ಗುಡ್ ನ್ಯೂಸ್‌.. ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನಕ್ಕೆ ಕರ್ನಾಟಕದ 590 ವಿದ್ಯಾರ್ಥಿಗಳು ಆಯ್ಕೆ

author-image
admin
Updated On
ಗುಡ್ ನ್ಯೂಸ್‌.. ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನಕ್ಕೆ ಕರ್ನಾಟಕದ 590 ವಿದ್ಯಾರ್ಥಿಗಳು ಆಯ್ಕೆ
Advertisment
  • 1 ಲಕ್ಷ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ
  • ಟ್ಯೂಷನ್ ಫೀ, ಹಾಸ್ಟೆಲ್ ವೆಚ್ಚ ಮತ್ತು ಇತರ ಶೈಕ್ಷಣಿಕ ಶುಲ್ಕ
  • ವಿದ್ಯಾರ್ಥಿಗಳು ರಿಲಯನ್ಸ್‌ ಸ್ಕಾಲರ್ ಷಿಪ್ ಪಡೆಯುವುದು ಹೇಗೆ?

ಮುಂಬೈ: ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡುವಂತಹ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದವರ ಪಟ್ಟಿಯನ್ನು ರಿಲಯನ್ಸ್ ಫೌಂಡೇಷನ್ ಘೋಷಣೆ ಮಾಡಿದೆ. ಇದು 2024-25ನೇ ಸಾಲಿಗೆ ಸೇರಿದ್ದು, ಭಾರತದಾದ್ಯಂತ 5 ಸಾವಿರ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಭಾರತದ ಭವಿಷ್ಯವನ್ನು ರೂಪಿಸುವ ಯುವ ಪ್ರತಿಭಾವಂತರನ್ನು ಉತ್ತೇಜಿಸಬೇಕು ಎಂಬ ಉದ್ದೇಶ, ಬದ್ಧತೆಯೊಂದಿಗೆ ರಿಲಯನ್ಸ್ ಫೌಂಡೇಷನ್ ಇಂತಹದ್ದೊಂದು ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ವಿದ್ಯಾರ್ಥಿ ವೇತನಕ್ಕಾಗಿ ಭಾರತದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ, ವೈವಿಧ್ಯಮಯ ಹಿನ್ನೆಲೆಯ 1 ಲಕ್ಷ ಪ್ರಥಮ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಆಯ್ಕೆಯಾದ ವಿದ್ಯಾರ್ಥಿಗಳು ವೈವಿಧ್ಯಮಯ ಹಿನ್ನೆಲೆಯ ಹಾಗೂ ಶೈಕ್ಷಣಿಕ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳು ಹಣಕಾಸಿನ ನೆರವು, ಮಾರ್ಗದರ್ಶನ ಮತ್ತು ಸರ್ವತೋಮುಖ ಬೆಳವಣಿಗೆಯ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

publive-image

1300ರಲ್ಲಿ 670 ಸಂಸ್ಥೆಗಳು ಹಾಗೂ 5000 ವಿದ್ಯಾರ್ಥಿಗಳ ಪೈಕಿ 590 ಮಂದಿ ಕರ್ನಾಟಕಕ್ಕೆ ಸೇರಿರುವುದು ಪ್ರಮುಖವಾಗಿದೆ. ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನದ ಸಿಂಹಪಾಲು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುವುದರಲ್ಲಿ ಶೇಕಡಾ 70ರಷ್ಟು ಕುಟುಂಬಗಳ ವಾರ್ಷಿಕ ಆದಾಯವು 2.50 ಲಕ್ಷ ರೂಪಾಯಿಗಿಂತ ಕಡಿಮೆ ಇದೆ.

ಈ ಸ್ಕಾಲರ್ ಷಿಪ್ ವಿದ್ಯಾರ್ಥಿಯ ಬೋಧನಾ ಶುಲ್ಕ (ಟ್ಯೂಷನ್ ಫೀ), ಹಾಸ್ಟೆಲ್ ವೆಚ್ಚ ಮತ್ತು ಇತರ ಶೈಕ್ಷಣಿಕ ಶುಲ್ಕವನ್ನು ಭರಿಸುತ್ತದೆ. ಆ ಮೂಲಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕವಾದ ಸಮಸ್ಯೆಗಳ ಕಡೆಗೆ ಆಲೋಚನೆ ಮಾಡುವ ಅಗತ್ಯವಿಲ್ಲದೆ ಓದಿನ ಕಡೆಗೆ ಗಮನ ಕೊಡಬಹುದಾಗಿರುತ್ತದೆ. ಹಣಕಾಸಿನ ನೆರವು ಮಾತ್ರವಲ್ಲದೆ, ಈ ವಿದ್ಯಾರ್ಥಿಗಳಿಗೆ ಸಮಗ್ರವಾದ ಬೆಂಬಲ, ಮಾರ್ಗದರ್ಶನ, ವೃತ್ತಿಪರವಾದ ಬೆಳವಣಿಗೆಗೆ ಅವಕಾಶಗಳನ್ನು ಒದಗಿಸಿಕೊಡಲಾಗುವುದು.

publive-image

ರಿಲಯನ್ಸ್ ವಕ್ತಾರರು ಈ ಕಾರ್ಯಕ್ರಮದ ಬಗ್ಗೆ ಮಾತನಾಡಿ, "ಈ ಅಸಾಧಾರಣ ಯುವ ಮನಸ್ಸುಗಳನ್ನು ಗುರುತಿಸಲು ಮತ್ತು ಬೆಂಬಲಿಸಲು ನಾವು ಸಂತೋಷಪಡುತ್ತೇವೆ. ಪ್ರತಿಷ್ಠಿತ ರಿಲಯನ್ಸ್ ಫೌಂಡೇಷನ್ ಪದವಿ ಹಂತದ ಸ್ಕಾಲರ್‌ಷಿಪ್‌ಗಳ ಮೂಲಕವಾಗಿ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸುವುದಕ್ಕೆ ಮತ್ತು ಭಾರತದ ಬೆಳವಣಿಗೆಗೆ ಗಮನಾರ್ಹ ಕೊಡುಗೆಗಳನ್ನು ನೀಡಲು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮವು ಹೆಚ್ಚು ಸ್ಪರ್ಧಾತ್ಮಕವಾಗಿತ್ತು. ಮತ್ತು ಅರ್ಜಿಯ ಪ್ರಕ್ರಿಯೆಯೊಂದಿಗೆ ಅಗಾಧ ಪ್ರತಿಕ್ರಿಯೆಯನ್ನು ಪಡೆಯಿತು. ಈ ವರ್ಷ ನಾವು ಸುಮಾರು ಒಂದು ಲಕ್ಷ ಅರ್ಜಿಗಳನ್ನು ಸ್ವೀಕರಿಸಿದ್ದೇವೆ, ಆಯ್ಕೆಯಾದವರು ದೇಶದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಶಿಕ್ಷಣವು ಅವಕಾಶಗಳನ್ನು ತೆರೆಯುವಂಥ ಕೀಲಿಯಾಗಿದೆ ಮತ್ತು ಈ ವಿದ್ಯಾರ್ಥಿಗಳ ಪರಿವರ್ತನೆಯ ಪ್ರಯಾಣದ ಭಾಗವಾಗಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಡಿ ಉದ್ಯೋಗ ಅವಕಾಶ.. 40 ವರ್ಷದ ಒಳಗಿನವರು ಅರ್ಜಿ ಸಲ್ಲಿಕೆ ಮಾಡಬಹುದು 

ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ?
ಸ್ಕಾಲರ್ ಷಿಪ್ ಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ವೆಬ್ ಸೈಟ್: https://reliancefoundation.org/ug-scholarships-2024-25-results. ಇದಕ್ಕೆ ಭೇಟಿ ನೀಡಬೇಕು.
2024-25ನೇ ಸಾಲಿನ ವಿದ್ಯಾರ್ಥಿವೇತನಕ್ಕಾಗಿ https://scholarships.reliancefoundation.org/UGScholarship_ApplicationStatus.aspx ಮೀಸಲಾದ ಪುಟಕ್ಕೆ ತೆರಳಿ, 17 ಅಂಕಿಯ ಅರ್ಜಿ ಸಂಖ್ಯೆಯನ್ನು ಅಥವಾ ನೋಂದಾಯಿತ ಇ-ಮೇಲ್ ಐಡಿ ನಮೂದಿಸಬೇಕು. ಆ ನಂತರ ಸಲ್ಲಿಸು (ಸಬ್ ಮಿಟ್) ಎಂಬ ಆಯ್ಕೆ ಇರುವ ಬಟನ್ ಒತ್ತುವ ಮೂಲಕವಾಗಿ ಫಲಿತಾಂಶವನ್ನು ನೋಡಬಹುದು. ಅರ್ಜಿಯ ಸ್ಥಿತಿಯು ‘Shortlisted’, ‘Waitlisted’ ಮತ್ತು ‘Not Shortlisted’ ಹೀಗೆ ಮೂರು ವಿಭಾಗಗಳಲ್ಲಿ ಇರುತ್ತದೆ.

publive-image

ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ 2 ಲಕ್ಷ ರೂಪಾಯಿ ತನಕ ವಿದ್ಯಾರ್ಥಿ ವೇತನ ದೊರೆಯುತ್ತದೆ. 1996ನೇ ಇಸವಿಯಲ್ಲಿ ಆರಂಭವಾದ ಈ ಕಾರ್ಯಕ್ರಮವು 2020ರ ಹೊತ್ತಿಗೆ ಭಾರತದಾದ್ಯಂತ 28,000 ವಿದ್ಯಾರ್ಥಿಗಳನ್ನು ತಲುಪಿತ್ತು. 2022ರ ಡಿಸೆಂಬರ್‌ನಲ್ಲಿ ರಿಲಯನ್ಸ್ ಸ್ಥಾಪಕರಾದ ಧೀರೂಭಾಯಿ ಅಂಬಾನಿ ಅವರ 90ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ, ಮುಂದಿನ ಹತ್ತು ವರ್ಷಗಳಲ್ಲಿ ಇನ್ನೂ 50 ಸಾವಿರ ಸ್ಕಾಲರ್ ಶಿಪ್‌ಗಳನ್ನು ನೀಡುತ್ತೇವೆ ಎಂದು ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಮುಖ್ಯಸ್ಥೆಯಾದ ನೀತಾ ಅಂಬಾನಿ ಘೋಷಣೆ ಮಾಡಿದರು. ಆ ನಂತರದಲ್ಲಿ ಪ್ರತಿ ವರ್ಷ 5,100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment