newsfirstkannada.com

ಮನೆ ಇಲ್ಲದವನಿಗೆ ಸಹಾಯ ಮಾಡಿದ್ದಕ್ಕೆ ಸುತ್ತಿಗೆಯಲ್ಲಿ ತಲೆ ಚಚ್ಚಿದ; ಅಮೆರಿಕಾದಲ್ಲಿ ಭಯಾನಕ ಘಟನೆ

Share :

Published January 30, 2024 at 2:18pm

Update January 30, 2024 at 2:19pm

    ಜಾರ್ಜಿಯಾದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿವೇಕ್ ಸೈನಿ

    ಮನೆ ಇಲ್ಲದ ವ್ಯಕ್ತಿಗೆ ಬ್ರೆಡ್, ಜಾಕೆಟ್ ನೀಡಿ ಆಶ್ರಯ ನೀಡಿದ್ದರು

    ಭಾರತೀಯ ವಿದ್ಯಾರ್ಥಿ ಹತ್ಯೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿನ ಸರಣಿ ಮುಂದುವರಿದಿದೆ. ಕಳೆದ ಎರಡು ದಿನದಲ್ಲಿ ಇಬ್ಬರು ಸಾವನ್ನಪ್ಪಿರೋದು ಆಘಾತಕಾರಿಯಾಗಿದೆ. ಒಬ್ಬರು ನಿಗೂಢವಾಗಿ ಪ್ರಾಣ ಬಿಟ್ಟರೆ ಮತ್ತೊಬ್ಬ ಭಾರತೀಯ ಸಹಾಯ ಮಾಡಿದ ತಪ್ಪಿಗೆ ಬರ್ಬರವಾಗಿ ಹತ್ಯೆಯಾಗಿದ್ದಾನೆ.

ಅಮೆರಿಕಾದ ಜಾರ್ಜಿಯಾದಲ್ಲಿ ವಿವೇಕ್ ಸೈನಿ ಎಂಬುವವರು ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ವ್ಯಾಸಂಗದ ಜೊತೆಗೆ ಪಾರ್ಟ್‌ ಟೈಮ್‌ ಕೆಲಸ ಕೂಡ ಮಾಡುತ್ತಿದ್ದರು. ಸ್ಟೋರ್‌ನಲ್ಲಿ ಕೆಲಸ ಮಾಡುವಾಗ ನಿರಾಶ್ರಿತನೊಬ್ಬ ಭಯಾನಕ ದಾಳಿ ಮಾಡಿದ್ದು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.

ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ವಿವೇಕ್ ಸೈನಿ ಮನೆ ಇಲ್ಲದ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡಿದ್ದರು. ನಿರಾಶ್ರಿತರಿಗೆ ಬ್ರೆಡ್, ಜಾಕೆಟ್ ನೀಡಿ ಆಶ್ರಯ ನೀಡಿದ್ದರು. ಆದರೆ ವಿವೇಕ್ ಸೈನಿಯಿಂದ ಸಹಾಯ ಪಡೆದ ಆ ವ್ಯಕ್ತಿ ವಿವೇಕ್ ಸೈನಿಯ ತಲೆಗೆ ಸುತ್ತಿಗೆಯಿಂದ ಚಚ್ಚಿ, ಚಚ್ಚಿ ಸಾಯಿಸಿದ್ದಾನೆ. ವಿವೇಕ್ ಸೈನಿಯನ್ನು ಹತ್ಯೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ದೃಶ್ಯವನ್ನ ನೋಡೋದು ಭೀಕರವಾಗಿದೆ.

ಇದನ್ನೂ ಓದಿ: ಅಬ್ಬಬ್ಬಾ ಎಷ್ಟು ಕ್ರೌರ್ಯ.. ಇಲ್ಲಿ ನೈಟ್ರೋಜನ್ ಗ್ಯಾಸ್​ ಮೂಲಕ ಮರಣ ದಂಡನೆ ನೀಡಲಾಗುತ್ತೆ!

ಸೋಷಿಯಲ್ ಮೀಡಿಯಾದಲ್ಲಿ ವಿವೇಕ್ ಸೈನಿ ಅವರನ್ನು ಸಾಯಿಸಿದ ವಿಡಿಯೋ ವೈರಲ್ ಆಗಿದ್ದು, ಭಾರತೀಯ ವಿದ್ಯಾರ್ಥಿಯ ಸಾವಿಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ವಿಡಿಯೋ ನೋಡಿದ ಹಲವರು ಕಂಬನಿ ಮಿಡಿದಿದ್ದಾರೆ.

ಇಂಡಿಯಾನಾ ರಾಜ್ಯದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪ್ಯೂರ್ ಡ್ಯೂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ಓದುತ್ತಿದ್ದ ನೀಲ್ ಆಚಾರ್ಯ ಅವರು 2 ದಿನದಿಂದ ನಾಪತ್ತೆಯಾಗಿದ್ದರು.

ನನ್ನ ಮಗ ನಾಪತ್ತೆಯಾಗಿದ್ದಾನೆ. ಹುಡುಕಲು ಸಹಾಯ ಮಾಡಿ ಎಂದಿದ್ದ ನೀಲ್ ಆಚಾರ್ಯ ಕುಟುಂಬ ಬೇಡಿಕೊಂಡಿತ್ತು. ಇಂದು ನಿರ್ಜನ ಪ್ರದೇಶದ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಗಳ ಸಾವು ಹೆಚ್ಚಾಗಿದ್ದು, ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳು ಸೇಫಾ ಅನ್ನೋ ಪ್ರಶ್ನೆ ಎದುರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ ಇಲ್ಲದವನಿಗೆ ಸಹಾಯ ಮಾಡಿದ್ದಕ್ಕೆ ಸುತ್ತಿಗೆಯಲ್ಲಿ ತಲೆ ಚಚ್ಚಿದ; ಅಮೆರಿಕಾದಲ್ಲಿ ಭಯಾನಕ ಘಟನೆ

https://newsfirstlive.com/wp-content/uploads/2024/01/US-Indian-Student-1.jpg

Load More