/newsfirstlive-kannada/media/post_attachments/wp-content/uploads/2024/10/SINGER-KK.jpg)
ಶುಕ್ರವಾರ, ಅಕ್ಟೋಬರ್ 25 ರಂದು ಅಂದ್ರೆ ಇಂದು ಗೂಗಲ್ ಡೂಡಲ್​ ಮೂಲಕ ಬಾಲಿವುಡ್ ಗಾಯಕ ಕೃಷ್ಣಕುಮಾರ್ ಕುನ್ನತ್ತ ಅವರಿಗೆ ಶ್ರದ್ಧಾಂಜಲಿಯನ್ನು ಸಮರ್ಪಿಸಿದೆ. ಬಾಲಿವುಡ್​​ಗೆ ಕೆಕೆ ಕಾಲಿರಿಸಿದ ವಾರ್ಷಿಕೋತ್ಸವವನ್ನು ಡೂಡಲ್ ನೆನಪು ಮಾಡಿಕೊಂಡಿದ್ದೆ. ಕೃಷ್ಣಕುಮಾರ್ ಕುನ್ನತ್ತ ಅಂದ್ರೆ ಅನೇಕ ಜನರಿಗೆ ಈ ಗಾಯಕನ ಗುರುತು ಸಿಗುವುದಿಲ್ಲ. ಕೆಕೆ ಅಂದ ತಕ್ಷಣ ಅವರ ಮಧುರವಾದ ಕಂಠ ಹಾಗೂ ಗಾಯನ ಕಿವಿಯಲ್ಲಿ ಗುನುಗುನಿಸಲು ಆರಂಭವಾಗುತ್ತದೆ.
ಇದೇ ದಿನ 1996 ರಲ್ಲಿ ಕೆಕೆ ಮೊದಲ ಬಾರಿ ಬಾಲಿವುಡ್ ಸಿನಿಮಾಗೆ ಹಾಡು ಹಾಡಿದ್ದರು. ಗುಲ್ಜಾರ್ ನಿರ್ದೇಶನದಲ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾಗೆ ಚೋಡ್ ಆಯೆ ಹಮ್ ಹಾಡು ಹಾಡುವ ಮೂಲಕ ಸಿನಿಮಾ ಗಾಯನದ ಪ್ರಪಂಚಕ್ಕೆ ಕಾಲಿಟ್ಟಿದ್ದರು ಕೆಕೆ. ಇದನ್ನು ನೆನಪಿಸಿಕೊಂಡಿರುವ ಗೂಗಲ್, ಅವರು ಮೈಕ್ ಹಿಡಿದುಕೊಂಡು ಹಾಡು ಹಾಡುತ್ತಿರುವ ಆ್ಯನಿಮೆಟೆಡ್ ಡೂಡಲ್​ನ್ನು ಹಾಕಿ ಶ್ರದ್ಧಾಂತಜಲಿ ಸಲ್ಲಿಸಿದೆ.
ಕೆಕೆ ಡೂಡಲ್​ ಪ್ರಸ್ತುತೆಯ ಬಗ್ಗೆ ವಿವರಿಸಿರುವ ಗೂಗಲ್ ವೆಬ್​ಸೈಟ್. ಗೂಗಲ್ ಕೆಕೆ ಅವರ ಪ್ರಮುಖ ದಿನವನ್ನು ನೆನೆಪಿಸಿಕೊಳ್ಳುತ್ತಿದೆ. ಅವರೊಬ್ಬರು ಯಶಸ್ವಿ ಬಹುಮುಖ ಸಾಮರ್ಥ್ಯ ಹೊಂದಿದ ಹಿನ್ನೆಲೆ ಗಾಯಕ. ಅವರು ಅನೇಕ ಭಾಷೆಗಳಲ್ಲಿ ಹಾಡು ಹಾಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಹಿಂದಿ, ತೆಲಗು, ತಮಿಳು, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಬೆಂಗಾಲಿ, ಅಸ್ಸಾಮಿ ಹಾಗೂ ಗುಜರಾತಿ ಭಾಷೆಗಳಲ್ಲೂ ಕೂಡ ಹಾಡು ಹಾಡಿದ್ದಾರೆ. ಅವರಿಗಾಗಿ ಗೂಗಲ್ ಶ್ರದ್ಧಾಂಜಲಿ ಅರ್ಪಿಸಿದೆ ಎಂದು ಹೇಳಲಾಗಿದೆ.
1996ರಲ್ಲಿ ಇದೇ ದಿನ ಬಾಲಿವುಡ್​ ಗಾಯನ ಜಗತ್ತಿಗೆ ಕಾಲಿಟ್ಟಿದ್ದ ಕೃಷ್ಣಕುಮಾರ್ ಕುನ್ನತ್ತ. 1968ರಲ್ಲಿ ದೆಹಲಿಯಲ್ಲಿ ಜನಿಸಿದ್ದರು. ಅವರು ತಮ್ಮ ವೃತ್ತಿ ಬದುಕಿನಲ್ಲಿ 11 ಭಾಷೆಗಳಲ್ಲಿ 3500 ಕ್ಕೂ ಹೆಚ್ಚು ಜಿಂಗಲ್​ಗಳನ್ನು ಹಾಡಿದ್ದಾರೆ. 1999ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ ಹಮ್​ ದಿಲ್ ದೇ ಚುಕೆ ಸನಮ್​ನಲ್ಲಿ ಅವರು ಹಾಡಿದ ತಡಪ್ ತಡಪ್ ಇಸ್ ದಿಲ್​ ಹಾಡು ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಅದೇ ವರ್ಷ ಅವರು ತಮ್ಮದೇ ಒಂದು ಅಲ್ಬಮ್​ನ್ನು ಕೂಡ ರಿಲೀಸ್ ಮಾಡಿದ್ದರು. ತಮ್ಮ ಮೂರು ದಶಕಗಳ ವೃತ್ತಿ ಜೀವನದಲ್ಲಿ ಕೆಕೆ ಅವರು ಒಟ್ಟು 500 ಹಿಂದಿ ಸಿನಿಮಾ ಹಾಡುಗಳು ಹಾಗೂ 200ಕ್ಕೂ ಹೆಚ್ಚು ಕನ್ನಡ, ತೆಲಗು, ಬಂಗಾಳಿ ಮಲಯಾಳಂ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕರಾಗಿದ್ದಾರೆ. 2022ರಂದು ಮೇ ತಿಂಗಳಲ್ಲಿ ತಮ್ಮ 53ನೇ ವಯಸ್ಸಿನಲ್ಲಿ ಹೃದರಯಾಘಾತದಿಂದ ಕೆಕೆ ಮೃತಪಟ್ಟಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ