/newsfirstlive-kannada/media/post_attachments/wp-content/uploads/2025/04/sonu-gowda2.jpg)
ಬೆಂಗಳೂರು: ಇತ್ತೀಚೆಗಷ್ಟೇಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದ ಸ್ಟಾರ್ಗಳಿಗೆ ಸಿಸಿಬಿ ಪೊಲೀಸರು ಬಿಗ್ ಶಾಕ್ ನೀಡಿದ್ದರು. ಅಲ್ಲದೇ ಹಣದ ಆಸೆಗೆ ಯಾವ ಟೀಂ ಗೆಲ್ಲುತ್ತೆ? ಯಾವ ಟೀಂ ಸೋಲುತ್ತೆ ಎನ್ನುವ ಪ್ರೆಡಿಕ್ಷನ್ ನೀಡುವ ಆಪ್ಗಳ ಬಗ್ಗೆ ಸ್ಟೋರಿ ಹಾಕಿ ಪ್ರಮೋಟ್ ಮಾಡ್ತಿದ್ದ ರೀಲ್ಸ್ ಸ್ಟಾರ್ಗಳಿಗೆ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದರು.
ಇದನ್ನೂ ಓದಿ:ಅಯೋಧ್ಯೆ ರಾಮ ಮಂದಿರದಲ್ಲಿ ಆತಂಕದ ವಾತಾವರಣ.. ಏನಾಯ್ತು..?
ಇದೀಗ ಬೆಟ್ಟಿಂಗ್ ಪ್ರಮೋಟ್ ಮಾಡುತ್ತಿದ್ದ ರೀಲ್ಸ್ ಸ್ಟಾರ್ಗಳು ಕೆಟ್ಟ ಮೇಲೆ ಬುದ್ಧಿ ಕಲಿತುಕೊಂಡಿದ್ದಾರೆ. ಈ ಹಿಂದೆ ರೀಲ್ ಸ್ಟಾರ್ಸ್ಗಳು ಐಪಿಎಲ್ ಬೆಟ್ಟಿಂಗ್ ಪ್ರಮೋಟ್ ಮಾಡಿದ್ದರು. ಆದ್ರೆ ಈಗ ಬೆಟ್ಟಿಂಗ್ ಪ್ರಮೋಟ್ ಮಾಡಿದ್ದವರು ಅಪಾಲಜಿ ವಿಡಿಯೋ ಹಾಕಿದ್ದಾರೆ. ಯಾರು ಬೆಟ್ಟಿಂಗ್ ಆಡಬೇಡಿ. ಬೆಟ್ಟಿಂಗ್ ಆಡೋದು ತಪ್ಪು. ಬೆಟ್ಟಿಂಗ್ ಆಪ್ಗಳ ಬಗ್ಗೆ ಸ್ಟೋರಿ ಹಾಕಬೇಡಿ ಅಂತ ಹೇಳಿದ್ದಾರೆ. ಅಲ್ಲದೇ ದೀಪಕ್ ಗೌಡ, ಗೋಲ್ಡ್ ದಚ್ಚು, ಸೋನು ಶ್ರೀನಿವಾಸ್ ಗೌಡ ಸೇರಿ ಹಲವರಿಂದ ಬೆಟ್ಟಿಂಗ್ ವಿರುದ್ಧ ಜಾಗೃತಿ ವಿಡಿಯೋ ಮಾಡಿಸಲಾಗಿದೆ
ಏನಿದು ಆರೋಪ..?
ರೀಲ್ಸ್ ಸ್ಟಾರ್ಗಳು IPL ಬೆಟ್ಟಿಂಗ್ ಬಗ್ಗೆ ಸ್ಟೋರಿಗಳನ್ನ ಹಾಕುತ್ತಿದ್ದರು. ಗೆಲ್ಲುವ ಟೀಂ, ಸೋಲುವ ಟೀಂ ಯಾವುದೆಂದು ಹೇಳಿ ಅಂತ ಸ್ಟೇಟಸ್ ಹಾಕುತ್ತಿದ್ದರಂತೆ. ಆ ಮೂಲಕ ಗೆಲುವು ಹಾಗೂ ಸೋಲಿನ ಬಗ್ಗೆ ಜನರ ಅಭಿಪ್ರಾಯ ತಿಳಿದುಕೊಳ್ಳುತ್ತಿದ್ದರಂತೆ. IPL ಬೆಟ್ಟಿಂಗ್ ಬುಕ್ಕಿಗಳು ನೀಡೋ ಡೀಟೇಲ್ಸ್ ಮೇರೆಗೆ ಸ್ಟೋರಿ ಅಪ್ಲೋಡ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಹಣದ ಆಸೆಗೆ ಸ್ಟೋರಿ ಹಾಕಿ ಪ್ರಮೋಟ್ ಮಾಡ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ ಬಳಿಕ ರೀಲ್ಸ್ ಸ್ಟಾರ್ಗಳು ಎಚ್ಚೆತ್ತುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ