆಗುತ್ತಿದೆ.
ಮೊಬೈಲ್ಗಿಂತ ಒಳ್ಳೆಯ ಫೀಚರ್ಸ್ ಹೊಂದಿರುವ ರೆಡ್ಮಿ ಪ್ಯಾಡ್ 2 ಅನ್ನು ಜೂನ್ 18 ರಂದು ಅಂದರೆ ನಾಳೆ ಭಾರತದಲ್ಲಿ ಕಂಪನಿ ಲಾಂಚ್ ಮಾಡುತ್ತಿದೆ. ಈ ರೆಡ್ಮಿ ಪ್ಯಾಡ್ 2 ಲಾಂಚ್ಗೂ ಮೊದಲೇ ಮೊಬೈಲ್ ಪ್ರಿಯರ ಮನ ಗೆದ್ದಿದೆ. ಕೆಲವು ವಿಶೇಷಣಗಳು ಹಾಗೂ ಮತ್ತು ಫೀಚರ್ಸ್ ಹೊಂದಿದ್ದು ಜನರಿಗೆ ಬೇಗನೇ ಹತ್ತಿರವಾಗುವಂತೆ ಕಾಣುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:ಕರ್ಣ ಸೀರಿಯಲ್ ಲಾಂಚ್ ಆಗಲೇ ಇಲ್ಲ.. ಬೇಸರದಲ್ಲೇ ಕ್ಷಮೆ ಕೇಳಿದ ನಟ ಕಿರಣ್ ರಾಜ್
ರೆಡ್ಮಿ ಪ್ಯಾಡ್ 2 ಜೊತೆಗೆ ರೆಡ್ಮಿ ಸ್ಮಾರ್ಟ್ ಪೆನ್ ನೀಡಲಾಗುವುದು. ಇದು 11 ಇಂಚು ಇರಲಿದ್ದು 2.5K ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಇದೆ. ಈ ಡಿವೈಸ್ ಮೀಡಿಯಾ ಟೆಕ್ ಹೆಲಿಯೊ ಜಿ100 ಪ್ರೊಸೆಸರ್ (MediaTek Helio G100 processor) ಹೊಂದಿರುತ್ತದೆ. 2 ಟಿಬಿ ವರೆಗೆ ಸಂಗ್ರಹಣೆ (Storage) ಇರುತ್ತದೆ. ಡಾಲ್ಬಿ ಅಟ್ಮಾಸ್ಗೆ ಸಪೋರ್ಟ್ ಆಗಿ ಕ್ವಾಡ್ ಸ್ಪೀಕರ್‌ಗಳಿಂದ ಆಡಿಯೋ ಕಾರ್ಯಕ್ಷಮತೆ ಹೆಚ್ಚಿಸಲಾಗುತ್ತದೆ.
ರೆಡ್ಮಿ ಪ್ಯಾಡ್ 2 ಹಿಂಭಾಗದ ಕ್ಯಾಮೆರಾ 8MP ಇರುತ್ತದೆ. ಮುಂಭಾಗದ ಕ್ಯಾಮೆರಾ 5MP ಇದೆ. ಈ ಪ್ಯಾಡ್ 18W ವೇಗದ ಚಾರ್ಜಿಂಗ್ ಸಪೋರ್ಟ್ ಇದ್ದು 9,000mAh ಬ್ಯಾಟರಿಯನ್ನು ಹೊಂದಿರುತ್ತದೆ. ಇನ್ನು ಈ ಎಲ್ಲ ಹೇಳಿದ ಮೇಲೆ ಇದರ ಬೆಲೆ ಕೂಡ ಹೇಳಬೇಕಲ್ವಾ. ಭಾರತದಲ್ಲಿ ಒಂದು ರೆಡ್ಮಿ ಪ್ಯಾಡ್ 2 ಬೆಲೆ 19,000 ದಿಂದ 20,000 ರೂಪಾಯಿಗಳು ಆಗಿರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ