newsfirstkannada.com

ಭಾರೀ ಆತಂಕ ಸೃಷ್ಟಿಸಿದ ‘ರೆಮಲ್’ ಸೈಕ್ಲೋನ್.. ರಾಜ್ಯಕ್ಕೂ ತಟ್ಟಲಿದೆಯಾ ರಣ‘ಚಂಡಿ’ ಎಫೆಕ್ಟ್​?

Share :

Published May 26, 2024 at 6:53am

    21 ಗಂಟೆಗಳ ಕಾಲ ಏರ್​ಪೋರ್ಟ್​ನಲ್ಲಿ ವಿಮಾನ ಹಾರಾಟ ಸ್ಥಗಿತ

    ಮೀನುಗಾರರಿಗೆ ರೆಡ್ ಅಲರ್ಟ್ ಘೋಷಣೆ, ಸಮುದ್ರಕ್ಕಿಳಿಯದಂತೆ ಎಚ್ಚರಿಕೆ

    ದಕ್ಷಿಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ರೆಮಲ್ ಚಂಡಮಾರುತ ಇಂದು ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಪಶ್ಚಿಮ ಬಂಗಾಳ ಸೇರಿ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ರೆಮಲ್ ಸೈಕ್ಲೋನ್ ಕರುನಾಡಿನ ಮೇಲೂ ಎಫೆಕ್ಟ್​ ಬೀರಲಿದ್ದು, ವ್ಯಾಪಕ ಮಳೆಯ ಮುನ್ನೆಚ್ಚರಿಕೆ ಸಿಕ್ಕಿದೆ.

ಬಂಗಾಳದ ಕರಾವಳಿಗಿಂದು ಅಪ್ಪಳಿಸಲಿದೆ ಚಂಡಿ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಸೃಷ್ಟಿಯಾಗಿರೋ ರೆಮಲ್ ಚಂಡಮಾರುತ ಬಂಗಾಳ, ಓಡಿಶಾ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಇಂದು ರಾತ್ರಿ ಕರಾವಳಿ ತೀರಕ್ಕೆ ಅಪ್ಪಳಿಸೋ ಎಚ್ಚರಿಕೆಯನ್ನ ಹವಾಮಾನ ಇಲಾಖೆ ನೀಡಿದೆ.

ಪಶ್ಚಿಮ ಬಂಗಾಳ ರಾಜಧಾನಿ ಕೊಲ್ಕತ್ತಾದಲ್ಲಿ ಈಗಾಗಲೇ ಸೈಕ್ಲೋನ್​ ಪರಿಣಾಮ ಶುರುವಾಗಿದೆ. ಪರಿಣಾಮ ನಗರದ ಹಲವೆಡೆ ಭಾರೀ ಮಳೆಯಾಗ್ತಿದೆ. ಜೋರಾಗಿ ಗಾಳಿಯೂ ಬೀಸ್ತಿದೆ. ಈ ಬೆನ್ನಲ್ಲೇ ಇಂದು ಸುಮಾರು 60 ರಿಂದ 70 ಕಿಲೋ ಮೀಟರ್​​ ವೇಗದಲ್ಲಿ ಕರಾವಳಿ ತೀರಕ್ಕೆ ಸೈಕ್ಲೋನ್ ಅಪ್ಪಳಿಸಲಿದೆ. ಈ ವೇಳೆ 100 ರಿಂದ 110 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಡಿಶಾದ ಕರಾವಳಿ ಜಿಲ್ಲೆಗಳು, ಮಿಜೋರಾಂ, ತ್ರಿಪುರಾ ಹಾಗೂ ದಕ್ಷಿಣ ಮಣಿಪುರದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ಸಿಕ್ಕಿದೆ.

ಬರ್ತಿದೆ ರಣಚಂಡಿ ‘ರೆಮಲ್’!

ಸದ್ಯ ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶದಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿದೆ. ಇಂದು ಮಧ್ಯರಾತ್ರಿಯ ನಂತರ, ಈ ಚಂಡಮಾರುತವು ನೆರೆಯ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಮೂಲಕ ಹಾದುಹೋಗಲಿದೆ. ಇದರ ಪರಿಣಾಮ ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗೋ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರ ತೀರದಲ್ಲಿರೋ ಸಾವಿರಾರು ಜನರನ್ನ ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಚಂಡಮಾರುತದ ಎಫೆಕ್ಟ್​ನಿಂದ ಬಂಗಾಳಕೊಲ್ಲಿಯಲ್ಲಿ ಯಮಗಾಳಿ ಬೀಸ್ತಿದೆ. ಹೀಗಾಗಿ ಮೀನುಗಾರರಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಇನ್ನು, ಭಾರೀ ಗಾಳಿ ಬೀಸೋ ಕಾರಣ ಮುಂದಿನ 21 ಗಂಟೆಗಳ ಕಾಲ ಕೊಲ್ಕತ್ತಾ ಏರ್​ಪೋರ್ಟ್​ನಲ್ಲಿ ವಿಮಾನ ಹಾರಾಟವನ್ನ ಸ್ಥಗಿತಗೊಳಿಸಲಾಗಿದೆ.

ರಾಜ್ಯಕ್ಕೂ ತಟ್ಟಲಿದೆಯಾ ‘ರೆಮಲ್’​​​ ಎಫೆಕ್ಟ್​​​?

ರೆಮಲ್​​ ಚಂಡಮಾರುತದ ಪರಿಣಾಮ ದಕ್ಷಿಣದ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಇರಲಿದ್ದು, ಭಾರೀ ಮಳೆಯಾಗಲಿದೆ. ಇನ್ನು, ಈ ಸೈಕ್ಲೋನ್ ಎಫೆಕ್ಟ್​​​ ನಮ್ಮ ರಾಜ್ಯಕ್ಕೂ ತಟ್ಟಲಿದೆ ಅಂತಾ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಳ್ಳಾರಿ, ಬೆಳಗಾವಿಯ ಸೇರಿ ಕೆಲ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ರಾಜಧಾನಿ ಬೆಂಗಳೂರಿನಲ್ಲೂ ಮುಂದಿನ ಐದು ದಿನಗಳ ಕಾಲ ವರುಣನಬ್ಬರ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಪ್ರಬುದ್ಧ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​; ಎಲ್ಲರ ಕಣ್ಣು ತಪ್ಪಿಸಲು ಅಪ್ರಾಪ್ತ ಬಾಲಕ ಮಾಡಿದ್ದ ಸಖತ್​ ಪ್ಲಾನ್

ಒಟ್ಟಾರೆ, ಭಾರತಕ್ಕೆ ಮುಂಗಾರು ಪ್ರವೇಶದ ಸಮಯದಲ್ಲೇ ​ಚಂಡಮಾರುತ ಸೃಷ್ಟಿಯಾಗಿದ್ದು, ರೆಮಲ್​​ ಸೈಕ್ಲೋನ್​ನಿಂದ ಮುಂಗಾರು ಮಳೆಗೆ ಎಫೆಕ್ಟ್​​ ಆಗಲಿದೆಯಾ ಎಂದು ಕಾದುನೋಡಬೇಕಿದೆ. ಆದ್ರೆ ಇದು ಭಾರೀ ಪ್ರಮಾಣದ ಎಫೆಕ್ಟ್ ಮಾಡಬಹುದು ಅಂತಾ ಈಶಾನ್ಯದ ಜನರಲ್ಲಿ ಆತಂಕವನ್ನ ಸೃಷ್ಟಿಸಿರೋದಂತೂ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರೀ ಆತಂಕ ಸೃಷ್ಟಿಸಿದ ‘ರೆಮಲ್’ ಸೈಕ್ಲೋನ್.. ರಾಜ್ಯಕ್ಕೂ ತಟ್ಟಲಿದೆಯಾ ರಣ‘ಚಂಡಿ’ ಎಫೆಕ್ಟ್​?

https://newsfirstlive.com/wp-content/uploads/2024/05/Remal-Cyclone.jpg

Load More