/newsfirstlive-kannada/media/post_attachments/wp-content/uploads/2024/07/KALABURAGI3.jpg)
ಕಲಬುರಗಿ: ನದಿಗೆ ಹಾರಿದ್ದ ಹೆಂಡತಿಯನ್ನು ರಕ್ಷಿಸಲು ಹೋದ ಗಂಡ ಹಾಗೂ ಆತನ ಸಂಬಂಧಿ ನೀರುಪಾಲಾಗಿರೋ ದಾರುಣ ಘಟನೆ ಅಫಜಲಪುರ ತಾಲೂಕಿನ ದೇವಣಗಾಂವ ಬ್ರಿಡ್ಜ್ ಕೆಳಗಿನ ಭೀಮಾ ನದಿಯಲ್ಲಿ ನಡೆದಿದೆ.
ಇದನ್ನೂ ಓದಿ: ಕೇರಳ ಗುಡ್ಡ ಕುಸಿತದಲ್ಲಿ ಕರ್ನಾಟಕದ ಅಜ್ಜಿ, ಮೊಮ್ಮಗ ನಾಪತ್ತೆ.. ಇದೇ ಕುಟುಂಬದ ಮೂವರ ರೋಚಕ ರಕ್ಷಣೆ
ತಾಲೂಕಿನ ಕಡಣಿ ಗ್ರಾಮದ ನಿವಾಸಿ ಲಕ್ಷ್ಮಿ ಎಂಬುವವರು ಕೌಟುಂಬಿಕ ಕಲಹದಿಂದಾಗಿ ನದಿಗೆ ಜಿಗಿದಿದ್ದಳು. ಪತಿ ಶಿವಕುಮಾರ ಕಡಣಿ ಹಾಗೂ ಸಂಬಂಧಿ ರಾಜು ಮೃತ ದುರ್ದೈವಿಗಳು. ಆಕೆಯನ್ನು ರಕ್ಷಿಸಲು ಆಕೆಯ ಗಂಡ ಹಾಗೂ ಸಂಬಂಧಿ ಹಿಂದೆಯೇ ಜಿಗಿದಿದ್ದಾರೆ. ಆದರೆ ಹೆಂಡತಿ ಮೀನುಗಾರರ ಮೀನಿನ ಬಲೆಗೆ ಸಿಲುಕಿ ಸೇಫ್ ಆಗಿದ್ದಾರೆ.
ರಕ್ಷಣೆಗೆಂದು ಹೋಗಿದ್ದ ಗಂಡ ಹಾಗೂ ಸಂಬಂಧಿಕ ನೀರು ಪಾಲಾಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿ ಶಾಮಕದಳ ಮತ್ತು ಪೊಲೀಸರ ತೀವ್ರ ಶೋಧ ನಡೆಸಿದ್ದಾರೆ. ಕೆಲ ಸಮಯದ ಬಳಿಕ ನೀರು ಪಾಲಾದ ಇಬ್ಬರ ಶವ ಪತ್ತೆಯಾಗಿದೆ. ಈ ಘಟನೆ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ