ಗ್ರಾಹಕರಿಗೆ ಸಿಹಿ ಸುದ್ದಿ! ಸಂಸ್ಕರಿಸಿದ ಅಡುಗೆ ಎಣ್ಣೆಯ ಆಮದು ಸುಂಕ ಇಳಿಕೆ

author-image
Harshith AS
Updated On
ಪ್ರಾತಿನಿಧಿಕ ಚಿತ್ರ (Pic Credit: Healthline)
Advertisment
  • ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ.. ಅಡುಗೆ ಎಣ್ಣೆ ಆಮದು ಸುಂಕ ಇಳಿಕೆ
  • ಶೇ.17.5 ರಿಂದ ಶೇ.12.5ಕ್ಕೆ ಇಳಿಸಿದೆ ಆಮದು ಸುಂಕ ಇಳಿಕೆ
  • ಭಾರತ ಕಚ್ಛಾ ರೂಪದ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ

ಕೇಂದ್ರ ಸರ್ಕಾರ ಸಂಸ್ಕರಿಸಿದ ಅಡುಗೆ ಎಣ್ಣೆಯ ಆಮದು ಸುಂಕ ಇಳಿಕೆ ಮಾಡಿದೆ. ಸೋಯಾ, ಸೂರ್ಯಕಾಂತಿ ಎಣ್ಣೆ ಆಮದು ಸುಂಕವನ್ನು ಕಡಿಮೆ ಮಾಡಿದೆ.

ಕೇಂದ್ರ ಸರ್ಕಾರ ಶೇ.17.5 ರಿಂದ ಶೇ.12.5ಕ್ಕೆ ಇಳಿಸಿದೆ. ದೇಶದಲ್ಲಿ ಅಡುಗೆ ಎಣ್ಣೆ ಲಭ್ಯತೆ ಸುಧಾರಿಸಲು ಈ ನಿರ್ಣಯ ಕೈಗೊಂಡಿದೆ.

ಕಚ್ಛಾ ಅಡುಗೆ ಎಣ್ಣೆ ಆಮದು ಸುಂಕ ಇಳಿಕೆ ಇಲ್ಲ. ಆದರೆ ಭಾರತ ಕಚ್ಛಾ ರೂಪದ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಸೋಯಾ, ಸೂರ್ಯಕಾಂತಿ ಎಣ್ಣೆ ಕಚ್ಛಾ ರೂಪದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಸಂಸ್ಕರಿಸಿದ ಎಣ್ಣೆ ಆಮದು ಸುಂಕ ಮಾತ್ರ ಇಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment