/newsfirstlive-kannada/media/post_attachments/wp-content/uploads/2025/04/BANK.jpg)
ಕರ್ನಾಟಕದ 2 ಗ್ರಾಮೀಣ ಬ್ಯಾಂಕ್ಗಳು ವಿಲೀನಗೊಂಡಿವೆ. ಧಾರವಾಡದಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ (ಕೆವಿಜಿ ಬ್ಯಾಂಕ್) ಹಾಗೂ ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪರಸ್ಪರ ವಿಲೀನಗೊಂಡಿವೆ. ಆ ಮೂಲಕ ರಾಜ್ಯದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಉದಯಗೊಂಡಿದೆ.
ಸರ್ಕಾರಿ ಸ್ವಾಮ್ಯದಲ್ಲೇ ಸೇವೆ
ಹೊಸದಾಗಿ ಉದಯವಾಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸರ್ಕಾರಿ ಸ್ವಾಮ್ಯದಲ್ಲಿಯೇ ಮುಂದುವರಿಯಲಿದೆ. ಕೇಂದ್ರ ಸರ್ಕಾರ ಶೇಕಡಾ 50, ರಾಜ್ಯ ಸರ್ಕಾರ ಶೇಕಡಾ 15 ರಷ್ಟು ಹಾಗೂ ಕೆನರಾ ಬ್ಯಾಂಕ್ ಶೇಕಡಾ 35 ರಷ್ಟು ಪಾಲುದಾರಿಕೆಯನ್ನು ಹೊಂದಿವೆ. ಈ ಬ್ಯಾಂಕ್ 1751 ಶಾಖೆಯೊಂದಿಗೆ 10,54,851 ಕೋಟಿ ವಹಿವಾಟು ನಡೆಸಲಿದೆ.
ಕೇಂದ್ರ ಹಣಕಾಸು ಸಚಿವಾಲಯವು ‘ಒಂದು ರಾಜ್ಯ ಒಂದು ಬ್ಯಾಂಕ್’ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತಂದಿದೆ. ಸರ್ಕಾರದ ಹೊಸ ಯೋಜನೆ ಪ್ರಕಾರ, ರಾಜ್ಯದಲ್ಲಿ ಈಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗಳು ವಿಲೀನಗೊಂಡಿವೆ.
ಇದನ್ನೂ ಓದಿ: ಭಾರತಕ್ಕೆ ಮೊದಲ ಎಂಟ್ರಿ.. ಟೆಸ್ಲಾ ಟ್ರಕ್ ಖರೀದಿಸಿದ ಖ್ಯಾತ ಉದ್ಯಮಿ; ಏನಿದರ ವಿಶೇಷ?
RRB (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್) ಕಾರ್ಯಕ್ಷಮತೆಯ ದಕ್ಷತೆ ಹೆಚ್ಚಳ, ವೆಚ್ಚದ ಸಾರ್ವತ್ರೀಕರಣ ಜೊತೆಗೆ ಸದ್ಯ ದೇಶದಲ್ಲಿರುವ 42 ಆರ್ಆರ್ಬಿಗಳ ಸಂಖ್ಯೆಯನ್ನು 28ಕ್ಕೆ ಇಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಅದರಂತೆ ಒಂದು ರಾಜ್ಯ ಒಂದು ಒಂದು ಬ್ಯಾಂಕ್ ಯೋಜನೆಯಡಿ, ಕರ್ನಾಟಕ ಎರಡು ಬ್ಯಾಂಕ್ಗಳು ವಿಲೀನಗೊಂಡಿವೆ.
ಒಟ್ಟು 15 ಆರ್ಆರ್ಬಿಗಳು ವಿಲಿನಗೊಂಡಿವೆ. ಆಂಧ್ರಪ್ರದೇಶ ಅತೀ ಹೆಚ್ಚು ಆರ್ಆರ್ಬಿಗಳನ್ನು ಹೊಂದಿದೆ. ಒಟ್ಟು ನಾಲ್ಕು ಆರ್ಆರ್ಬಿಗಳನ್ನು ಹೊಂದಿದೆ. ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಮೂರು, ಬಿಹಾರ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದಲ್ಲಿ ತಲಾ ಎರಡು ಆರ್ಆರ್ಬಿ ಹೊಂದಿವೆ.
ಇದನ್ನೂ ಓದಿ: ಫೋನ್ ಪೇನಲ್ಲಿ ಚಿನ್ನದಂಥ ಅವಕಾಶ.. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಭರ್ಜರಿ ಆಫರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ