/newsfirstlive-kannada/media/post_attachments/wp-content/uploads/2024/03/Kohli_RCB-News.jpg)
ಟೀಮ್​ ಇಂಡಿಯಾದ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಕರಿಯರ್​ ಖತಂ ಆಯ್ತಾ? ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಬಳಿಕ ಈ ಪ್ರಶ್ನೆ ಚರ್ಚೆಯಲ್ಲಿದೆ. ಅಸಲಿಗೆ ಇದೊಂದು ಬ್ಯಾಡ್​ ಟೈಮ್​ ಅಷ್ಟೇ. ಕೊಹ್ಲಿ ಬ್ಯಾಟ್​ ಮತ್ತೆ ಘರ್ಜಿಸೋ ದಿನ ಶೀಘ್ರದಲ್ಲೇ ಬರಲಿದೆ. ವಿರಾಟನ ವೀರಾವೇಷ ನೋಡೋಕೆ ರೆಡಿಯಾಗಿರಿ!
2011 ರಿಂದ 2019..! ಈ ದಿನಗಳಲ್ಲಿ ಯಾರೊಬ್ಬರೂ ಕೂಡ ಕೊಹ್ಲಿಯನ್ನು ಟಚ್​ ಮಾಡೋಕೆ ಆಗ್ತಿರಲಿಲ್ಲ. 2020ಕ್ಕೆ ಕಾಲಿಟ್ಟ ಬಳಿಕ ಅದೇನಾಯ್ತೋ ಗೊತ್ತಿಲ್ಲ. ಕೊಹ್ಲಿ ಖದರ್​ ಕಳೆದು ಹೋಯ್ತು. ಸೆಂಚುರಿ ಇಲ್ಲದೇ 3 ವರ್ಷ ವನವಾಸ ಅನುಭವಿಸುವಂತಾಯ್ತು. 2022ರ ಬಳಿಕ ಕಮ್​ಬ್ಯಾಕ್​ ಮಾಡಿದಂತೆ ಕಂಡ ಕೊಹ್ಲಿ, ಇದೀಗ ಮತ್ತೆ ಕಳಪೆ ಫಾರ್ಮ್​ನ ಸುಳಿಗೆ ಸಿಲುಕಿದ್ದಾರೆ.
ಕೊಹ್ಲಿ ಕತೆ ಮುಗಿದಿಲ್ಲ..!
ನ್ಯೂಜಿಲೆಂಡ್​​ ಟೆಸ್ಟ್​ ಸರಣಿಯಲ್ಲಿ ಕೊಹ್ಲಿಯ ಆಟ ನೋಡಿದ ಮೇಲಂತೂ ಹಲವರು ಕತೆ ಮುಗೀತು ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಮುಂಬರೋ ಆಸಿಸ್​​ ಪ್ರವಾಸದಲ್ಲೂ ಕೊಹ್ಲಿ ಮೇಲೆ ಬಹುತೇಕರಿಗೆ ನಿರೀಕ್ಷೆ ಇಲ್ಲ. ನಿಜಕ್ಕೂ ವಿರಾಟ್​ ಕೊಹ್ಲಿ ಫ್ಯಾನ್ಸ್​ ಬೇಸರದಲ್ಲಿದ್ದಾರೆ. ಹಾಗೇ ಬೇಸರದಲ್ಲಿರೋ ಫ್ಯಾನ್ಸ್​ಗೆ ಗುಡ್​ನ್ಯೂಸ್ ಒಂದಿದೆ.
ಇದನ್ನೂ ಓದಿ:ಅಭಿಮಾನಿಗಳ ಮನ ಗೆದ್ದ ಕಿಂಗ್ ಕೊಹ್ಲಿ.. ಈ ಸಲ ವಿರಾಟ್​ ಏನ್ ಮಾಡಿದರು ಗೊತ್ತಾ?
/newsfirstlive-kannada/media/post_attachments/wp-content/uploads/2024/11/KOHLI-5.jpg)
ಕೊಹ್ಲಿಯ ಸಮಯ ಮುಗಿದಿಲ್ಲ. ಗ್ರಹಗಳು ಪ್ರಬಲವಾದ ಬಿಂದುಗಳನ್ನ ತಲುಪಿದಾಗ ಇನ್ನಷ್ಟು ಉತ್ತಮ ಇನ್ನಿಂಗ್ಸ್​ ಆಡಲಿದ್ದಾರೆ. ಒಳ್ಳೆಯ ದಿನಗಳು ಇನ್ನಷ್ಟೇ ಬರಬೇಕಿದೆ. ಕೊಹ್ಲಿಯಿಂದ ತಂಡಕ್ಕೆ ಕೊಡುಗೆ ಬರಬೇಕಿದೆ. ಮುಂದಿನ ದಿನಗಳಲ್ಲಿ ಕೊಹ್ಲಿ ಪಂದ್ಯ ಗೆಲ್ಲಿಸುವಂತಹ ಇನ್ನಿಂಗ್ಸ್​ಗಳು ಬರಲಿವೆ. ಕೊಹ್ಲಿ ಅಂಕಿ-ಅಂಶಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಗೆಲುವಿನ ಮೇಲೆ ಏಕಾಗ್ರತೆ ಇದೆ. ಭಾರತ ತಂಡಕ್ಕಾಗಿ ಇದನ್ನ ಮಾಡಲಿದ್ದಾರೆ ಎಂದು ವಿಶ್ವದ ಶ್ರೇಷ್ಠ ಸೈಂಟಿಫಿಕ್​​ ಜ್ಯೋತಿಷಿ (Scientific Astrologer) ಗ್ರೀನ್ಸ್​​ಸ್ಟೋನ್​​ ಲೊಬೊ ​ಹೇಳಿದ್ದಾರೆ.
ಕೊಹ್ಲಿ ಅಭಿಮಾನಿಗಳಿಗೆ ಒಂದು ಮಾತು ಹೇಳ್ತೀನಿ. ಒಂದು ಭರವಸೆ ನೀಡ್ತೀನಿ. 2027ರವರೆಗೆ ಕೊಹ್ಲಿ ಕ್ರಿಕೆಟ್​ ಆಡ್ತಾರೆ. ಕೊಹ್ಲಿಯ ಜಾತಕ ಅದ್ಭುತವಾಗಿದೆ. ಇದ್ರಲ್ಲಿ ಯಾವುದೇ ಅನುಮಾನ ಬೇಡ. ಹುಣ್ಣಿಮೆಯ ದಿನ ಕೊಹ್ಲಿ ಜನಿಸಿದ್ದಾರೆ. ಜೊತೆಗೆ ಪ್ಲಾನೆಟ್ X, ಪ್ಲಾನೆಟ್ Y ಹಾಗೂ Z, ನೆಪ್ಚೂನ್ ಮತ್ತು ಯುರೇನಸ್ ಕೊಹ್ಲಿಯ ಜಾತಕದಲ್ಲಿ ಅತ್ಯಂತ ಶಕ್ತಿಯುತವಾಗಿ ಇವೆ ಎಂದು ಭವಿಷ್ಯ ನುಡಿದಿದ್ದಾರೆ.
ಲೊಬೊ ವಿಶ್ವದ ಪ್ರಖ್ಯಾತ ಜ್ಯೋತಿಷ್ಯಗಾರ. ಆಟಗಾರರ ಜಾತಕ ಹಾಗೂ ಗ್ರಹಗತಿ ಸ್ಟಡಿ ಮಾಡಿ ಭವಿಷ್ಯ ನುಡಿಯುತ್ತಾರೆ. ಕ್ರಿಕೆಟ್​ ವಿಚಾರದಲ್ಲಿ ಆಗಾಗ ಭವಿಷ್ಯ ನುಡಿದಿದ್ದಾರೆ. ಮತ್ತು ಆ ಭವಿಷ್ಯಗಳು ನಿಜವಾಗಿವೆ. 2011, 2015 ಹಾಗೂ 2019ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಇವರು ಗೆಲ್ಲುತ್ತೆ ಎಂದಿರುವ ತಂಡವೇ ಚಾಂಪಿಯನ್​ ಆಗಿದೆ.
/newsfirstlive-kannada/media/post_attachments/wp-content/uploads/2024/11/VIRAT_KOHLI.jpg)
ವಿರಾಟ್​ ಆರ್ಭಟ
ಈ ಹಿಂದೆ ಲೊಬೊ ನುಡಿದ ಭವಿಷ್ಯಗಳು ನಿಜವಾಗಿರೋದನ್ನು ನೋಡಿದ್ರೆ ಕೊಹ್ಲಿ ಕಮ್​ಬ್ಯಾಕ್​ನ ಭರವಸೆ ಹೆಚ್ಚಾಗಿದೆ. ಮುಂಬರೋ ಆಸ್ಟ್ರೇಲಿಯಾ ಟೂರ್​ ಕೊಹ್ಲಿ ಪಾಲಿಗೆ ಅಗ್ನಿಪರೀಕ್ಷೆಯ ಕಣ. ಈ ಆಸ್ಟ್ರೇಲಿಯಾ ಕೊಹ್ಲಿಯ ಫೇವರಿಟ್​ ಎದುರಾಳಿ ಕೂಡ ಹೌದು. ಡು ಆರ್​​ ಡೈ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಿರೋ ಕೊಹ್ಲಿ, ಕಾಂಗರೂ ನಾಡಲ್ಲಿ ಕಮ್​ಬ್ಯಾಕ್​ ಮಾಡ್ತಾರಾ? ಕಾದು ನೋಡಬೇಕಿದೆ. ಅಲ್ಲದೇ ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಕೂಡ ಶುರುವಾಗಲಿದೆ. ಲೊಬೋ ಅವರ ಭವಿಷ್ಯ ಬೆನ್ನಲ್ಲೇ ಆರ್​​ಸಿಬಿ ಅಭಿಮಾನಿಗಳಿಗೆ ಹೊಸ ಭರವಸೆ ಬಂದಿದೆ.
ಇದನ್ನೂ ಓದಿ:RCB ಉಳಿಸಿಕೊಳ್ಳೋ ಇನ್ನೂ ಮೂವರು ಆಟಗಾರರು ಇವ್ರೇ! ಲಿಸ್ಟ್​ನಲ್ಲಿ ಅಚ್ಚರಿ ಹೆಸ್ರುಗಳು
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us