newsfirstkannada.com

₹118 ಕೋಟಿಗೆ ಬಾಲ್ಕನಿಯಿಂದ ಸಮುದ್ರ ನೋಡಲು ಎದುರು ಮನೆ ಖರೀದಿಸಿದ ರೇಖಾ ಜುಂಜುನ್ವಾಲಾ

Share :

Published March 23, 2024 at 9:31pm

    ಮುಂಬೈನ ಮಲಬಾರ್ ಹಿಲ್‌ ಸಮುದ್ರದ ನೋಟಕ್ಕೆ ಹೆಸರುವಾಸಿ

    ರೇಖಾ ಜುಂಜುನ್ವಾಲಾ ಅವರ ರೇರ್‌ ವಿಲ್ಲಾದ ಮುಂದೆ ಮನೆ ಅಡ್ಡಿ

    ಕೇವಲ 5,000 ರೂಪಾಯಿಗೆ ಹೂಡಿಕೆ ಆರಂಭಿಸಿದ್ದ ಕೋಟ್ಯಾಧಿಪತಿ

ಮುಂಬೈ: ಖ್ಯಾತ ಉದ್ಯಮಿ ರಾಕೇಶ್ ಜುಂಜುನ್ವಾಲಾ ಅವರ ಪತ್ನಿ ರೇಖಾ ಜುಂಜುನ್ವಾಲಾ ಅವರು ತನ್ನ ಮನೆ ಬಾಲ್ಕನಿಯಿಂದ ಸಮುದ್ರ ನೋಡಲು ಅಡ್ಡಿಯಾದ ಎದುರು ಮನೆಯನ್ನೇ ಖರೀದಿಸಿದ್ದಾರೆ. ತನ್ನ ಮನೆಯಿಂದ ಸಮುದ್ರ ನೋಟಕ್ಕೆ ತೊಂದರೆಯಾಗುತ್ತಿದೆ ಅನ್ನೋ ಒಂದೇ ಕಾರಣಕ್ಕೆ ಎದುರಿನ ಮನೆಯನ್ನ 118 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರದ ಮಲಬಾರ್ ಹಿಲ್‌ನಲ್ಲಿ ಸಮುದ್ರದ ಕಡೆ ಮುಖಮಾಡಿರುವ ಹಲವಾರು ಕಟ್ಟಡಗಳಿವೆ. ಮಲಬಾರ್ ಹಿಲ್‌ ಸಮುದ್ರದ ವಿಹಂಗಮ ನೋಟಕ್ಕೆ ಹೆಸರುವಾಸಿ. ಇದೇ ಜಾಗದಲ್ಲಿ ರೇಖಾ ಜುಂಜುನ್ವಾಲಾ ಅವರ ದೊಡ್ಡ ಬಂಗಲೆ ಇದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಈ ಬಾಲಿವುಡ್​​ ನಟಿ ರೆಡಿ! ಕಾಂಗ್ರೆಸ್​​ನಿಂದ ಸ್ಪರ್ಧೆ ಖಚಿತ?

ರೇಖಾ ಜುಂಜುನ್ವಾಲಾ ಅವರ ರೇರ್‌ ವಿಲ್ಲಾದ ಮುಂದೆ ಮತ್ತೊಂದು ಕಟ್ಟಡದ ಮರು ನವೀಕರಣ ನಡೆಯುತ್ತಾ ಇತ್ತು. ಆ ನಿರ್ಮಾಣ ಹಂತದ ಕಟ್ಟಡ ತಲೆ ಎತ್ತಿದರೆ ರೇಖಾ ಜುಂಜುನ್ವಾಲಾ ಅವರ ಮನೆಯಿಂದ ಸಮುದ್ರ ನೋಡಲು ಅಡ್ಡಿಯಾಗುತ್ತಿತ್ತು. ಇದೇ ಕಾರಣಕ್ಕೆ ತಮ್ಮ ಮನೆಯ ಎದುರು ಕಟ್ಟಡ ನಿರ್ಮಿಸಲಾಗುತ್ತಿದ್ದ ಜಾಗವನ್ನೇ ರೇಖಾ ಜುಂಜುನ್ವಾಲಾ ಅವರು 118 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.

ರೇಖಾ ಜುಂಜುನ್ವಾಲಾ ಯಾರು?
ಭಾರತದ ಬಿಲಿಯನೇರ್ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರ ಪತ್ನಿ ರೇಖಾ ಜುಂಜುನ್ವಾಲಾ. ರಾಕೇಶ್ ಜುಂಜುನ್ವಾಲಾ ಅವರು 1985ರಲ್ಲಿ ಕೇವಲ 5,000 ರೂಪಾಯಿಗೆ ಹೂಡಿಕೆ ಆರಂಭಿಸಿ ಕೋಟ್ಯಾಧಿಪತಿ ಆಗಿದ್ದವರು. 2022ರಲ್ಲಿ ರಾಕೇಶ್ ಜುಂಜುನ್ವಾಲಾ ನಿಧನರಾಗಿದ್ದಾರೆ. ದಿವಂಗತ ರಾಕೇಶ್ ಜುಂಜುನ್ವಾಲಾ ಪತ್ನಿ ರೇಖಾ ಜುಂಜುನ್ವಾಲಾ ಅವರು ಸುಮಾರು 68 ಸಾವಿರ ಕೋಟಿಯ ಒಡತಿಯಾಗಿದ್ದು, ಮುಂಬೈನ ಮಲಬಾರ್ ಹಿಲ್‌ನಲ್ಲಿ ನೆಲೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

₹118 ಕೋಟಿಗೆ ಬಾಲ್ಕನಿಯಿಂದ ಸಮುದ್ರ ನೋಡಲು ಎದುರು ಮನೆ ಖರೀದಿಸಿದ ರೇಖಾ ಜುಂಜುನ್ವಾಲಾ

https://newsfirstlive.com/wp-content/uploads/2024/03/Mumbai-Rekha-Junjunwala.jpg

Load More