ಮಚ್ಚಿನ ಸುತ್ತಾ ನಡೆದಿದ್ದೇನು? ವಿಡಿಯೋ ರಿಲೀಸ್ ಮಾಡಿದ ವಿನಯ್‌ ಗೌಡ; ಕಿಚ್ಚ ಸುದೀಪ್‌ಗೆ ಸ್ಪೆಷಲ್ ಥ್ಯಾಂಕ್ಸ್!

author-image
admin
Updated On
ಮಚ್ಚಿನ ಸುತ್ತಾ ನಡೆದಿದ್ದೇನು? ವಿಡಿಯೋ ರಿಲೀಸ್ ಮಾಡಿದ ವಿನಯ್‌ ಗೌಡ; ಕಿಚ್ಚ ಸುದೀಪ್‌ಗೆ ಸ್ಪೆಷಲ್ ಥ್ಯಾಂಕ್ಸ್!
Advertisment
  • ಮಚ್ಚಿನ ಕೇಸ್‌ನಲ್ಲಿ ರಿಲೀಸ್ ಆದ ಬಳಿಕ ವಿನಯ್ ಗೌಡ ಏನಂದ್ರು?
  • ನನ್ನ ಬಿಗ್ ಬ್ರದರ್‌, ನನ್ನ ಹಿತೈಷಿ, ನನ್ನ ಗಾಡ್‌ಫಾದರ್ ಕಿಚ್ಚ ಸುದೀಪ್
  • ಪೊಲೀಸರು ನಾನೊಬ್ಬ ಸೆಲೆಬ್ರಿಟಿ ಎಂದು ಟ್ರೀಟ್ ಮಾಡಲೇ ಇಲ್ಲ!

ರಜತ್‌ ಜೊತೆ ಮಚ್ಚಿನ ರೀಲ್ಸ್ ಮಾಡಿ ಫಜೀತಿಗೆ ಸಿಲುಕಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ವಿನಯ್‌ ಗೌಡ ಅವರು ಜೈಲಿನಿಂದ ರಿಲೀಸ್ ಆಗಿದ್ದಾರೆ. ಇಂದು ಬೆಳಗ್ಗೆ ಪರಪ್ಪನ ಅಗ್ರಹಾರದಿಂದ ಹೊರ ಬಂದ ವಿನಯ್ ಗೌಡ ಅವರು ವಿನಮ್ರವಾಗಿ ಕ್ಷಮೆಯಾಚಿಸಿದ್ದಾರೆ. ಒಂದು ಮಚ್ಚಿನ ಕಥೆಯಲ್ಲಿ ಏನೆಲ್ಲಾ ಆಯ್ತು ಅನ್ನೋದನ್ನು ವಿವರಿಸಿದ್ದಾರೆ.

ಮಚ್ಚಿನ ಕೇಸ್‌ನಲ್ಲಿ ರಿಲೀಸ್ ಆದ ಬಳಿಕ ವಿನಯ್ ಗೌಡ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹಿತೈಷಿಗಳು, ಅಭಿಮಾನಿಗಳಿಗೋಸ್ಕರ ವಿಡಿಯೋ ರಿಲೀಸ್ ಮಾಡಿದ್ದಾರೆ.

ಪ್ರತಿಯೊಬ್ಬರಿಗೂ ಸಾರಿ..
ಕಳೆದ 4 ದಿನಗಳಿಂದ ರಾಜ್ಯದಲ್ಲಿ 1 ಮಚ್ಚಿನ ಕಥೆ ನಡೀತು. ಅದಕ್ಕೋಸ್ಕರ ನಾನು ಪ್ರತಿಯೊಬ್ಬರಿಗೂ ಸಾರಿ ಕೇಳಿ ಈ ವಿಡಿಯೋ ಮಾಡುತ್ತಿದ್ದೇನೆ. ಮೊದಲು ನನ್ನಿಂದ ನನ್ನ ಹೆಂಡತಿ, ಮಗನಿಗೆ ತೊಂದರೆಯಾಗಿದೆ. ನನ್ನ ಸ್ನೇಹಿತರು ರಾತ್ರಿಯಲ್ಲೂ ನನಗಾಗಿ ಪೊಲೀಸ್ ಸ್ಟೇಷನ್, ಜೈಲಿನ ಮುಂದೆ ಕಾದಿದ್ದಾರೆ. ಅವರಿಗೆ ಕ್ಷಮೆಯಾಚಿಸುತ್ತೇನೆ.

ನಾನು ಮಾಡಿದ ಮಚ್ಚಿನ ವಿಡಿಯೋದಿಂದ ಎಲ್ಲರಿಗೂ ತೊಂದರೆಯಾಗಿದೆ. ಇದರಲ್ಲಿ ನನ್ನ ತಪ್ಪಿದೆ. ನಾನು ಎಚ್ಚರಿಕೆಯಿಂದ ಇರಬೇಕಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ನನ್ನ ಬಗ್ಗೆ ಅಭಿಮಾನಿಗಳು ಮಾತನಾಡಿರುವ ಎಲ್ಲಾ ಮಾತುಗಳನ್ನ ನೋಡಿದ್ದೇನೆ.

publive-image

‘ಮಚ್ಚು ಹಿಡಿದಿದ್ದು ತಪ್ಪು..’
ವಿನಯ್ ಗೌಡ ಅವರು ಮಾಡಬಾರದ ಮಚ್ಚಿನಿಂದ ರೀಲ್ಸ್‌ ಮಾಡಿದ್ದು ತಪ್ಪಾಗಿದೆ. ಒಂದು ಮಚ್ಚಿನಿಂದ ಇಷ್ಟೆಲ್ಲಾ ತೊಂದರೆ ಆಗಿದೆ. ಈ ಒಂದು ವಿಷ್ಯ ಇಷ್ಟೊಂದು ದೊಡ್ಡ ತಪ್ಪಾಗುತ್ತೆ ಅನ್ನೋದು ಗೊತ್ತಿರಲಿಲ್ಲ. ನನ್ನದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಮಚ್ಚು ಹಿಡಿದು ನನ್ನ ಫಾಲೋವರ್ಸ್‌ಗೂ ಈ ರೀತಿಯ ಮೆಸೇಜ್ ಕೊಡಬಾರದಿತ್ತು. ನನ್ನ ಅಭಿಮಾನಿಗಳೇ ದಯವಿಟ್ಟು ನನ್ನ ಕ್ಷಮಿಸಿ.

publive-image

ಪೊಲೀಸ್ ಇಲಾಖೆ ಅವ್ರು..
ಈ ಪ್ರಕರಣದಲ್ಲಿ ಪೊಲೀಸರು ಅವರ ತನಿಖೆಯನ್ನು ಮಾಡಿದ್ದಾರೆ. ನಾನೊಬ್ಬ ಸೆಲೆಬ್ರಿಟಿ ಎಂದು ಟ್ರೀಟ್ ಮಾಡಲಿಲ್ಲ. ನಮ್ಮನ್ನು ಕಾಮನ್ ಮ್ಯಾನ್ ರೀತಿ ನೋಡಿ ವರ್ತಿಸಿದ್ದಾರೆ. ದಯವಿಟ್ಟು ಪೊಲೀಸರ ಮೇಲೆ ಯಾವುದೇ ಆರೋಪವನ್ನು ಮಾಡಬೇಡಿ ಎಂದು ವಿನಯ್ ಗೌಡ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಜೈಲಿಂದ ರಿಲೀಸ್ ಆದ ರಜತ್, ವಿನಯ್.. ಹೇಳಿದ್ದೇನು? ಟಾಪ್‌ 10 ಫೋಟೋ ಇಲ್ಲಿದೆ! 

ಕಿಚ್ಚ ಸುದೀಪ್ ಬಗ್ಗೆ
ಎಲ್ಲರಲ್ಲೂ ಕ್ಷಮೆಯಾಚಿಸಿ ವಿಡಿಯೋ ಮಾಡಿದ ವಿನಯ್ ಗೌಡ ಅವರು ಕಿಚ್ಚ ಸುದೀಪ್ ಅವರಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ನನ್ನ ಹಾಗೂ ನನ್ನ ಕುಟುಂಬದ ಬೆಂಬಲಕ್ಕೆ ನಿಂತ ನನ್ನ ಬಿಗ್ ಬ್ರದರ್‌, ನನ್ನ ಹಿತೈಷಿ, ನನ್ನ ಗಾಡ್‌ಫಾದರ್ ಕಿಚ್ಚ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment