Skin Care Tips: ಬೆವರಿನ ನಂತರ.. ವಿಪರೀತ ತುರಿಕೆ.. ಮನೆಮದ್ದಿನಲ್ಲಿದೆ ಸರಳ ಪರಿಹಾರ..!

author-image
Ganesh
Updated On
Skin Care Tips: ಬೆವರಿನ ನಂತರ.. ವಿಪರೀತ ತುರಿಕೆ.. ಮನೆಮದ್ದಿನಲ್ಲಿದೆ ಸರಳ ಪರಿಹಾರ..!
Advertisment
  • ಬೆವರಿನಿಂದ ನಿಮಗೆ ತುರಿಕೆ ಸಮಸ್ಯೆ ಕಾಡುತ್ತಾ?
  • ಗಟ್ಟಿಯಾಗಿ ತುರಿಸಿಕೊಂಡರೆ ಏನೆಲ್ಲ ಸಮ್ಯೆ ಆಗುತ್ತದೆ?
  • ಅತಿಯಾದ ಸ್ಕ್ರಾಚಿಂಗ್ ಚರ್ಮಕ್ಕೆ ಒಳ್ಳೆಯದಲ್ಲ

ಮಳೆಗಾಲ ಮುಗಿದು ಚಳಿಗಾಲ ಎಂಟ್ರಿಯಾಗಿದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ಬೇರೆ. ವರ್ಕೌಟ್, ವಾಕಿಂಗ್, ಇತರೆ ದೈಹಿಕ ಬಲದ ಮೂಲಕ ಕೆಲಸ ಮಾಡುವಾಗ ಬೆವರಲು ಶುರುವಾಗುತ್ತದೆ. ಬೆವರಿದ ನಂತರ ತುರಿಕೆ ಉಂಟಾಗುತ್ತದೆ. ತುರಿಕೆ ಶುರುವಾದ ಮೇಲೆ ಸ್ಕ್ರಾಚಿಂಗ್​ನಂತೆ ಭಾಸವಾಗುತ್ತದೆ. ಗಟ್ಟಿಯಾಗಿ ತುರಿಸಿಕೊಳ್ಳುವುದರಿಂದ ಚರ್ಮ ಕೆಂಪಾಗುತ್ತದೆ ಮತ್ತು ಉರಿಯುತ್ತದೆ. ದದ್ದು ಬರುತ್ತದೆ.. ಚರ್ಮ ಹಾಳಾಗುತ್ತದೆ!

ಬೆವರಿನ ನಂತರ..
ಮುಲ್ತಾನಿ ಜೇಡಿ ಮಣ್ಣು ಚರ್ಮಕ್ಕೆ ತುಂಬಾ ಪ್ರಯೋಜನ. ತುರಿಕೆ ಇರುವ ಜಾಗಕ್ಕೆ ಮುಲ್ತಾನಿ ಮಿಟ್ಟಿಯನ್ನು ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ. ಬೆವರಿನ ವಾಸನೆ ಹೋಗಲಾಡಿಸಲು ಮತ್ತು ತುರಿಕೆ ಕಡಿಮೆ ಮಾಡಲು.. ಗಂಧದ ಪುಡಿ ಚರ್ಮಕ್ಕೆ ತುಂಬಾ ಒಳ್ಳೆಯದು. ಶ್ರೀಗಂಧದ ಪುಡಿಯನ್ನು ಸ್ವಲ್ಪ ರೋಸ್ ವಾಟರ್ ನೊಂದಿಗೆ ಬೆರೆಸಿ ಸೇವಿಸಿದರೆ ತುರಿಕೆ ಕಡಿಮೆಯಾಗುತ್ತದೆ. ದುರ್ವಾಸನೆಯೂ ಕಮ್ಮಿ ಆಗುತ್ತದೆ.

ಆಲೂಗಡ್ಡೆ ಬಳಕೆಯಿಂದಲೂ ಚರ್ಮದ ಕಿರಿಕಿರಿ ಮತ್ತು ಉರಿಯೂತ ಕಮ್ಮಿ ಆಗುತ್ತದೆ. ಆಲೂಗೆಡ್ಡೆ ಪೇಸ್ಟ್ ಅನ್ನು ಚರ್ಮಕ್ಕೆ ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ. ಜೋಳದ ಗಂಜಿ ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ. ಈ ಮನೆಮದ್ದುಗಳಿಂದ ತುರಿಕೆಯನ್ನು ಸುಲಭವಾಗಿ ಕಡಿಮೆ ಮಾಡಬಹುದು. ವಿಪರೀತ ತುರಿಕೆಯಿಂದಾಗಿ ಕೆಲವರು ಸ್ಕ್ರಾಚ್ ಮಾಡುತ್ತಾರೆ. ಅತಿಯಾದ ಸ್ಕ್ರಾಚಿಂಗ್ ಚರ್ಮಕ್ಕೆ ಒಳ್ಳೆಯದಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment