newsfirstkannada.com

ಜನಪ್ರಿಯ ಕವಿ ಮುನವ್ವರ ರಾಣಾಗೆ ಕಾರ್ಡಿಯಾಕ್ ಅರೆಸ್ಟ್; ಆಸ್ಪತ್ರೆಯಲ್ಲಿ ನಿಧನ

Share :

Published January 15, 2024 at 7:10am

    ಕವಿ ಮುನವ್ವರ ರಾಣಾಗೆ 71 ವರ್ಷ ಆಗಿತ್ತು

    ಹಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಕವಿ

    ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ದ ರಾಣಾ

ಹೆಸರಾಂತ ಉರ್ದು, ಹಿಂದಿ ಕವಿ ಮುನವ್ವರ ರಾಣಾ ಕಾರ್ಡಿಯಾಕ್ ಅರೆಸ್ಟ್​​ನಿಂದ ಉತ್ತರ ಪ್ರದೇಶದ ಲಖನೌನಲ್ಲಿರುವ ಪಿಜಿಐ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷವಾಗಿತ್ತು.

ಇವರು ಹಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿರುವಾಗಲೇ ಹೃದಯಸ್ತಂಬನ ಆಗಿದೆ. ಇವರು ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.

ನಮ್ಮ ತಂದೆ ನಿನ್ನೆ ರಾತ್ರಿ ನಿಧನರಾಗಿದ್ದಾರೆ ಎಂದು ರಾಣಾ ಅವರ ಮಗಳು ಸುಮೈಯಾ ತಿಳಿಸಿದ್ದಾರೆ. 15 ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ. ಮೃತ ಕವಿಯು ಪತ್ನಿ ಮತ್ತು ನಾಲ್ವರು ಹೆಣ್ಮಕ್ಕಳು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಮುನವ್ವರ ರಾಣಾ ನವೆಂಬರ್ 26, 1952ರಲ್ಲಿ ಉತ್ತರ ಪ್ರದೇಶದ ರಾಯ್​ಬರೇಲಿಯಲ್ಲಿ ಜನಿಸಿದ್ದರು. ಇವರು ಉರ್ದು ಸಾಹಿತ್ಯ, ಕವನಗಳ ಮೂಲಕ ಹೆಚ್ಚು ಜನಪ್ರಿಯತೆಗಳಿಸಿದ್ದರು. ಅದರಲ್ಲೂ ವಿಶೇಷವಾಗಿ ಘಜಲ್ಸ್ ಮೂಲಕ ಖ್ಯಾತಿ ಗಳಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜನಪ್ರಿಯ ಕವಿ ಮುನವ್ವರ ರಾಣಾಗೆ ಕಾರ್ಡಿಯಾಕ್ ಅರೆಸ್ಟ್; ಆಸ್ಪತ್ರೆಯಲ್ಲಿ ನಿಧನ

https://newsfirstlive.com/wp-content/uploads/2024/01/Munawwar-Rana.jpg

Load More