/newsfirstlive-kannada/media/post_attachments/wp-content/uploads/2024/12/DARSHAN-1-1.jpg)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಾಲ್ಕನೇ ಆರೋಪಿ ಜಗದೀಶ್ಗೆ ಜಾಮೀನು ಸಿಕ್ಕಿದ್ದು, ಇನ್ನೂ ಬಿಡುಗಡೆ ಆಗಿಲ್ಲ. ಇಡೀ ದಿನ ನಮ್ಮವರು ತಮ್ಮವರು ಎನ್ನುವವರ ಬಳಿ ಹೋಗಿ ಕೇಳಿದ್ವಿ, ಯಾರೂ ಶ್ಯೂರಿಟಿ ಕೊಡಲು ಮುಂದೆ ಬರುತ್ತಿಲ್ಲ ಅಂತ ಆರೋಪಿ ಜಗದೀಶ್ ತಾಯಿ ಸುಲೋಚನಮ್ಮ ಹೇಳಿದ್ದಾರೆ.
ನಮಗೆ ಆತ್ಮೀಯರು ಒಬ್ಬರು ಶ್ಯೂರಿಟಿ ಹಾಕಲು ಮುಂದೆ ಬಂದಿದ್ದಾರೆ. ಆದ್ರೆ ಶ್ಯೂರಿಟಿ ಹಾಕಲು ಇಬ್ಬರು ಬೇಕು ಹಾಗಾಗಿ ಇನ್ನೊಬ್ಬರಿಗಾಗಿ ಹುಡುಕುತ್ತಿದ್ದೇವೆ. ಊಟ, ನೀರು ಬಿಟ್ಟು ಊರೂರು ಅಲೆದಾಟ ಮಾಡ್ತಿದೇವೆ. ದರ್ಶನ್ ಅವರು ಈ ಸಮಯದಲ್ಲಿ ಕೈ ಹಿಡಿಯಬೇಕಿದೆ. 6 ತಿಂಗಳು ನಂತರನಾದರೂ ಮಗ ಮನೆಗೆ ಬರುತ್ತಾರೆಂದು ಖುಷಿಯಾಗಿದೆ.
ಇದನ್ನೂ ಓದಿ:ಭಿಕ್ಷೆ ಬೇಡೋದನ್ನೇ ವ್ಯಾವಹಾರಿಕ ಉದ್ಯಮವಾಗಿ ಬದಲಾಯಿಸಿದ ಪಾಕ್.. ಅರಬ್ ರಾಷ್ಟ್ರಗಳು ಎಚ್ಚರಿಕೆ
ಈಗ ನೋಡಿದ್ರೆ ಸಮಸ್ಯೆಗಳು ಒಂದರ ಮೇಲೆ ಒಂದು ಬರುತ್ತಿವೆ. ದರ್ಶನ್ ಅವರೇ ಶ್ಯೂರಿಟಿ ವ್ಯವಸ್ಥೆ ಮಾಡಬೇಕು ಅಂತ ಆರೋಪಿ ಜಗದೀಶ್ ತಾಯಿ ಮನವಿ ಮಾಡಿದ್ದಾರೆ. ಹೇಗೊ ನಮ್ಮ ಮಗ ಮನೆಗೆ ಬಂದರೆ ನಮಗೆ ಅನುಕೂಲವಾಗುತ್ತದೆ. ಆರು ತಿಂಗಳು ನಂತರವಾದರೂ ಮಗ ಮನೆಗೆ ಬರುತ್ತಾರೆಂದು ಖುಷಿಯಾಗಿದೆ. ಈಗ ನೋಡಿದ್ರೆ ಸಮಸ್ಯೆಗಳು ಒಂದರ ಮೇಲೆ ಒಂದು ಬರುತ್ತಿವೆ ಎಂದಿದ್ದಾರೆ.
ಕಳೆದ ಶುಕ್ರವಾರ ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್, ಪವಿತ್ರಗೌಡ ಸೇರಿ ಒಟ್ಟು 7 ಮಂದಿಗೆ ಹೈಕೋರ್ಟ್ ಪೂರ್ಣಾವಧಿಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಎ1 ಪವಿತ್ರಗೌಡ, ಎ2 ದರ್ಶನ್, ಎ4 ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ 12 ಲಕ್ಷ್ಮಣ್, ಎ 11ನಾಗರಾಜ್, ಎ 14 ಪ್ರದೋಷ್ಗೆ ಜಾಮೀನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಪುಷ್ಪಾ 2 ಸಿನಿಮಾ ವೇಳೆ ನಡೆದ ಕಾಲ್ತುಳಿತ; ಮೃತ ರೇವತಿ ಮಗನ ಆರೋಗ್ಯ ಸ್ಥಿತಿ ಚಿಂತಾಜನಕ !
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ