/newsfirstlive-kannada/media/post_attachments/wp-content/uploads/2025/06/RENE.jpg)
ಕರ್ನಾಟಕ, ಗುಜರಾತ್ ಸೇರಿದಂತೆ 12 ರಾಜ್ಯಗಳಲ್ಲಿ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಮಾಡಿದ್ದವಳು ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾಳೆ. ಪ್ರೇಮ ವೈಫಲ್ಯದಿಂದ ನೊಂದು ಪ್ರೇಮಿಯನ್ನು ಪೊಲೀಸರು ಬಂಧಿಸುವಂತೆ ಮಾಡಲು ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಮಾಡಿದ್ದು ಕಂಡು ಪೊಲೀಸರೇ ಶಾಕ್ ಗೊಳಗಾಗಿದ್ದಾರೆ.
ಪ್ರೇಮಿಯ ಹೆಸರಿನಲ್ಲೇ ಇ-ಮೇಲ್ ಐಡಿ ಸೃಷ್ಟಿಸಿ ಇ-ಮೇಲ್ ಮಾಡುತ್ತಿದ್ದ ರೋಬೋಟಿಕ್ ಇಂಜಿನಿಯರ್ ಪೊಲೀಸ್ ಬಲೆಗೆ ಬಿದ್ದಿದ್ದಾಳೆ. ತಾನು ಪ್ರೀತಿಸುತ್ತಿದ್ದ ಹುಡುಗ ಬೇರೊಬ್ಬಳ ವಿವಾಹವಾಗಿದ್ದರಿಂದ ರೇನಿ ಜೋಶಿಲದಾಗೆ ಸಿಟ್ಟು, ಹತಾಶೆ ಉಂಟಾಗಿದೆ. ತನ್ನ ಮಾಜಿ ಪ್ರೇಮಿಯನ್ನು ಸುಳ್ಳು ಕೇಸ್ನಲ್ಲಿ ಸಿಲುಕಿಸಿ ಜೈಲಿಗೆ ಕಳಿಸಲು ನಕಲಿ ಇ-ಮೇಲ್ ಐಡಿ ಸೃಷ್ಟಿಸಿ ಬಾಂಬ್ ಬೆದರಿಕೆ ಮೇಲ್ ರವಾನೆ ಮಾಡಿದ್ದಳು. ಗುಜರಾತ್‌ನ ಅಹಮದಾಬಾದ್ನಲ್ಲಿರುವ ಬಿ.ಜೆ. ಮೆಡಿಕಲ್ ಕಾಲೇಜಿನಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಇ ಮೇಲ್ ಕಳಿಸಿದ್ದಳು. ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಕೂಡ ರೇನಿ ಜೋಶಿಲದಾ ಕಳಿಸಿದ್ದಳು. ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂ ಸ್ಪೋಟಿಸುವ ಬೆದರಿಕೆ ಇ-ಮೇಲ್ ರವಾನೆ ಮಾಡಿದ್ದಳು.
ಇದನ್ನೂ ಓದಿ: ಜಮೀರ್ ನಿವಾಸದಲ್ಲಿ ಹೈಡ್ರಾಮಾ.. ರೂಪೇಶ್ ರಾಜಣ್ಣನ ವಶಕ್ಕೆ ಪಡೆದ ಪೊಲೀಸರು..!
ವಿಮಾನ ದುರಂತ ಹೊಣೆ ಹೊತ್ತಿದ್ದಳು..
ಅಲ್ಲದೇ ಇತ್ತೀಚೆಗೆ ಅಹ್ಮದಾಬಾದ್ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆಯೂ ಒಂದು ಮೇಲ್ ಮಾಡಿರೋದು ತಿಳಿದುಬಂದಿದೆ. ನಾವು ನಿನ್ನೆಯ ದಿನ ಏರ್ ಇಂಡಿಯಾ ವಿಮಾನವನ್ನು ಪತನಗೊಳಿಸಿದ್ದೇವೆ ಎಂದು ಬರೆದಿರೋ ಮೇಲ್ ಕೂಡ ವೈರಲ್ ಆಗಿದೆ. ಜೂನ್ 12 ರಂದು ಏರ್ ಇಂಡಿಯಾ ವಿಮಾನ ಪತನಗೊಂಡಿತ್ತು. ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಸೇರಿ ಒಟ್ಟು 270 ಜನರು ಜೀವಬಿಟ್ಟಿದ್ದಾರೆ.
ಚೆನ್ನೈನಲ್ಲಿ ಎಂಎನ್‌ಸಿ ಕಂಪನಿಯಲ್ಲಿ ರೋಬೋಟಿಕ್ ಇಂಜಿನಿಯರ್ ಆಗಿರುವ ರೇನಿ ಜೋಶಿಲದಾಗೆ, ತಾನು ಪ್ರೀತಿಸುತ್ತಿದ್ದ ಹುಡುಗ, ತನ್ನನ್ನು ಬಿಟ್ಟು ಬೇರೊಬ್ಬಳನ್ನು ವಿವಾಹವಾಗಿದ್ದಕ್ಕೆ ಹತಾಶೆ ಉಂಟಾಗಿತ್ತು. ತನ್ನ ಪ್ರೇಮಿಯನ್ನು ಕ್ರಿಮಿನಲ್ ಕೇಸ್ ನಲ್ಲಿ ಸಿಲುಕಿಸಿ ಪೊಲೀಸರು ಬಂಧಿಸುವಂತೆ ಮಾಡಲು ಆತನ ಹೆಸರಿನಲ್ಲಿ ಬಾಂಬ್ ಬೆದರಿಕೆ ಇ ಮೇಲ್ ರವಾನೆ ಮಾಡುತ್ತಿದ್ದಳು. ತನ್ನನ್ನು ತಿರಸ್ಕರಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆತನ ಹೆಸರಿನಲ್ಲಿ ಬಾಂಬ್ ಬೆದರಿಕೆಯ ಇ-ಮೇಲ್ ರವಾನೆ ಮಾಡಿದ್ದಾಳೆ. ಫೇಕ್ ಇ-ಮೇಲ್ ಐಡಿ, ವರ್ಚ್ಯುವಲ್ ಪ್ರೈವೇಟ್ ನೆಟ್ ವರ್ಕ್, ಡಾರ್ಕ್ ವೆಬ್ ಬಳಸಿ ತನ್ನ ಐಡೆಂಟಿಟಿ, ಲೋಕೇಷನ್ ಅನ್ನು ಈ ಕಿಲಾಡಿ ಲೇಡಿ ರೇನಿ ಜೋಶಿಲದಾ ಹೈಡ್ ಮಾಡಿದ್ದಳು.
ಇದನ್ನೂ ಓದಿ: ಬೆಂಗಳೂರಲ್ಲಿ ಅಣ್ಣ-ತಮ್ಮನ ಡ್ರಗ್ ಪೆಡ್ಲಿಂಗ್.. ಜೈಲಲ್ಲಿದ್ಕೊಂಡೇ ಕೆಟ್ಟ ದಂಧೆಗೆ ಇಳಿದಿದ್ದು ಹೇಗೆ..?
ಅಹಮದಾಬಾದ್ ಸೈಬರ್ ಕ್ರೈಂ ಪೊಲೀಸರು ತೀವ್ರ ತನಿಖೆ ನಡೆಸಿ ಲೇಡಿ ರೇನಿ ಜೋಶಿಲದಾ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೆನ್ನೈಗೆ ಬಂದು ಹುಸಿ ಬಾಂಬ್ ಬೆದರಿಕೆ ಹಾಕುತ್ತಿದ್ದ ರೇನಿ ಜೋಶಿಲದಾಳನ್ನ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. ಟೆಕ್ನಿಕಲ್ ಸರ್ವೇಲೇನ್ಸ್ ನಡೆಸಿ ರೇನಿ ಜೋಶಿಲದಾ ಬಂಧನ ಮಾಡಲಾಗಿದೆ ಎಂದು ಜಂಟಿ ಪೊಲೀಸ್ ಕಮೀಷನರ್ ಶಾರದ್ ಸಿಂಘಾಲ್ ಹೇಳಿದ್ದಾರೆ. ದಿವಿಜ ಪ್ರಭಾಕರ್ ಎಂಬಾತನನ್ನು ರೇನಿ ಜೋಶಿಲದಾ ಮದುವೆಯಾಗಲು ಬಯಸಿದ್ದಳು. ದಿವಿಜ ಪ್ರಭಾಕರ್, ರೇನಿ ಜೋಶಿಲದಾಳ ಪ್ರಸ್ತಾಪ ತಿರಸ್ಕರಿಸಿ ಬೇರೊಬ್ಬಳನ್ನು ಮದುವೆಯಾಗಿದ್ರು. ಇದರಿಂದ ದಿವಿಜ ಪ್ರಭಾಕರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಆತನ ಹೆಸರಿನಲ್ಲಿ ಫೇಕ್ ಇ ಮೇಲ್ ಐಡಿ ಸೃಷ್ಟಿಸಿ ಮೇಲ್ ರವಾನೆ ಮಾಡಿದ್ದಳು. ಡಿಲೋಯಿಟ್ ಕಂಪನಿಯಲ್ಲಿ ಸೀನಿಯರ್ ಕನ್ಸಲ್ಟೆಂಟ್ ಆಗಿರುವ ರೇನಿ ಜೋಶಿಲದಾ, ತನ್ನ ಟೆಕ್ನಿಕಲ್ ಜ್ಞಾನವನ್ನು ಬಳಸಿ ಪೊಲೀಸರ ಕೈಗೆ ಸಿಗದೇ ಯಾಮಾರಿಸಿದ್ದಳು. ಆಕೆ ಮಾಡಿದ ಸಣ್ಣ ತಪ್ಪಿನಿಂದ ನಾವು ಆಕೆಯನ್ನು ಹಿಡಿದೆವು ಎಂದ ಅಹಮದಾಬಾದ್ ಪೊಲೀಸರು ಹೇಳಿದ್ದಾರೆ.
ಅಹಮದಾಬಾದ್‌ನ ಸರ್ಕೇಜ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹುಸಿ ಬಾಂಬ್ ಬೆದರಿಕೆ ಕೇಸ್ ನಲ್ಲಿ ರೇಶಿ ಜೋಶಿಸದಾಳನ್ನು ಬಂಧನ ಮಾಡಲಾಗಿದೆ. ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ದೆಹಲಿ, ಕರ್ನಾಟಕ, ಕೇರಳ, ಬಿಹಾರ, ತೆಲಂಗಾಣ, ಪಂಜಾಬ್, ಮಧ್ಯಪ್ರದೇಶ, ಹರಿಯಾಣ ರಾಜ್ಯಗಳಿಗೂ ರೇನಿ ಜೋಶಿಲದಾ ಹುಸಿ ಬಾಂಬ್ ಬೆದರಿಕೆ ಇ ಮೇಲ್ ಮಾಡಿದ್ದಳು. ಈಗ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳೂ ಅಹಮದಾಬಾದ್ ಪೊಲೀಸರಿಂದ ಈಕೆಯ ಹುಸಿಬಾಂಬ್ ಇ ಮೇಲ್ ಬೆದರಿಕೆ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿವೆ.
ಇದನ್ನೂ ಓದಿ: ರೈಲು ಪ್ರಯಾಣಿಕರ ಗಮನಕ್ಕೆ.. ಟಿಕೆಟ್ ರೇಟ್ ಹೆಚ್ಚಿಸಿ ಬಿಗ್ ಶಾಕ್ ಕೊಟ್ಟ ಸರ್ಕಾರ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ