ಬಿಗ್ ಬಾಸ್ ಖ್ಯಾತಿಯ ವಿನಯ್‌ಗೆ ರಿಲೀಫ್‌; ರಜತ್‌ ಕಿಶನ್ ಮತ್ತೊಮ್ಮೆ ಜೈಲು ಪಾಲು!

author-image
admin
Updated On
ಬಿಗ್ ಬಾಸ್ ಖ್ಯಾತಿಯ ವಿನಯ್‌ಗೆ ರಿಲೀಫ್‌; ರಜತ್‌ ಕಿಶನ್ ಮತ್ತೊಮ್ಮೆ ಜೈಲು ಪಾಲು!
Advertisment
  • ಮಚ್ಚು ಹಿಡಿದ ರೀಲ್ಸ್ ಮಾಡಿದ್ದ ರಜತ್ ಕಿಶನ್‌ಗೆ ಮತ್ತೆ ಸಂಕಷ್ಟ
  • 2ನೇ ಬಾರಿ ಪರಪ್ಪನ ಅಗ್ರಹಾರ ಜೈಲು ಪಾಲಾದ ಬಿಗ್‌ಬಾಸ್ ಸ್ಪರ್ಧಿ
  • ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದ ಪೊಲೀಸರು

ಬೆಂಗಳೂರು: ತುಕ್ಕು ಹಿಡಿದ ಮಚ್ಚು ಕೈಯಲ್ಲಿ ಇಡ್ಕೊಂಡು ರೀಲ್ಸ್ ಮಾಡಿದ್ದ ಬಿಗ್‌ ಬಾಸ್ ಖ್ಯಾತಿಯ ರಜತ್ ಕಿಶನ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ 24ನೇ ACJM ಕೋರ್ಟ್‌ ಇಬ್ಬರು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ರಜತ್ ಕಿಶನ್ ಅವರು ಮತ್ತೆ 2ನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.

ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ಪೊಲೀಸರು ಇಂದು ವಿನಯ್ ಹಾಗೂ ರಜತ್ ಇಬ್ಬರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಈ ಕೇಸ್ ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಆರೋಪಿಗಳ ಈ ಹಿಂದಿನ ವಾರೆಂಟ್ ರೀ ಕಾಲ್ ಮಾಡಲಾಗಿದ್ದು, ರಜತ್ ಕಿಶನ್‌ಗೆ ಬಿಗ್ ಶಾಕ್ ಎದುರಾಗಿದೆ.

publive-image

ಇಂದು ಆಗಿದ್ದೇನು?
ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣ ಸಂಬಂಧ ಬಸವೇಶ್ವರ ನಗರ ಪೊಲೀಸರು ಇಂದು ರಜತ್ ಕಿಶನ್ ಅಲಿಯಾಸ್ ಬುಜ್ಜಿಗೆ ನೋಟಿಸ್‌ ನೀಡಿದ್ದರು. ನೋಟಿಸ್ ಹಿನ್ನೆಲೆಯಲ್ಲಿ ರಜತ್ ಇಂದು ಮತ್ತೆ ಬಸವೇಶ್ವರ ನಗರ ಪೊಲೀಸ್‌ ಠಾಣೆಗೆ ಹಾಜರಾಗಿದ್ದು, ಈ ವೇಳೆ ತನಿಖೆ ನಡೆಸಿದ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ರಜತ್‌ರನ್ನು ಬಂಧಿಸಿದ ಪೊಲೀಸರು ಮಲ್ಲೇಶ್ವರಂ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದರು. ಆ ಬಳಿಕ ಕೋರ್ಟ್‌ ವಿಚಾರಣೆಗೆ ಹಾಜರುಪಡಿಸಲಾಯಿತು. ಈ ಕೇಸ್ ವಿಚಾರಣೆ ನಡೆಸಿದ ಕೋರ್ಟ್ ರಜತ್‌ ಅವರಿಗೆ ಏಪ್ರಿಲ್‌ 29ನೇ ತಾರೀಖಿನವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಇದನ್ನೂ ಓದಿ: BREAKING: ಬಿಗ್ ಬಾಸ್ ಖ್ಯಾತಿಯ ರಜತ್‌ ಕಿಶನ್ ಮತ್ತೆ ಬಂಧನ.. ಕಾರಣವೇನು? 

ಕೋರ್ಟ್‌ನಲ್ಲಿ ಏನಾಯ್ತು?
ಬಸವೇಶ್ವರ ನಗರ ಪೊಲೀಸರು ಆರೋಪಿ ರಜತ್‌ರನ್ನು ಕೋರ್ಟ್‌ಗೆ ಹಾಜರುಪಡಿಸಿದರು. ಈ ವೇಳೆ ರಜತ್ ಪರ ವಕೀಲರು ವಿಚಾರಣೆಗೆ ಅಂತ ಪೊಲೀಸ್ ಠಾಣೆಗೆ ಹೋದಾಗ ಅರೆಸ್ಟ್ ಮಾಡಿದ್ದಾರೆ ಎಂದರು.
ಪ್ರತಿವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಆರೋಪಿಗಳು ಮೊದಲನೇ ಹಿಯರಿಂಗ್ ಡೇಟ್‌ಗೆ ಹಾಜರಾಗಿಲ್ಲ. ಇವರಿಗೆ ಜಾಮೀನು ರದ್ದು ಮಾಡಿ ಎಂದು ಮನವಿ ಮಾಡಿದರು.

ಆಗ ಆರೋಪಿ ಪರ ವಕೀಲರು ಸ್ವಾಮಿ ಅದು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಇನ್ನು ಮುಂದೆ ಈ ರೀತಿ ಆಗಲ್ಲ ಸ್ವಾಮಿ. ಮುಂದೆ ಹೀಗಾಗದಂತೆ ನೋಡ್ಕೊಳ್ತೀವಿ. ವಾರೆಂಟ್ ರೀ ಕಾಲ್ ಮಾಡಿಕೊಡಿ ಸ್ವಾಮಿ ಎಂದು ಮನವಿ ಮಾಡಿದರು.

publive-image

ಈ ರೀಲ್ಸ್ ಪ್ರಕರಣದಲ್ಲಿ ಆರೋಪಿ ರಜತ್‌ಗೆ ಮಾತ್ರ ವಾರೆಂಟ್ ಇದೆ. ವಿನಯ್‌ಗೆ ವಾರೆಂಟ್ ಇಲ್ಲ. ಹೀಗಾಗಿ ವಿನಯ್ ಗೌಡ ಅವರಿಗೆ ಇಂದು ರಿಲೀಫ್ ಸಿಕ್ಕಿದೆ. ರಜತ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಮತ್ತೊಮ್ಮೆ ಪರಪ್ಪನ ಅಗ್ರಹಾರ ಜೈಲಿನಿಂದ ತೆರಳುತ್ತಿದ್ದಾರೆ.

ಇದೇ ವೇಳೆ ರಜತ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು, ನಾಳೆಗೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment