ಹಾರ್ಟ್​ಗೂ ಆಪತ್ತು, ಆಯಸ್ಸಿಗೂ ಕುತ್ತು.. ಬೆಚ್ಚಿ ಬೀಳಿಸಿದೆ ಹೊಸ ಅಧ್ಯಾಯ.. ಮಕ್ಕಳಿಗಂತೂ ಮೊಬೈಲ್ ಕೊಡಲೇಬೇಡಿ!

author-image
Bheemappa
Updated On
ಹಾರ್ಟ್​ಗೂ ಆಪತ್ತು, ಆಯಸ್ಸಿಗೂ ಕುತ್ತು.. ಬೆಚ್ಚಿ ಬೀಳಿಸಿದೆ ಹೊಸ ಅಧ್ಯಾಯ.. ಮಕ್ಕಳಿಗಂತೂ ಮೊಬೈಲ್ ಕೊಡಲೇಬೇಡಿ!
Advertisment
  • ಯುವಕರ ಹಾರ್ಟ್​ ಅನ್ನೇ ಕಿತ್ತುಕೊಳ್ಳುತ್ತಿರುವ ಫೋನ್​ ಅಡಿಕ್ಷನ್
  • ಹೃದಯಕ್ಕೆ ಸಂಬಂಧಿಸಿದ ಆಘಾತಕಾರಿ ಸಂಗತಿಯೊಂದು ರಿವೀಲ್
  • ಮೊಬೈಲ್​ ಇಲ್ಲ ಅಂದರೂ ಪರವಾಗಿಲ್ಲ, ಆಯಸ್ಸು ಹೆಚ್ಚಿಸಿಕೊಳ್ಳಿ

ಆಧುನಿಕ ಜಗತ್ತಿನಲ್ಲೇ ಮಾನವನ ಆವಿಷ್ಕಾರಗಳೇ ಮಾರಕವಾಗುತ್ತಿವೆ. ಇಂದಿನ ಯುವ ಪೀಳಿಗೆಯ ಆಯಸ್ಸನ್ನೇ ನುಂಗಿ ಹಾಕುತ್ತಿವೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಮೊಬೈಲ್. ಸದ್ಯ ಮೊಬೈಲ್ ಫೋನ್‌ ಗೀಳಿಗೆ ಬಿದ್ದ ಯುವ ಪೀಳಿಗೆಗೆ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ. ಅತಿ ಹೆಚ್ಚಾಗಿ ಮೊಬೈಲ್ ಬಳಕೆ ನಿಮ್ಮ ಆರೋಗ್ಯಕ್ಕೆ ಮಾರಕ ಅನ್ನೋದು ಅಧ್ಯಯನದಿಂದ ಬಯಲಾಗಿದೆ.

publive-image

ಸದ್ಯ ಮೊಬೈಲ್ ಇಲ್ಲದ ವ್ಯಕ್ತಿ ಯಾರಿದ್ದಾರೆ?. ಈಗಿನ ಜಗತ್ತಿನಲ್ಲಿ ಮೊಬೈಲ್ ಇಲ್ಲದವನೇ ಮಹಾಶೂರ ಅಂತ ಕರೀಬಹುದೇನೋ? ಆದ್ರೆ, ಕೈಲಿ ಮೊಬೈಲ್ ಫೋನ್ ಇಲ್ಲ ಅಂದ್ರೆ ಜನ ನಿಮ್ಮನ್ನ ಭಿಕ್ಷುಕರಂತೆ ಟ್ರೀಟ್ ಮಾಡ್ತಾರೆ. ಆದ್ರೆ, ಇದೇ ಮೊಬೈಲ್‌ನ ಅತಿಯಾದ ಬಳಕೆ ಮಾಡೋಕು ಮುನ್ನ ಎಚ್ಚರ.

ಇದನ್ನೂ ಓದಿ:ಉಡುಪಿಯಲ್ಲಿ ಯಕ್ಷಗಾನ ವೇಷ ಗಲಾಟೆ! ಗಣೇಶ ಹಬ್ಬದ ದಿನದಂದೇ ಸಿಡಿದೆದ್ದ ಹಿರಿಯ ಕಲಾವಿದರು..!

publive-image

ಗಂಟೆಗಟ್ಟಲೇ ಮೊಬೈಲ್ ನೋಡ್ತಿರಾ ಹುಷಾರ್‌!

ಈಗಿನ ಯುವ ಪೀಳಿಗೆ ಕೂತ್ರು, ನಿಂತ್ರು, ಮಲಗಿದ್ರೂ ಮೊಬೈಲ್ ಮೊಬೈಲ್ ಅಂತ ಅದ್ರಲ್ಲೇ ಮುಳುಗಿರ್ತಾರೆ. ಮಾತೆತ್ತಿದ್ರೆ ರೀಲ್ಸ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಅಂತ ಅದ್ರಲ್ಲಿ ಅರ್ಧ ಜೀವನ ಕಳೀತಾರೆ. ಸದ್ಯ ಅಧ್ಯಯನವೊಂದು ಮೊಬೈಲ್ ಫೋನ್‌ನ ಅತಿಯಾದ ಬಳಕೆಯಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತೆ ಅಂತ ಬಹಿರಂಗಪಡಿಸಿದೆ. ಮೊಬೈಲ್ ಪೋನ್ ಬಳಕೆಯಿಂದ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗುತ್ತೆ ಎಂಬ ಆಘಾತಕಾರಿ ಸಂಗತಿಯನ್ನ ರಿವೀಲ್ ಮಾಡಿದೆ.

ಇದು ‘ಹೃದಯ’ಗಳ ವಿಷಯ

  • ವಾರಕ್ಕೆ 5-29 ನಿಮಿಷ ಪೋನ್ ಬಳಕೆ ಶೇ.3 ರಷ್ಟು ರಿಸ್ಕ್
  • 30-59 ನಿಮಿಷ ಮೊಬೈಲ್ ಬಳಕೆ ಶೇ.7 ರಷ್ಟು ಹೆಚ್ಚಿನ ರಿಸ್ಕ್
  • 1-3 ಗಂಟೆ ಮೊಬೈಲ್ ಬಳಕೆ ಶೇ.13 ರಷ್ಟು ಹಾರ್ಟ್ ರಿಸ್ಕ್
  • 4-6 ಗಂಟೆ ಮೊಬೈಲ್ ಬಳಕೆ ಶೇ.15 ರಷ್ಟು ಹಾರ್ಟ್ ಪ್ರಾಬ್ಲಂ
  • 6 ಗಂಟೆಗಿಂತ ಹೆಚ್ಚು ಮೊಬೈಲ್ ಬಳಕೆ ಶೇ.21 ರಷ್ಟು ರಿಸ್ಕ್

ಇದಷ್ಟೇ ಅಲ್ಲ, ಮೊಬೈಲ್ ಹೆಚ್ಚಿನ ಬಳಕೆಯಿಂದ ಹಾರ್ಟ್ ಸ್ಟ್ರೋಕ್, ಕರೋನರಿ ಆರ್ಟರಿ ಡಿಸೀಸ್, ಹಾರ್ಟ್ ಫೈಲ್ಯೂರ್ ಆಗುವ ಸಾಧ್ಯತೆ ಇದೆ ಅಂತಾರೆ ತಜ್ಞ ವೈದ್ಯರು.

ಇದನ್ನೂ ಓದಿ: ಗಣೇಶನ ಹಣದ ವಿಚಾರಕ್ಕೆ ಸೋದರನ ಜೀವನ ಮುಗಿಸಿದ, ರಥಚಕ್ರಕ್ಕೆ‌ ಸಿಲುಕಿ ಯುವಕ ಸಾವು, ಪೊಲೀಸರ ಮೇಲೂ ಹಲ್ಲೆ

publive-image

ಇತ್ತೀಚಿನ ಅಧ್ಯಯನ ಪ್ರಕಾರ, ಅತಿಯಾದ ಮೊಬೈಲ್ ಬಳಕೆ ಅಂದ್ರೆ ಕರೆಗಳನ್ನ ಸ್ವೀಕರಿಸೋದು, ಕರೆಗಳನ್ನ ಮಾಡೋದ್ರಿಂದ ಹೃದಯಸಂಬಂಧಿ ಕಾಯಿಲೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಜನರು ಮೊಬೈಲ್ ಬಳಕೆಯನ್ನ ಕಡಿಮೆ ಬಳಸೋದ್ರಿಂದ ಹೃದಯದ ಕಾಯಿಲೆಯೂ ಕಡಿಮೆ ಮಾಡುತ್ತೆ. ಅತಿಯಾದ ಬಳಕೆಯಿಂದ ಹಾರ್ಟ್‌ ಅಟ್ಯಾಕ್, ಹಾರ್ಟ್‌ ಫೇಲ್ಯೂರ್, ಹಾರ್ಟ್‌ ಸ್ಟ್ರೋಕ್ ಆಗುವ ಸಾಧ್ಯತೆ ಇದೆ.

ತಜ್ಞ ವೈದ್ಯರು

ಇದೆಲ್ಲವನ್ನ ಕೇಳುತ್ತಿದ್ದರೇ ಮೊಬೈಲ್ ಓಕೆ.. ಆದ್ರೆ, ಅತಿಯಾದ ಬಳಕೆ ಮಾಡೋಕು ಮುನ್ನ ನಾವು ಹುಷಾರ್​ ಆಗಿರಬೇಕು. ಬದುಕಿಗಿಂತ ದೊಡ್ಡದು ಯಾವುದು ಇಲ್ಲ. ಅದರಲ್ಲೂ ನಿಮ್ಮ ಮಕ್ಕಳಿಗಂತೂ ಮೊಬೈಲ್ ಕೊಡಲೇಬೇಡಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment