ಪಟ್ಟಣಗೆರೆ ಶೆಡ್‌ನಲ್ಲಿ ಪವಿತ್ರಾ ಗೌಡ ಕಣ್ಣೀರು.. ಪಕ್ಕದಲ್ಲೇ ನಿಂತಿದ್ದ ದರ್ಶನ್ ಮಾಡಿದ್ದೇನು?

author-image
Veena Gangani
Updated On
BREAKING: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಜೈಲು ಪಾಲು
Advertisment
  • ನಟ ದರ್ಶನ್ ಹಾಗೂ ನಟಿ ಪವಿತ್ರಾ ಕರೆತಂದು ಶೆಡ್​ನಲ್ಲಿ ಮಹಜರು
  • ಮಹಜರು ವೇಳೆ ಪೊಲೀಸರ ಮುಂದೆ ಕೈ ಕಟ್ಟಿ ನಿಂತ ದರ್ಶನ್​, ಪವಿತ್ರಾ
  • ನಟ ದರ್ಶನ್, ಪವಿತ್ರಾ ಸೇರಿ ಒಟ್ಟು 13 ಆರೋಪಿಗಳ ಸ್ಥಳ ಮಹಜರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿ ಒಟ್ಟು 13 ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಸದ್ಯ ಅರೆಸ್ಟ್​ ಆದ 13 ಆರೋಪಿಗಳ ಬಾಯಿಂದ ಪೊಲೀಸ್ ಅಧಿಕಾರಿಗಳು ಒಂದೊಂದೇ ವಿಚಾರವನ್ನು ಬಯಲಿಗೆ ಎಳೆಯುತ್ತಿದ್ದಾರೆ.

publive-image

ಇದನ್ನೂ ಓದಿ: ಪವಿತ್ರಗೌಡ ಜೊತೆ ದರ್ಶನ್ ಲಾಕಪ್ ಸೇರ್ತಿದ್ದಂತೆ ಶಾಕ್ ಕೊಟ್ಟ ಪತ್ನಿ ವಿಜಯಲಕ್ಷ್ಮೀ

ಸದ್ಯ ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿ ಒಟ್ಟು 13 ಆರೋಪಿಗಳನ್ನು ಪೊಲೀಸ್​ ಅಧಿಕಾರಿಗಳು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಹೌದು, ರೇಣುಕಾಸ್ವಾಮಿಯ ಕೊಲೆ ನಡೆದ ಸ್ಥಳವಾದ ಆರ್​. ಆರ್​ ನಗರದ ಪಟ್ಟಣಗೆರೆ ಎಲ್ಲಾ ಆರೋಪಿಗಳನ್ನು ಪೊಲೀಸರು ಸ್ಥಳ ಮಹಜರು ನಡೆಸಲಾಗಿದೆ. ಈ ವೇಳೆ ಒಂದು ಕಡೆ ನಿಂತುಕೊಂಡು ಪವಿತ್ರಾ ಗೌಡ ನಿರಂತರವಾಗಿ ಅಳುತ್ತಿದ್ದರು. ಆದರೆ ಪಕ್ಕದಲ್ಲೇ ನಟ ದರ್ಶನ್​ ಅವರು ಪವಿತ್ರಾರನ್ನು ನೋಡಿದ ತಲೆ ತಗ್ಗಿಸಿಕೊಂಡು ನಿಂತುಕೊಂಡಿದ್ದರು. ಮತ್ತೊಂದು ಕಡೆ ಆರೋಪಿ ನಾಗ ಅಳುತ್ತಿರುವುದನ್ನು ನೋಡಿದ ದರ್ಶನ್ ಬೇಸರಗೊಂಡರು. ಇನ್ನು, ಯುವಕನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಗಳು ಹೇಗೆ ಹತ್ಯೆ ಮಾಡಿದ್ರು ಅಂತ ಪೊಲೀಸ್​ ಅಧಿಕಾರಿಗಳು ಆ ಘಟನೆಯನ್ನು ಮರು ಸೃಷ್ಟಿ ಮಾಡಿಸುತ್ತಿದ್ದಾರೆ. ಪೊಲೀಸರ ಮುಂದೆ ಕೊಲೆ ಮಾಡಿದ ಆರೋಪಿಗಳು ಘಟನೆ ಹೇಗಾಯ್ತು ಎಂಬುಬುದರ ಬಗ್ಗೆ ಇಂಚಿಂಚೂ ಮಾಹಿತಿಯನ್ನು ನೀಡುತ್ತಿದ್ದಾರೆ.

publive-image

ಇನ್ನು, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಒಟ್ಟು 17 ಆರೋಪಿಗಳು ಭಾಗಿಯಾಗಿದ್ದಾರೆ. A1 ಪವಿತ್ರ ಗೌಡಾ (33), A2 ದರ್ಶನ್ (47), A3 ಪವನ್ (29), A4 ರಾಘವೇಂದ್ರ (43), A5 ನಂದೀಶ (28), A6 ಜಗದೀಶ, A7 ಅನು, A8 ರವಿ, A9 ರಾಜು, A10 ವಿನಯ್ (38), A11 ನಾಗರಾಜು (41), A12 ಲಕ್ಷ್ಮಣ (54), A13 ದೀಪಕ್ (39), A14 ಪ್ರದೂಷ್ 40), A15 ಕಾರ್ತಿಕ್ (27), A16 ಕೇಶವಮೂರ್ತಿ (27), A17 ನಿಖಿಲ್ ನಾಯಕ್ (21) ಆರೋಪಿಗಳಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment