newsfirstkannada.com

ಎಚ್ಚರದಿಂದಿರಿ! ಗಂಟೆಗೆ 135 ಕಿಮೀ ವೇಗ.. ರೆಮಲ್ ಸೈಕ್ಲೋನ್​ಗೆ 16 ಜನರು ಬಲಿ

Share :

Published May 28, 2024 at 6:48am

Update May 28, 2024 at 6:52am

    ಈಶಾನ್ಯ ರಾಜ್ಯಗಳನ್ನ ಹಾದು ಹೋಗಲಿದೆ ಈ ರಣಚಂಡಿ ಸೈಕ್ಲೋನ್

    ಸೈಕ್ಲೋನ್​ನಿಂದಾಗಿ ವಿಮಾನಯಾನ ರದ್ದು, ರೈಲು ಸೇವೆಯಲ್ಲಿ ವ್ಯತ್ಯಯ

    ಚಂಡಮಾರುತದಿಂದ 29,500 ಮನೆಗಳು ಧ್ವಂಸ, ಅಪಾರ ನಷ್ಟ

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ರೀಮಲ್ ಚಂಡಮಾರುತ ಭಾರಿ ಅವಾಂತರಗಳನ್ನು ಸೃಷ್ಟಿಸಿದೆ. ಬಾಂಗ್ಲಾದೇಶ, ಪಶ್ಚಿಮ ಬಂಗಾಳ ಸೇರಿ ಈಶಾನ್ಯ ರಾಜ್ಯಗಳಿಗೆ ಅಪ್ಪಳಿಸಿರುವ ರಣಚಂಡಿ ಮಾರುತ 16 ಜನರನ್ನು ಬಲಿ ಪಡೆದಿದೆ.

ರೆಮಲ್‌ ಆರ್ಭಟಕ್ಕೆ ಬಂಗಾಳದಲ್ಲಿ 6, ಬಾಂಗ್ಲಾದಲ್ಲಿ 10 ಮಂದಿ ಸಾವು

ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸಿರೋ ರೆಮಲ್‌ ಚಂಡಮಾರುತ ಅಪಾರ ಹಾನಿ ಉಂಟು ಮಾಡ್ತಿದೆ. ಸಾವು- ನೋವಿಗೂ ಕಾರಣವಾಗ್ತಿದ್ದು, ಪಶ್ಚಿಮ ಬಂಗಾಳದಲ್ಲಿ 6 ಹಾಗೂ ಬಾಂಗ್ಲಾದೇಶದಲ್ಲಿ 10 ಸಾವನ್ನಪ್ಪಿದ್ದಾರೆ. ಹವಾಮಾನ ಇಲಾಖೆ ಪ್ರಕಾರ ಚಂಡಮಾರುತ ಈಶಾನ್ಯ ರಾಜ್ಯಗಳನ್ನ ಹಾದು ಸೈಕ್ಲೋನ್ ಹೋಗಲಿದೆ. ಹೀಗಾಗಿ ಮುಂದಿನ 24 ಗಂಟೆಯಲ್ಲಿ ಅಸ್ಸಾಂನ 11 ಜಿಲ್ಲೆಗಳು ಸೇರಿದಂತೆ ಈಶಾನ್ಯದ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಬಂಗಾಳ ಕರಾವಳಿ ತೀರದ 29,500 ಮನೆಗಳು ಧ್ವಂಸ, ಅಪಾರ ನಷ್ಟ

ಬಿರುಗಾಳಿ ಮಳೆ ಅಬ್ಬರಕ್ಕೆ ಉತ್ತರ 24 ಪರಗಣ, ಪೂರ್ವ ಮಿಡ್ನಾಪುರ ಜಿಲ್ಲೆಗಳಲ್ಲಿ ಹಲವು ಮನೆಗಳ ಮೇಲ್ಚಾವಣಿ ಹಾರಿ ಹೋಗಿವೆ. ಬಂಗಾಳ ಕರಾವಳಿ ತೀರದ 29 ಸಾವಿರದ 500ಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿದೆ. 300ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು, 2,100ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಕೋಲ್ಕತ್ತಾದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನ ಜೀವನ ಅಸ್ತವ್ಯವಸ್ತಗೊಂಡಿದೆ. ಕೆಲವು ಕಡೆ ದೂರವಾಣಿ ಸಂಪರ್ಕ ಕಡಿತಗೊಂಡಿದೆ.

1,438 ಆರೈಕೆ ಕೇಂದ್ರಗಳಲ್ಲಿ 2.80 ಲಕ್ಷ ಜನರಿಗೆ ಪುನರ್ವಸತಿ

ರೆಮಲ್‌ ಅಪಾಯದ ಹಿನ್ನೆಲೆಯಲ್ಲಿ ಸಮುದ್ರ ತೀರದ ಪ್ರದೇಶಗಳ 2.80 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಚಂಡಮಾರುತದಿಂದ ಹಾನಿಗೀಡಾದ ಪ್ರದೇಶಗಳ ಜನರಿಗೆ ತುರ್ತಾಗಿ ಆರ್ಥಿಕ ನೆರವು ನೀಡಲಾಗ್ತಿದೆ.

ಇದನ್ನೂ ಓದಿ: VIDEO: ಇದೇ ಕೈಯಾರೆ ಕಳೆದುಕೊಂಡೆ! ಚಿನ್ನುವನ್ನು ನೆನೆದು ಭಾವುಕರಾದ ಆ್ಯಂಕರ್ ಅನುಶ್ರೀ

ಗಾಳಿ, ಮಳೆಯಿಂದ ವಿಮಾನ, ರಸ್ತೆ, ರೈಲು ಸೇವೆಯಲ್ಲಿ ವ್ಯತ್ಯಯ

ಚಂಡಮಾರುತದ ಅಬ್ಬರಕ್ಕೆ ಅಗರ್ತಲಾ ವಿಮಾನ ನಿಲ್ದಾಣದಿಂದ 11 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಜೊತೆಗೆ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸುಮಾರು 42 ಟ್ರೈನ್​ಗಳ ಪ್ರಯಾಣ ಕ್ಯಾನ್ಸಲ್ ಮಾಡಲಾಗಿದೆ.

ಒಟ್ಟಾರೆ, ಚಂಡಮಾರುತ ಅಪ್ಪಳಿಸುವುದಕ್ಕೂ ಮುನ್ನ ಹೈಅಲರ್ಟ್ ಘೋಷಿಸಿದ್ದ ವಿಪತ್ತು ನಿರ್ವಹಣಾ ಅಧಿಕಾರಿಗಳು ಹೆಚ್ಚು ಹಾನಿ ತಪ್ಪಿಸಲು ಮುಂಜಾಗ್ರತಾ ಕ್ರಮಕೈಗೊಂಡಿದ್ದರೂ ಅಪಾರ ಪ್ರಮಾಣದಲ್ಲಿ ಹಾನಿ ಸೃಷ್ಟಿಸಿ ಜನ ಬೆಚ್ಚಿ ಬೀಳುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಚ್ಚರದಿಂದಿರಿ! ಗಂಟೆಗೆ 135 ಕಿಮೀ ವೇಗ.. ರೆಮಲ್ ಸೈಕ್ಲೋನ್​ಗೆ 16 ಜನರು ಬಲಿ

https://newsfirstlive.com/wp-content/uploads/2024/05/Cyclone.jpg

Load More