Advertisment

ಬೆಂಗಳೂರಿನ 1ಎಂಜಿ ಮಾಲ್‌ನಲ್ಲಿ ರಿಲಯನ್ಸ್‌ನ ಫ್ರೆಶ್‌ಪಿಕ್ ಮಳಿಗೆ

author-image
Gopal Kulkarni
Updated On
ಬೆಂಗಳೂರಿನ 1ಎಂಜಿ ಮಾಲ್‌ನಲ್ಲಿ ರಿಲಯನ್ಸ್‌ನ ಫ್ರೆಶ್‌ಪಿಕ್ ಮಳಿಗೆ
Advertisment
  • ಬೆಂಗಳೂರಿನಲ್ಲಿ ತನ್ನ ಎರಡನೇ ಮಳಿಗೆ ತೆಗೆದ ರಿಲಯನ್ಸ್ ಫ್ರೆಶ್​ಪಿಕ್
  • ಮುಂಬೈನಲ್ಲಿ ಅದ್ಭುತ ಯಶಸ್ವಿ ಗಳಿಸಿದ ಬಳಿಕ ಬೆಂಗಳೂರಲ್ಲಿ ಓಪನ್
  • ನೀವು ಶಾಪಿಂಗ್​ ಪ್ರಿಯರು ಆಗಿದ್ದರೇ ಇಲ್ಲಿಗೆ ಒಮ್ಮೆ ತಪ್ಪದೇ ಭೇಟಿ ಕೊಡಿ

ಬೆಂಗಳೂರು: ರಿಲಯನ್ಸ್ ರೀಟೇಲ್‌ನ ಪ್ರಮುಖ ದಿನಸಿ ಮಳಿಗೆಯ ಬ್ರ್ಯಾಂಡ್ ಫ್ರೆಶ್‌ಪಿಕ್, ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆ ಪ್ರಾರಂಭಿಸಿದೆ. ಟ್ರಿನಿಟಿ ವೃತ್ತದ 1ಎಂಜಿ ಮಾಲ್‌ನ 4ನೇ ಮಹಡಿಯಲ್ಲಿ ಹೊಸ ಮಳಿಗೆ ಸಜ್ಜಾಗಿದೆ. ಫ್ರೆಶ್‌ಪಿಕ್ ಬ್ರ್ಯಾಂಡ್‌ ಭಾರತದಲ್ಲಿ ತೆರೆಯುತ್ತಿರುವ 2ನೇ ಮಳಿಗೆ ಇದಾಗಿದ್ದು. ಮುಂಬೈನಲ್ಲಿ ಮೊದಲ ಮಳಿಗೆಯು ಅಭೂತಪೂರ್ವ ಯಶಸ್ಸು ಕಂಡ ಬಳಿಕ ಬೆಂಗಳೂರಿನಲ್ಲಿ ಎರಡನೇ ಮಳಿಗೆ ತೆರೆಯಲಾಗುತ್ತಿದೆ. 1ಎಂಜಿ ಮಾಲ್‌ನಲ್ಲಿ ಇರುವ ಹೊಸ ಮಳಿಗೆಯು 14,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ರಿಲಯನ್ಸ್​ನ ಬ್ರ್ಯಾಂಡ್ ಫ್ರೆಶ್​​ಪಿಕ್. ಸಾಟಿಯಿಲ್ಲದ ಉತ್ತಮ ಶಾಪಿಂಗ್ ಅನುಭವವನ್ನು ಗ್ರಾಹಕರಿಗೆ ಈ ಮಳಿಗೆ ನೀಡಲಿದೆ. ಆಹಾರ ಪ್ರಿಯರು ಮತ್ತು ಆರೋಗ್ಯ ಪ್ರಜ್ಞೆಯುಳ್ಳ ಗ್ರಾಹಕರಿಗೆ ಅತ್ಯದ್ಭುತ ರುಚಿಯನ್ನು ಪೂರೈಸುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

Advertisment

ಇದನ್ನೂ ಓದಿ:ಮಹಿಳೆಯರಲ್ಲಿ ಕಂಡುಬರುವ ಈ ಲಕ್ಷಣಗಳು ಕ್ಯಾನ್ಸರ್ ಚಿಹ್ನೆ ಆಗಿರಬಹುದು.. ಈಗಲೇ ಎಚ್ಚೆತ್ತುಕೊಳ್ಳಿ..!

ಈ ಹೊಸ ಫ್ರೆಶ್‌ಪಿಕ್ ಸ್ಟೋರ್ ನಗರದ ಪ್ರಮುಖ ದಿನಸಿ ತಾಣವಾಗಲು ಸಜ್ಜಾಗಿದೆ. ಗ್ರಾಹಕರು ಅದ್ಭುತವಾದ "ಶಾಪಿಂಗ್ ಥಿಯೇಟರ್" ಅನುಭವಗಳನ್ನು ಇಲ್ಲಿ ಕಾಣಬಹುದು. ಇದು ವ್ಯಾಪಕ ಶ್ರೇಣಿಯ ಲೈವ್ ಫುಡ್ ಸ್ಟೇಷ‌ನ್ ಗಳನ್ನು ನೀಡುವ ನವೀನ ಪರಿಕಲ್ಪನೆಯಾಗಿದ್ದು. ಕ್ಯುರೇಟೆಡ್ ಪಾಕಶಾಲೆಯ ಅನುಭವಗಳ ಅನನ್ಯ ಸಮ್ಮಿಲನವನ್ನು ಸೃಷ್ಟಿಸಲಿದೆ. ಗ್ರಾಹಕರು ತಾಜಾ ಹಾಗೂ ವಿಶೇಷವಾದ ಹಣ್ಣುಗಳನ್ನು ಖರೀದಿ ಮಾಡುವ ಮೂಲಕ ಹೊಸ ಅನುಭವ ಪಡೆಯಬಹುದು. ಚೀಸ್ ಮತ್ತು ಅತ್ಯುತ್ತಮ ಬ್ರೆಡ್‌ಗಳು, ಸಿಹಿತಿಂಡಿಗಳು, ಶೂನ್ಯ ತ್ಯಾಜ್ಯ ಸಾವಯವ ವಲಯ, ಕಾಫಿ, ಟರ್ಕಿಶ್ ಡಿಲೈಟ್ಸ್, ಪ್ಯಾಟಿಸ್ಸೆರಿ, ಪ್ರೀಮಿಯಂ ಡ್ರೈ ಫ್ರೂಟ್ಸ್, ನೈಸರ್ಗಿಕ ಐಸ್ ಕ್ರೀಮ್ ಪಾರ್ಲರ್, ದೈನಂದಿನ ತಾಜಾ ಪಾಸ್ತಾ, ಚಾಕೊಲೇಟ್‌ಗಳು, ಕೋಲ್ಡ್ ಪ್ರೆಸ್ಡ್ ಜ್ಯೂಸ್‌ಗಳು ಮತ್ತು ಇನ್ನೂ ಹೆಚ್ಚಿನ ವಿಶೇಷತೆಗಳು ಲಭ್ಯವಿರಲಿವೆ.

ಇದನ್ನೂ ಓದಿ:ಅಪರೂಪದ ಸೊಳ್ಳೆಯಿಂದ ಹರಡುತ್ತೆ ‘EEE’ ವೈರಸ್​​! ಎಚ್ಚರಿಕೆಯಿಂದಿರಿ ಎಂದಿದೆ ಸರ್ಕಾರ

Advertisment

ಹೆಚ್ಚುವರಿಯಾಗಿ, ಆರೋಗ್ಯ ಪ್ರಜ್ಞೆ ಹೊಂದಿರುವ ಗ್ರಾಹಕರಿಗೆ ಗ್ಲುಟೆನ್ ಮುಕ್ತ, ಸಕ್ಕರೆ ಮುಕ್ತ ಮತ್ತು ಸಸ್ಯಾಹಾರಿ ಆಯ್ಕೆಗಳ ವೈವಿಧ್ಯಮಯ ಆಯ್ಕೆಗಳು ಕೂಡ ಇಲ್ಲಿ ನೀಡಲಾಗಿದೆ.
ಬೆಂಗಳೂರಿನ ಈ ಫ್ರೆಶ್‌ಪಿಕ್ ಸ್ಟೋರ್‌ನ ಒಂದು ವಿಶಿಷ್ಟ ಲಕ್ಷಣವೆಂದರೆ ಅದರ ಕೆಫೆ. ಗ್ರಾಹಕರು ಶಾಪಿಂಗ್ ಮಾಡುವಾಗ ಪ್ರೀಮಿಯಂ ಪಾನೀಯಗಳು ಮತ್ತು ತಿಂಡಿಗಳೊಂದಿಗೆ ವಿಶ್ರಾಂತಿ ಪಡೆಯಲು ಅನುಕೂಲಕರ ಸ್ಥಳವನ್ನು ಈ ಕೆಫೆ ನೀಡುತ್ತದೆ.ಸ್ಟೋರ್​ನಲ್ಲಿ ಗಿಫ್ಟ್​​ ವಿಭಾಗವೂ ಕೂಡ ಇದ್ದು. ನಿಮ್ಮ ಆತ್ಮೀಯರಿಗೆ ನೀವು ಗಿಫ್ಟ್ ಕೊಡಬೇಕು ಅನಿಸಿದಲ್ಲಿ ನೀವು ಇಲ್ಲಿ ಭೇಟಿ ಕೊಡಬಹುದು

ಫ್ರೆಶ್‌ಪಿಕ್ ಬಗ್ಗೆ ಮಾತನಾಡಿದ ರಿಲಯನ್ಸ್ ರೀಟೇಲ್‌ನ ಗ್ರೋಸರಿ ರಿಟೇಲ್‌ ವಿಭಾಗದ ಸಿಇಒ ದಾಮೋದರ್ ಮಾಲ್ , "ನೀವು ಉತ್ತಮ ಆಹಾರವನ್ನು ಪ್ರೀತಿಸುವವರಾಗಿದ್ದರೆ, ನಿಮ್ಮ ಆಯ್ಕೆ 1 ಎಂಜಿ ಮಾಲ್‌ನಲ್ಲಿ ಫ್ರೆಶ್‌ಪಿಕ್ ಡಿಸ್ನಿಲ್ಯಾಂಡ್" ಆಗಿರುತ್ತದೆ ಎಂದು ಹೇಳಿದರು. ಈ ಹೊಸ ಮಳಿಗೆಯೊಂದಿಗೆ, ಪ್ರೀಮಿಯಂ ಉತ್ಪನ್ನಗಳು, ಅತ್ಯುತ್ತಮ ಶಾಪಿಂಗ್ ಪರಿಕಲ್ಪನೆಗಳು, ಐಷಾರಾಮಿ ಮತ್ತು ದೈನಂದಿನ ಅಗತ್ಯ ವಸ್ತುಗಳಿಗೆ ಒತ್ತು ನೀಡುವ ಮೂಲಕ ಆಹಾರ ಶಾಪಿಂಗ್ ಅನುಭವವನ್ನು 'ಫ್ರೆಶ್‌ಪಿಕ್' ಹೆಚ್ಚಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment