ಬಿಹಾರ: ಮತದಾರರ ಪಟ್ಟಿ ಪರಿಷ್ಕರಣೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್..!

author-image
Veena Gangani
Updated On
ಪತಿ ವಿರುದ್ಧ ಸುಳ್ಳು ಕೇಸ್ ಹಾಕಿ ಕಿರುಕುಳ ನೀಡಿದ IPS ಪತ್ನಿ.. ಪೋಷಕರಿಗೆ ಬಹಿರಂಗ ಕ್ಷಮಾಪಣೆಗೆ ಸುಪ್ರೀಂ ಆದೇಶ
Advertisment
  • ಪಟ್ಟಿ ಪರಿಷ್ಕರಣೆ ಬಗ್ಗೆ ಆರ್‌ಜೆಡಿ, ಕಾಂಗ್ರೆಸ್ ಪಕ್ಷಗಳ ಆರೋಪ ಏನು?
  • ಪರಿಷ್ಕರಣೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಣೆ!
  • ಕೇಂದ್ರ ಚುನಾವಣಾ ಆಯೋಗಕ್ಕೆ ಕೇಳಿದ ಪ್ರಶ್ನೆಗಳು ಯಾವುವು..?

ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಮಾಡುವ ಹಕ್ಕು, ಅಧಿಕಾರ ಚುನಾವಣಾ ಆಯೋಗಕ್ಕೆ ಅಲ್ಲದೇ, ಬೇರೆ ಯಾರಿಗೆ ಇದೆ ಎಂದು ಪ್ರಶ್ನಿಸಿದೆ. ಈ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದಂತಾಗಿದೆ.

ಇದನ್ನೂ ಓದಿ: ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಅಮಿತ್ ಶಾ -ಮುಂದೆ ಏನು ಮಾಡ್ತಾರಂತೆ ಗೊತ್ತಾ..?

ಆದರೆ, ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ನಡೆಸುತ್ತಿರುವ ಸಮಯವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಬಿಹಾರದ ಅಸೆಂಬ್ಲಿ ಚುನಾವಣೆಗೆ ಕೆಲವೇ ತಿಂಗಳು ಮೊದಲು ಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿದೆ. ಚುನಾವಣೆಗೆ ಮುಂಚಿತವಾಗಿ ಒಬ್ಬ ವ್ಯಕ್ತಿಯನ್ನು ಮತದಾನದಿಂದ ವಂಚಿತಗೊಳಿಸಲಾಗುತ್ತಿದೆ. ಮತದಾರರ ಪಟ್ಟಿಯಿಂದ ವ್ಯಕ್ತಿಯ ಹೆಸರು ಅನ್ನು ಕೈ ಬಿಟ್ಟ ಬಳಿಕ ಅವರಿಗೆ ಮೇಲ್ಮನವಿ ಸಲ್ಲಿಸಲು ಹಾಗೂ ತಮ್ಮ ಹೆಸರು ಅನ್ನು ಮತ್ತೆ ಪಟ್ಟಿಗೆ ಸೇರಿಸಲು ಸಮಯ ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಕೋರ್ಟ್​ಗಳು ಮತದಾರರ ಪಟ್ಟಿ ಪರಿಷ್ಕರಣೆಯಾದ ಬಳಿಕ ಅದನ್ನು ಮುಟ್ಟಲ್ಲ. ಆದರೆ, ಮತದಾನದ ಹಕ್ಕು ಕಳೆದುಕೊಂಡ ವ್ಯಕ್ತಿಗೆ ಚುನಾವಣೆಗೂ ಮೊದಲು ಅದನ್ನು ಚಾಲೆಂಜ್ ಮಾಡಲು ಅವಕಾಶ ಸಿಗಲ್ಲ ಎಂದು ಜಸ್ಟೀಸ್ ಸುಧಾಂಶು ಧುಲಿಯಾ ಹೇಳಿದ್ದರು. ಇನ್ನೂ, ಕೇಂದ್ರ ಚುನಾವಣಾ ಆಯೋಗದ ಪರ ಹಾಜರಾಗಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಸುಪ್ರೀಂ ಕೋರ್ಟ್ ಆದೇಶ ನೀಡುವ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು.

ಈ ಮತದಾರರ ತೀವ್ರ ಪರಿಷ್ಕರಣೆಯನ್ನು ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ, ಇದರಿಂದ ದೇಶದ ನಾಗರಿಕರಲ್ಲದವರು ಪಟ್ಟಿಯಲ್ಲಿ ಇರಲು ಅವಕಾಶ ಸಿಗಲ್ಲ. ಆದರೇ, ಈ ಚುನಾವಣೆ ಮುಗಿದ ಬಳಿಕ ಪ್ರತೇಕವಾಗಿ ಈ ಪರಿಷ್ಕರಣೆ ನಡೆಸಬಹುದಿತ್ತು ಎಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಜೋಯಮಾಲಾ ಬಗಚಿ ಹೇಳಿದ್ದರು. ಇದು ಬಹಳ ಮುಖ್ಯವಾದ ವಿಷಯವಾಗಿದ್ದು, ಪ್ರಜಾಪ್ರಭುತ್ವದ ಬುಡಕ್ಕೆ ಹೋಗುತ್ತೆ. ಅರ್ಜಿದಾರರು ಚುನಾವಣಾ ಆಯೋಗದ ಅಧಿಕಾರವನ್ನು ಮಾತ್ರವಲ್ಲದೇ, ಕಾರ್ಯವಿಧಾನವನ್ನು ಪ್ರಶ್ನಿಸಿದ್ದಾರೆ. ಅರ್ಜಿದಾರರ ಗುಂಪು ಎತ್ತಿರುವ ಪ್ರಮುಖವಾದ ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ ಈಗ ಕೇಂದ್ರ ಚುನಾವಣಾ ಆಯೋಗಕ್ಕೆ ಕೇಳಿದೆ.

ಕೇಂದ್ರ ಚುನಾವಣಾ ಆಯೋಗಕ್ಕೆ ಕೇಳಿದ ಪ್ರಶ್ನೆಗಳು ಯಾವುವು..?

1. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಚುನಾವಣಾ ಆಯೋಗಕ್ಕೆ ಇರುವ ಅಧಿಕಾರವನ್ನು ವಿವರಿಸಿ.
2. ಮತದಾರರ ಪಟ್ಟಿ ಪರಿಷ್ಕರಣೆಯ ವಿಧಾನದ ವ್ಯಾಲಿಡಿಟಿಯನ್ನ ವಿವರಿಸಿ
3. ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆಯ ಸಮಯದ ಬಗ್ಗೆ ವಿವರಿಸಿ.

ಇನ್ನೂ ಸುಪ್ರೀಂ ಕೋರ್ಟ್, ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಪ್ರಜಾಪ್ರತಿನಿಧಿ ಕಾಯಿದೆಯ ಯಾವ ಸೆಕ್ಷನ್ ನಡಿ ಮತದಾರರ ಪಟ್ಟಿ ಪರಿಷ್ಕರಣೆಯ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂಬುದನ್ನು ವಿವರಿಸಲು ಸುಪ್ರೀಂಕೋರ್ಟ್ ಕೇಳಿದೆ. ವಿಶೇಷ ತೀವ್ರ ಪರಿಷ್ಕರಣೆ ಎಂಬುದು ಎಲ್ಲಿದೆ ಎಂದು ವಿವರಿಸಲು ಕೇಂದ್ರ ಚುನಾವಣಾ ಆಯೋಗವನ್ನು ಕೇಳಿದೆ. ಈ ಪ್ರಕ್ರಿಯೆಯನ್ನು 2025ರ ಬಿಹಾರ ಚುನಾವಣೆಗೆ ಏಕೆ ಲಿಂಕ್ ಮಾಡಿದೆ ಎಂದು ಚುನಾವಣಾ ಆಯೋಗವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

publive-image

ಪ್ರಾರಂಭದಲ್ಲಿ ಸುಪ್ರೀಂಕೋರ್ಟ್, ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿದ ಅರ್ಜಿಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರಲಿಲ್ಲ. ಬಳಿಕ ಮಹತ್ವ ನೀಡಿ, ಚುನಾವಣಾ ಆಯೋಗಕ್ಕೆ ಪ್ರಶ್ನೆಗಳನ್ನು ಕೇಳಿದೆ. ಚುನಾವಣಾ ಆಯೋಗದ ಕ್ರಮದಲ್ಲಿ ತರ್ಕ ಇದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತಪ್ಪೇನು ಇದೆ ಎಂದು ಜಸ್ಟೀಸ್ ಸುಧಾಂಶು ಧುಲಿಯಾ ಪ್ರಶ್ನಿಸಿದ್ದರು. ಚುನಾವಣಾ ಆಯೋಗಕ್ಕೆ ಸಂವಿಧಾನದಡಿ ಮತದಾರರ ಪಟ್ಟಿ ಪರಿಷ್ಕರಣೆಯ ಅಧಿಕಾರ ಇದೆ. ಅಧಿಕಾರ ಇಲ್ಲದೇ ಇರೋದನ್ನು ಚುನಾವಣಾ ಆಯೋಗ ಮಾಡುತ್ತಿದೆ ಎಂದು ಹೇಳಲಾಗಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು.

publive-image

ಇನ್ನೂ, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ಆಧಾರ್ ಕಾರ್ಡ್ ಅನ್ನು ಪ್ರೂಫ್ ಆಗಿ ಪರಿಗಣಿಸುತ್ತಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ, ತಾಂತ್ರಿಕವಾಗಿ ಆಧಾರ್ ಕಾರ್ಡ್ ನಾಗರಿಕತ್ವದ ಐ.ಡಿ. ಪ್ರೂಫ್ ಅಲ್ಲ. ಏಕೆಂದರೇ, ಕೆಲ ವಿದೇಶಿಯರಿಗೂ ಆಧಾರ್ ಐ.ಡಿ. ಕಾರ್ಡ್ ನೀಡಲಾಗಿದೆ. ಹೀಗಾಗಿ ಕೆಲವೊಂದಕ್ಕೆ ಆಧಾರ್ ಕಾರ್ಡ್ ಐ.ಡಿ. ಪ್ರೂಫ್ ಅಲ್ಲ. ಆಧಾರ್ ಬರೀ ಐ.ಡಿ. ಪ್ರೂಫ್. ಪ್ರತಿಯೊಂದು ದಾಖಲೆಗೂ ಉದ್ದೇಶ ಇದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಆಧಾರ್ ಅನ್ನು ಬಳಕೆ ಮಾಡಲಾಗಲ್ಲ ಎಂದು ರಾಕೇಶ್ ದ್ವಿವೇದಿ ವಾದಿಸಿದ್ದರು. ಇನ್ನೂ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಅಗತ್ಯವನ್ನು ಚುನಾವಣಾ ಆಯೋಗ ಬಲವಾಗಿ ಸಮರ್ಥಿಸಿಕೊಂಡಿತು. ಕೆಲ ಅರ್ಜಿದಾರರೇ, ಬಿಹಾರದಲ್ಲಿ ಮತದಾರರ ಪಟ್ಟಿಯಲ್ಲಿರುವವರ ಪೈಕಿ 1.1 ಕೋಟಿ ಜನರು ಸಾವನ್ನಪ್ಪಿದ್ದಾರೆ ಮತ್ತು 70 ಲಕ್ಷ ಜನರು ಬೇರೆಡೆ ವಲಸೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಇದೇ ಮತದಾರರ ಪಟ್ಟಿ ಪರಿಷ್ಕರಣೆಯ ಅಗತ್ಯವನ್ನು ಸಮರ್ಥಿಸುತ್ತದೆ ಎಂದರು.

ಇನ್ನೂ, ಅರ್ಜಿದಾರರ ಪರ ಹಿರಿಯ ವಕೀಲ ವೃಂದಾ ಗ್ರೋವರ್ ವಾದಿಸುತ್ತಾ, ಇದು ಸಾಮಾನ್ಯವಾದ ಮತದಾರರ ಪಟ್ಟಿ ಪರಿಷ್ಕರಣೆ ಅಲ್ಲ. ಮತದಾರರ ಪಟ್ಟಿಯಿಂದ ಬಡವರು, ವಲಸೆ ಕಾರ್ಮಿಕರು, ಸಮಾಜದ ದುರ್ಬಲ ವರ್ಗಗಳನ್ನು ಕೈ ಬಿಡಲು ಡಿಸೈನ್ ಮಾಡಿದಂತೆ ಇದೆ ಎಂದರು. ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ಆಧಾರ್ ಕಾರ್ಡ್, ವೋಟರ್ ಐ.ಡಿ. ಕಾರ್ಡ್, ಪಡಿತರ ಕಾರ್ಡ್​ಗಳನ್ನು ಪರಿಗಣಿಸುವಂತೆ ಸುಪ್ರೀಂಕೋರ್ಟ್, ಚುನಾವಣಾ ಆಯೋಗಕ್ಕೆ ಹೇಳಿತು. ಬಿಹಾರದಲ್ಲಿ ಆಡಳಿತರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಮತ್ತೆ ಅಧಿಕಾರಕ್ಕೇರಲು ಅನುಕೂಲ ಮಾಡಿಕೊಡಲು ಈ ಮತದಾರರ ತೀವ್ರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಆರ್‌ಜೆಡಿ, ಕಾಂಗ್ರೆಸ್ ಪಕ್ಷಗಳು ಆರೋಪಿಸಿವೆ. ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷ ಕೂಡ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯನ್ನು ತೀವ್ರವಾಗಿ ವಿರೋಧಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment