/newsfirstlive-kannada/media/post_attachments/wp-content/uploads/2025/03/Reliance-Share-bond.jpg)
ಕಳೆದು ಹೋದ ಕಾಸು, ದುಬಾರಿ ವಸ್ತುಗಳು ಸಿಕ್ರೆ ಅದರಿಂದ ಸಿಗೋ ಆನಂದ ಅಷ್ಟಿಷ್ಟಲ್ಲ. ಅದರಿಂದ ಕೈ ತುಂಬಾ ದುಡ್ಡು ಸಿಕ್ರೆ ಹೇಳೋದೇ ಬೇಕಿಲ್ಲ. ಚಂಡೀಗಢದ ಈ ವ್ಯಕ್ತಿಗೂ ಅದೇ ಆಗಿದೆ. ಬರೋಬ್ಬರಿ 37 ವರ್ಷಗಳ ಹಿಂದೆ ಖರೀದಿಸಿದ್ದ ರಿಲಯನ್ಸ್ ಷೇರಿನ ಬಾಂಡ್ ಈ ವ್ಯಕ್ತಿ ಕೈಗೆ ಸಿಕ್ಕಿದ್ದು ಅದೃಷ್ಟ ಖುಲಾಯಿಸುವಂತೆ ಮಾಡಿದೆ.
ಚಂಡೀಗಢ ಮೂಲದ ರಟ್ಟನ್ ದಿಲ್ಲನ್ ಈ ಒಂದು ಸಂತೋಷದ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. X ನಲ್ಲಿ ರಿಲಯನ್ಸ್ ಷೇರುಗಳ ಫೋಟೋ ಹಂಚಿಕೊಂಡಿರುವ ರಟ್ಟನ್ ನನ್ನ ಮನೆಯಲ್ಲಿ ಇದು ನನಗೆ ಸಿಕ್ಕಿದೆ. ಆದರೆ ನನಗೆ ಷೇರು ಮಾರುಕಟ್ಟೆ ಬಗ್ಗೆ ಯಾವುದೇ ಜ್ಞಾನವಿಲ್ಲ. ಯಾರಾದರೂ ನನಗೆ ಇದರ ಬಗ್ಗೆ ಮಾರ್ಗದರ್ಶನ ನೀಡಬಹುದಾ ಎಂದು ಕೇಳಿಕೊಂಡಿದ್ದಾರೆ.
ರಟ್ಟನ್ ದಿಲ್ಲನ್ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಂದ ಸಲಹೆಗಳ ಸುರಿಮಳೆಯೇ ಹರಿದು ಬಂದಿದೆ. ಕಮೆಂಟ್‌ಗಳು ಅಷ್ಟೇ ಅಲ್ಲ ಈ ಪೋಸ್ಟ್ ನೋಡಿ ಸರ್ಕಾರಿ ಸ್ವಾಮ್ಯದ ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರ (IEPFA) ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯುವಂತೆ ಸಲಹೆ ನೀಡಿದೆ.
ಇದನ್ನೂ ಓದಿ: 83 ಕೋಟಿಗೆ ಡ್ಯೂಪ್ಲೆಕ್ಸ್ ಮನೆ ಮಾರಿದ ಬಿಗ್ಬಿಗೆ ಜಾಕ್ಪಾಟ್; ಶೇ 168 ರಷ್ಟು ಲಾಭ..!
ಏನಿದರ ಅಸಲಿಯತ್ತು?
ರಟ್ಟನ್ ದಿಲ್ಲನ್ ಚಂಡೀಗಢದ ನಿವಾಸಿಯಾಗಿದ್ದು, ಅವರ ಹಿರಿಯರು ರಿಲಯನ್ಸ್ ಇಂಡಸ್ಟ್ರೀಸ್ ಶೇರು ಖರೀದಿಸಿ ಮನೆಯಲ್ಲೇ ಇಟ್ಟಿದ್ದರು. ಇತ್ತೀಚೆಗೆ ಅವರ ಮನೆಯ ಹಳೆಯ ತಿಜೋರಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಬಾಂಡ್ ಪತ್ರಗಳು ಸಿಕ್ಕಿದೆ. 1988ರಲ್ಲಿ ಈ ರಿಲಯನ್ಸ್ ಷೇರುಗಳನ್ನು ರಟ್ಟನ್ ಕುಟುಂಬಸ್ಥರು ಖರೀದಿ ಮಾಡಿದ್ದಾರೆ. ಅಂದಿಗೆ 10 ರೂಪಾಯಿ ಬೆಲೆಯ 30 ರಿಲಯನ್ಸ್ ಷೇರುಗಳು ರಟ್ಟನ್ ದಿಲ್ಲನ್ ಕೈ ಸೇರಿದೆ.
We found these at home, but I have no idea about the stock market. Can someone with expertise guide us on whether we still own these shares?😅@reliancegrouppic.twitter.com/KO8EKpbjD3
— Rattan Dhillon (@ShivrattanDhil1)
We found these at home, but I have no idea about the stock market. Can someone with expertise guide us on whether we still own these shares?😅@reliancegrouppic.twitter.com/KO8EKpbjD3
— Rattan Dhillon (@ShivrattanDhil1) March 11, 2025
">March 11, 2025
37 ವರ್ಷದ ರಿಲಯನ್ಸ್ ಷೇರುಗಳನ್ನು ನೋಡಿದ ರಿಟ್ಟನ್ ಕೂಡಲೇ ನೆಟ್ಟಿಗರ ಸಹಾಯ ಕೋರಿದ್ದಾರೆ. ಸದ್ಯ ರಿಟ್ಟನ್ ದಿಲ್ಲನ್ ಪೋಸ್ಟ್ ವೈರಲ್ ಆಗಿದ್ದು, ಇವತ್ತಿಗೆ ಈ ಷೇರು ಪತ್ರದ ಮೌಲ್ಯ ಎಷ್ಟು ಅನ್ನೋದನ್ನ ಲೆಕ್ಕಾಚಾರ ಹಾಕಲಾಗಿದೆ.
ಇವತ್ತಿನ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಮೌಲ್ಯ 1 ಸಾವಿರದ 247 ರೂಪಾಯಿ 40 ಪೈಸೆ ಇದೆ. ಇದನ್ನು 37 ವರ್ಷದ ಹಳೆಯ 30 ಷೇರುಗಳಿಗೆ ಲೆಕ್ಕ ಹಾಕಿದಾಗ ಅಂದಾಜು 10 ಲಕ್ಷದ 7 ಸಾವಿರ ರೂಪಾಯಿಗಳಾಗುತ್ತದೆ. ಬೋನಸ್ ಅಂಕಗಳು ಸೇರಿದ್ರೆ ಸುಮಾರು 11 ಲಕ್ಷದ 88 ಸಾವಿರ ರೂಪಾಯಿ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ