ದೆಹಲಿಯ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆ; ಫಸ್ಟ್ ಟೈಂ ಶಾಸಕಿ ಆಗಿರುವ ಬಿಜೆಪಿ ನಾಯಕಿ..!

author-image
Ganesh
Updated On
ದೆಹಲಿಯ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆ; ಫಸ್ಟ್ ಟೈಂ ಶಾಸಕಿ ಆಗಿರುವ ಬಿಜೆಪಿ ನಾಯಕಿ..!
Advertisment
  • ಕೊನೆಗೂ ದೆಹಲಿ ಸಿಎಂ ಹೆಸರು ಪ್ರಕಟಿಸಿದ ಬಿಜೆಪಿ
  • ದೆಹಲಿಯ 4ನೇ ಮಹಿಳಾ ಸಿಎಂ ಆಗಿ ರೇಖಾ ಗುಪ್ತಾ
  • ಉಪಮುಖ್ಯಮಂತ್ರಿಯಾಗಿ ಪರ್ವೇಶ್ ವರ್ಮಾ ಆಯ್ಕೆ

ದೆಹಲಿಯಲ್ಲಿ ಗೆದ್ದು ಬೀಗಿರೋ ಬಿಜೆಪಿ, ಸರ್ಕಾರ ರಚನೆಗೆ ಸಜ್ಜಾಗಿದೆ. 27 ವರ್ಷದ ವನವಾಸ ಮುಗಿಸಿ ಪುಟಿದೆದ್ದ ಕೇಸರಿ ಪಡೆಯಲ್ಲಿ ಸಿಎಂ ಪಟ್ಟಕ್ಕೆ ಅಚ್ಚರಿಯ ಅಭ್ಯರ್ಥಿಯ ಆಯ್ಕೆಯಾಗಿದೆ.

ಮಹಿಳೆಯನ್ನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿ ಕಮಲ ಪಡೆ ಕೌತುಕದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಪಟ್ಟಕ್ಕೆ ಇವತ್ತು ಪಟ್ಟಾಭಿಷೇಕ ನಡೆಯಲಿದೆ. ದೆಹಲಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ. ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಇವತ್ತು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಉಪಮುಖ್ಯಮಂತ್ರಿಯಾಗಿ ಪರ್ವೇಶ್ ವರ್ಮಾ ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು ಬೆಳಗ್ಗೆ 12 ಗಂಟೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಲವು ಹಿರಿಯ ನಾಯಕರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ:ವಿಶ್ವದ ಅತಿದೊಡ್ಡ ಮೆಟ್ರೋ ನೆಟ್​​ವರ್ಕ್​ ಹೊಂದಿರುವ ದೇಶಗಳು ಯಾವುವು? ಭಾರತ ಯಾವ ಸ್ಥಾನದಲ್ಲಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment