/newsfirstlive-kannada/media/post_attachments/wp-content/uploads/2025/03/MND_ISLAM_4.jpg)
ಯುವಕ ಹಾಗೂ ಯುವತಿ ಮತಬೇಧ ಮರೆತು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ ಪ್ರೀತಿಗೆ ಪ್ರತೀಕವಾಗಿ ಮುದ್ದಾದ ಮಗ ಕೂಡ ಜನಿಸಿದ್ದ. ಆದ್ರೆ ಪತ್ನಿಯ ಕುಟುಂಬಸ್ಥರು ಪತ್ನಿ ಮತ್ತು ಮಗನನ್ನು ಇಸ್ಲಾಂಗೆ ಮತಾಂತರ ಮಾಡಲು ನೋಡುತ್ತಿದ್ದಾರೆಂದು ಪತಿ ಆರೋಪಿಸಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆ ಮುಂದೆ ಕುಳಿತು ನ್ಯಾಯಕ್ಕಾಗಿ ಧರಣಿ ಕುಳಿತಿದ್ದಾನೆ.
ಪ್ರೀತಿ-ಪ್ರೇಮ.. ಇದಕ್ಕೆ ಧರ್ಮ, ಜಾತಿ, ವಯಸ್ಸಿನ ಹಂಗಿಲ್ಲ. ನಾವು ಹೇಳ್ತಿರುವ ಸ್ಟೋರಿಯಲ್ಲೂ ಇದೇ ತರ ಮತಬೇಧ ಮರೆತು ಜೋಡಿಯೊಂದು ಮದುವೆಯಾಗಿದೆ. ಪತಿ-ಪತ್ನಿ ಚೆನ್ನಾಗೆ ಇದ್ದು ಪ್ರೀತಿಗೆ ಸಾಕ್ಷಿಯಾಗಿ ಮಗು ಕೂಡ ಆಗಿದೆ. ಆದ್ರೆ ಪತ್ನಿಯ ಹೆತ್ತವರು ಮಾತ್ರ ಮಗುವಿನ ಮತಾಂತರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ.
ಇಸ್ಲಾಂಗೆ ಮಗನ ಮತಾಂತರಕ್ಕೆ ಪತ್ನಿ ಕಡೆಯವರಿಂದ ಯತ್ನ?
ಮತಬೇಧ ಮರೆತು ಮದುವೆಯಾಗಿ ಚೆನ್ನಾಗೆ ಸಂಸಾರದ ಬಂಡಿ ಸಾಗಿಸುತ್ತಿರುವ ಸುಂದರ್ (ಹೆಸರು ಬದಲಿಸಲಾಗಿದೆ) ಹಾಗೂ ಜೈರಾ (ಹೆಸರು ಬದಲಿಸಲಾಗಿದೆ) ದಂಪತಿ, ಮಂಡ್ಯದವರು. ಮುಸ್ಲಿಂ ಯುವತಿ ಜೈರಾ ಪ್ರೀತಿಸಿ ಸುಂದರ್ ಮದುವೆ ಆಗಿದ್ದರು. ಬಳಿಕ ಹಿಂದೂ ಧರ್ಮಕ್ಕೆ ಮತಾಂತಗೊಂಡು ಹೆಸರು ಬದಲಿಸಿಕೊಂಡು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಆದ್ರೆ ದಂಪತಿ ಬಾಳಲ್ಲಿ ಪತ್ನಿ ತವರು ಮನೆಯವರೇ ವಿಲನ್ ಆಗಿದ್ದಾರಂತೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಡಲು ಹೋದ್ರೆ ಸ್ವೀಕರಿಸಿಲ್ಲ ಅಂತ ಸುಂದರ್ ಪೊಲೀಸ್ ಠಾಣೆ ಎದುರು ಧರಣಿ ಕುಳಿತಿದ್ದಾರೆ.
ಇಸ್ಲಾಂಗೆ ಪುತ್ರನ ಮತಾಂತರಕ್ಕೆ ಯತ್ನ!?
- ಇಸ್ಲಾಂಗೆ ಪುತ್ರನ ಮತಾಂತರಕ್ಕೆ ಪತ್ನಿಯ ಹೆತ್ತವರಿಂದ ಯತ್ನ ಆರೋಪ
- 2018 ರಲ್ಲಿ ಸೋಮವಾರಪೇಟೆ ಮೂಲದ ಜೈರಾ ಜೊತೆಗೆ ಮದುವೆ
- ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಮಹಿಳೆ, ಅನ್ಯೋನ್ಯ ಜೀವನ
- 1.5 ತಿಂಗಳ ಹಿಂದೆ ತಾಯಿಗೆ ಹುಷಾರಿಲ್ಲವೆಂದು ಮಗನೊಂದಿಗೆ ತವರಿಗೆ
- ತವರಿಗೆ ಹೋದ ಮೇಲೆ ಫೋನ್ ಸ್ವಿಚ್ ಮಾಡಿಕೊಂಡಿದ್ದ ಮಹಿಳೆ
- ಫೋನ್ ಮಾಡಿ ಮಗನ ಮತಾಂತರಕ್ಕೆ ಯತ್ನಿಸುತ್ತಿರುವುದಾಗಿ ಮಾಹಿತಿ
- ಕುಟುಂಬಸ್ಥರು ಮಗನ ಮೇಲೆ ಹಲ್ಲೆ ಮಾಡಿರುವುದಾಗಿ ಹೇಳಿಕೊಂಡ ಖುಷಿ
- ದೂರು ತೆಗೆದುಕೊಳ್ಳಲು ಹಿಂದೇಟು, ಮದ್ದೂರು ಠಾಣೆ ಎದುರು ಪ್ರತಿಭಟನೆ
- ಹಿಂದು ಕಾರ್ಯಕರ್ತರೊಂದಿಗೆ ಪ್ರತಿಭಟನೆ ಆರಂಭಿಸಿರುವ ಸುಂದರ್
ಇದನ್ನೂ ಓದಿ:ಕಾರಲ್ಲಿ ಹಣ ಇಡುವಾಗ ಹುಷಾರ್..! ಜಸ್ಟ್ 33 ಸೆಕೆಂಡ್ನಲ್ಲಿ 33 ಲಕ್ಷ ಹಣ ಕದ್ದ ಖತರ್ನಾಕ್ ಗ್ಯಾಂಗ್
ಪ್ರೀತಿಸಿ ಮದುವೆಯಾಗಿ ಅನ್ಯೋನ್ಯವಾಗಿ ಪತಿ-ಪತ್ನಿ ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಈ ಸುಂದರ್ ಹಾಗೂ ಜೈರಾ ಸಂಸಾರಕ್ಕೆ ಪತ್ನಿಯ ಮನೆಯವರೇ ವಿಲನ್ ಆಗಿದ್ದಾರಂತೆ. ಪತ್ನಿ ಮತ್ತು ಮಗುವನ್ನು ಬಲವಂತವಾಗಿ ಹಿಡಿದಿಟ್ಟುಕೊಂಡು ಮತಾಂತರಕ್ಕೆ ಯತ್ನಿಸುತ್ತಿದ್ದಾರೆಂದು ಪತಿ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಡಲು ಹೋದ್ರೆ ಅವರು ಖ್ಯಾರೇ ಅಂತಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳು ಮಧ್ಯಪ್ರವೇಶಿಸಿ ವಿಚಾರಣೆ ನಡೆಸಿ ಆ ಬಡಪಾಯಿಯ ಸಂಸಾರದ ಬಂಡಿಯನ್ನು ಸುಸೂತ್ರವಾಗಿ ಹೋಗುವಂತೆ ಮಾಡಬೇಕಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ