/newsfirstlive-kannada/media/post_attachments/wp-content/uploads/2025/04/Reelputra.jpg)
ಮೊಬೈಲ್ ಮಾಯೆ ಎನ್ನವುದು ದಿನದಿಂದ ದಿನಕ್ಕೆ ಹೊಸದೊಂದು ತೋರಿಸಲು ಜನರನ್ನ ಪ್ರೇರಿಪಿಸುವಂತಿದೆ. ಪ್ರಸ್ತುತ ಯುವಕ, ಯುವತಿಯರೆಲ್ಲ ರೀಲ್ಸ್ ಲೋಕದಲ್ಲಿ ಮುಳುಗಿದ್ದು ತಲೆಗೆ ಹೊಳೆದಿದ್ದನ್ನು ತಕ್ಷಣ ಮಾಡಲು ಹೋಗಿ ಕೆಲವರು ಅನಾಹುತಕ್ಕೆ ಒಳಗಾಗುತ್ತಿದ್ದಾರೆ. ಇನ್ನು ಕೆಲವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಇಂತಹದ್ದೆ ಒಂದು ಘಟನೆ ನಡೆದಿದ್ದು ಸದ್ಯ ರೀಲ್ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಇದೊಂದು ವಿಡಿಯೋ ಸಖತ್ ಸನ್ಷೆಷನ್ ಮೂಡಿಸಿದೆ. ಉತ್ತರ ಪ್ರದೇಶದ ಉನ್ನಾವೋ ನಗರದ ನಿವಾಸಿಯಾದ ರಂಜಿತ್ ಚೌರಾಸಿಯಾ ಎನ್ನುವ ಯುವಕ ಅಪಾಯಕಾರಿ ರೀತಿ ರೀಲ್ಸ್ ಮಾಡಿರುವುದು ಎಲ್ಲರನ್ನೂ ಬೆಚ್ಚಿಬೀಸಿದೆ. ರೈಲ್ವೆ ಹಳಿಗಳ ಮಧ್ಯೆದಲ್ಲಿ ಮೊಬೈಲ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ:RCB ಜೊತೆ ರೋಹಿತ್ ಶರ್ಮಾ ಬ್ಯಾಟಿಂಗ್.. ಕಾಮೆಂಟರಿ ಮಾಡುವವರಿಗೂ ಬೇಸರನಾ, ಏನಂದ್ರು?
ರಂಜಿತ್ ಚೌರಾಸಿಯಾ ಸೋಶಿಯಲ್ ಮೀಡಿಯಾದಲ್ಲಿ ರೀಲ್ಪುತ್ರ ಎಂದೇ ಖ್ಯಾತಿ ಪಡೆದಿದ್ದಾನೆ. ಚಿತ್ರ ವಿಚಿತ್ರವಾದ ರೀಲ್ಸ್ ಮಾಡುವ ರಂಜಿತ್ ರೈಲ್ವೆ ಹಳಿಗಳ ಮಧ್ಯೆದಲ್ಲಿ ಮೊಬೈಲ್ ಹಿಡಿದುಕೊಂಡು ಮಲಗಿದ್ದಾನೆ. ಈ ವೇಳೆ ವೇಗವಾಗಿ ಬಂದ ರೈಲು ರಂಜಿತ್ ದೇಹದ ಮೇಲೆ ಹಾದು ಹೋಗಿದೆ. ಬಳಿಕ ಮಾಡಿದ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಸಖತ್ ವೈರಲ್ ಆಗಿರುವ ಈ ವಿಡಿಯೋ 70 ಸಾವಿರಕ್ಕಿಂತ ಅಧಿಕ ವೀಕ್ಷಣೆ ಕಂಡಿದೆ.
ಹೀಗೆ ವೈರಲ್ ಆಗಿರುವ ವಿಡಿಯೋವನ್ನು ಪತ್ರಕರ್ತರೊಬ್ಬರು ಪೋಸ್ಟ್ ಮಾಡಿರುವುದನ್ನು ಗಮನಿಸಿದ ಪೊಲೀಸರು ಯುವಕನ್ನು ಬಂಧಿಸಿ ಬಳಿಕ ಜೈಲಿಗೆ ಕಳುಹಿಸಿದ್ದಾರೆ. ವಿಡಿಯೋಗೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದು ರೀಲ್ಪುತ್ರನನ್ನ ಸೇನೆಗೆ ಸೇರಿಸಬೇಕು ಎಂದು ತಮಾಷೆಯಾಗಿ ಹೇಳುತ್ತಿದ್ದಾರೆ. ಇನ್ನು ಕೆಲವರು ಹೇಳುವ ಪ್ರಕಾರ ವಿಡಿಯೋ ಮಾಡುವಾಗ ಮೊದಲು ರೀಲ್ಪುತ್ರ ರೈಲ್ವೆ ಹಳಿ ಮೇಲೆ ಕಾಣಿಸುತ್ತಾರೆ. ಬಳಿಕ ರೈಲು ಬರುವಾಗ ಮೊಬೈಲ್ ಮಾತ್ರ ಅಲ್ಲಿಟ್ಟು ತಾನು ಪಕ್ಕದಲ್ಲಿ ನಿಂತುಕೊಂಡಿದ್ದಾನೆ, ಇದು ಎಡಿಟ್ ಮಾಡಿರುವ ವಿಡಿಯೋ ಎನ್ನುತ್ತಿದ್ದಾರೆ. ಆದರೆ ಇಂತಹ ಅಪಾಯಕಾರಿ ರೀಲ್ಸ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ತೋರಿಸುವುದರಿಂದ ಇನ್ನೊಬ್ಬರಿಗೆ ತಪ್ಪು ಸಂದೇಶ ಹೋಗುತ್ತದೆ. ಹೀಗಾಗಿ ಪೊಲೀಸರು ರೀಲ್ಪುತ್ರಗೆ ಬಿಸಿ ಮುಟ್ಟಿಸಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ