/newsfirstlive-kannada/media/post_attachments/wp-content/uploads/2023/10/reels-2.jpg)
ವಿಜಯನಗರ: ಪ್ರವಾಸಿಗರು ಸೇರಿದಂತೆ ಹಂಪಿಯ ಗೈಡ್ ಬೇಕಾಬಿಟ್ಟಿಯಾಗಿ ಸ್ಮಾರಕಗಳ ಮೇಲೆ ರೀಲ್ಸ್​ ಮಾಡಿಕೊಂಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ವೈರಲ್​ ಆದ ವಿಡಿಯೋ ನೋಡಿದ ಶ್ರೀಕೃಷ್ಣ ದೇವರಾಯ ಪ್ರವಾಸಿಗರ ಸಂಘದವರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹಂಪಿಯ ನಿವಾಸಿ, ಗೈಡ್ ಆಗಿರುವ ಹೇಮಂತ್ ಎಂಬುವವರು ಸ್ಮಾರಕಗಳ ಬಳಿ ರೀಲ್ಸ್ ಮಾಡಿದ್ದಾರೆ. ಹಂಪಿ ಯುನೆಸ್ಕೋ ವಿಶ್ವ ಪಾರಂಪರಿಕ ಸಂರಕ್ಷಿತ ಪ್ರದೇಶವಾಗಿದೆ. ಇನ್ನೂ ಇತ್ತೀಚೆಗೆ ಹಂಪಿಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದು ಸ್ಮಾರಕಗಳ ಮೇಲೆ ಹತ್ತಿ ಎಲ್ಲೆಂದರಲ್ಲಿ ರೀಲ್ಸ್​​ ಮಾಡುತ್ತಿದ್ದಾರೆ. ಇನ್ನೂ ರೀಲ್ಸ್ ಮಾಡುವ ಪ್ರವಾಸಿಗರಿಗೆ ಹೇಳುವವರು ಕೇಳುವವರು ಇಲ್ಲದಾಗಿದೆ.
ಹೆಜ್ಜೆ ಹೆಜ್ಜೆಗೂ ಸೆಕ್ಯುರಿಟಿ ನೇಮಕ ಮಾಡಿರುವ ಪುರಾತತ್ವ ಇಲಾಖೆ ಸುಮ್ಮನೆ ಕುಳಿತಿದೆ. ಐತಿಹಾಸಿಕ ಕಲ್ಲಿನ ರಥ, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲದಲ್ಲಿ ಬೇಕಾಬಿಟ್ಟಿ ರೀಲ್ಸ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us