Advertisment

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಸಂಬಂಧಿ! ಹಣದ ವ್ಯವಹಾರ ನೋಡಿಕೊಂಡಿದ್ದೇ ಆತ

author-image
Bheemappa
Updated On
ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಬಿರಿಯಾನಿ ಊಟ; ಕೊಲೆ ಕೇಸ್‌ ವಿಚಾರಣೆ ಎಲ್ಲಿಗೆ ಬಂತು?
Advertisment
  • ಒಂದೆರಡಲ್ಲ.. ಎಷ್ಟು ಲಕ್ಷದ ಡೀಲ್​ ಇದು?
  • ಮೃತದೇಹ ವಿಲೇವಾರಿಗೆ ಹಣ ನೀಡಿದ ದರ್ಶನ್​
  • ಕೂಲಿ ಕೆಲಸ ಮಾಡುತ್ತಿದ್ದವರ ಕೈಯಲ್ಲಿ ಇಂಥಾ ಕೆಲಸ ಮಾಡಿಸಿದ್ರಾ?

ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ನಟ ದರ್ಶನ್​​ನಿಂದ ಹಣ ಪಡೆದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಹಣ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.

Advertisment

A13 ದೀಪಕ್ ನಿಂದ ನಿಖಿಲ್ ಕಾರ್ತಿಕ್, ಕೇಶವಮೂರ್ತಿಗೆ ತಲಾ ಐದು ಲಕ್ಷ ಹಣ ನೀಡಲಾಗಿತ್ತು. ಸದ್ಯ ಆರೋಪಿಗಳು ಹಣ ಪಡೆದಿರುವ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿದ್ದಾರೆ. ಹೀಗಾಗಿ ಆರೋಪಿಗಳು ಪಡೆದುಕೊಂಡಿರುವ ತಲಾ ಐದು ಲಕ್ಷ ಹಣವನ್ನು ಜಫ್ತಿ ಮಾಡಲು ಮುಂದಾಗಿದ್ದಾರೆ.

publive-image

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಯ ತನಿಖೆ ಮತ್ತಷ್ಟು ಚುರುಕು.. ಇಂದು ಚಿತ್ರದುರ್ಗದತ್ತ ದರ್ಶನ್​ ಮತ್ತು ಗ್ಯಾಂಗ್​.. ಅಪ್ಡೇಟ್ಸ್ ಹೀಗಿದೆ

ಬರೋಬ್ಬರಿ 30 ಲಕ್ಷದ ಡೀಲ್​?

ಕೊಲೆ ನಡೆದ ಬಳಿಕ ನಟ ದರ್ಶನ್ ನಿಂದ 30 ಲಕ್ಷ ಹಣ ಪಡೆಯಲಾಗಿತ್ತು. ಪ್ರದೋಶ್, ಮತ್ತು ದೀಪಕ್ ಹಣದ ವ್ಯವಹಾರವನ್ನು ನೋಡಿಕೊಂಡಿದ್ರು. ದೀಪಕ್ ಎಂಬಾತ ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರ ಹತ್ತಿರದ ಸಂಬಂಧಿಯಾಗಿದ್ದು, ಇನ್ನು ಉಳಿದಂತೆ ಕೋರ್ಟ್ ಬೇಲ್ ಆಗುವವರೆಗೂ ಖರ್ಚು ವೆಚ್ಚ ನೋಡಿಕೊಂಡು ಕುಟುಂಬಕ್ಕೂ ಹಣ ನೀಡೋದಾಗಿ ತಿಳಿಸಿದ್ದರು.

Advertisment

publive-image

ಇದನ್ನೂ ಓದಿ: ದರ್ಶನ್​ ಗ್ಯಾಂಗ್​ನಿಂದ ನಡೆದಿದೆ ಎನ್ನಲಾದ ಕೇಸ್​ಗೆ ಮತ್ತೊಂದು ಟ್ವಿಸ್ಟ್​​.. ಮಹತ್ವದ ಸುಳಿವು!

ನಿಖಿಲ್, ಕೇಶವಮೂರ್ತಿ, ಕಾರ್ತಿಕ್ ಮೂವರು ಆರ್.ಆರ್.ನಗರದ ಶೆಡ್ ನಲ್ಲಿ ಕೂಲಿ ಕೆಲಸಕ್ಕೆ ಇದ್ದವರು. ರೇಣುಕಾಸ್ವಾಮಿ ಮೃತದೇಹವನ್ನು ಆರ್.ಆರ್.ನಗರ ಶೆಡ್ ನಿಂದ ಸುಮ್ಮನಹಳ್ಳಿ ರಾಜಕಾಲುವೆ ಬಳಿ ಈ ಮೂವರು ಬಿಸಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment