Advertisment

ದರ್ಶನ್​​ ಗ್ಯಾಂಗ್​​ನಿಂದ ಕೊಲೆ ಕೇಸ್; ಈ ಬಗ್ಗೆ ಹಾಸ್ಯನಟ ಚಿಕ್ಕಣ್ಣ ಹೇಳಿದ್ದೇನು?

author-image
Veena Gangani
Updated On
ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದೇಕೆ? ಪೊಲೀಸರಿಗೆ ಸಿನಿಮಾ ಡೈಲಾಗ್ ಹೊಡೆದ ಚಿಕ್ಕಣ್ಣ; ಆಮೇಲೇನಾಯ್ತು?
Advertisment
  • ಪೊಲೀಸರ ಮುಂದೆ ಮಹತ್ವದ ಹೇಳಿಕೆ ನೀಡಿದ ಸ್ಟಾರ್​​ ನಟ ಚಿಕ್ಕಣ್ಣ
  • ನಟ ದರ್ಶನ್​ ಮತ್ತು ಗ್ಯಾಂಗ್​​ನಿಂದ ನಡೆದಿದೆ ಎನ್ನಲಾದ ಕೊಲೆ ಕೇಸ್
  • ಚಿಕ್ಕಣ್ಣ ಅವರಿಂದ ಮಹತ್ವದ ಹೇಳಿಕೆ ದಾಖಲಿಸಿಕೊಂಡ ಅಧಿಕಾರಿಗಳು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​​ ಸಿಕ್ಕಿದೆ. ಕೊಲೆ ಕೇಸ್​ ಸಂಬಂಧ ಹಾಸ್ಯ ನಟ ಚಿಕ್ಕಣ್ಣ ಅವರಿಂದ ಪೊಲೀಸರು ಮಹತ್ವದ ಹೇಳಿಕೆ ಪಡೆದುಕೊಂಡಿದ್ದಾರೆ.

Advertisment

ಇದನ್ನೂ ಓದಿ: ಮೆಗ್ಗರ್​​ ರಾಜುನ ಕ್ರೌರ್ಯದ ಇತಿಹಾಸ ತುಂಬಾನೇ ಭಯಾನಕ.. ಚಿತ್ರಹಿಂಸೆ ಅನುಭವಿಸಿದ್ದು ರೇಣುಕಾಸ್ವಾಮಿ ಒಬ್ಬರೇ ಅಲ್ಲ..!

ರೇಣುಕಾಸ್ವಾಮಿ ಹತ್ಯೆಯಾದ ದಿನ ನಟ ದರ್ಶನ್ ಜೊತೆ ಹಾಸ್ಯ ನಟ ಚಿಕ್ಕಣ್ಣ ಪಾರ್ಟಿಯಲ್ಲಿ ಭಾಗಿಯಾಗಿದ್ರು ಎಂದು ವರದಿಯಾಗಿತ್ತು. ಹಾಗಾಗಿ ನೋಟಿಸ್​ ಜಾರಿ ಮಾಡಿ ಪೊಲೀಸ್ರು ಚಿಕ್ಕಣ್ಣ ಅವರನ್ನು ಸ್ಟೋನಿ ಬ್ರೂಕ್ಸ್​​​ ರೆಸ್ಟೋರೆಂಟ್​ಗೆ ಕರೆದೊಯ್ದಿದ್ದಾರೆ. ಸ್ಥಳ ಮಹಜರು ಬಳಿಕ ಚಿಕ್ಕಣ್ಣ ಅವರಿಂದ ಮಹತ್ವದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಇನ್ನು, ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತಾಡಿದ ನಟ ಚಿಕ್ಕಣ್ಣ ಅವರು, ಅವತ್ತು ಊಟಕ್ಕೆ ಕರೆದಿದ್ರು. ಹೀಗಾಗಿ ಹೋಗಿದ್ದೆ. ಇವತ್ತು ಕೇಸ್ ಸಂಬಂಧ ಪೊಲೀಸರು ವಿಚಾರಣೆಗೆ ಕರೆದಿದ್ರು. ಪೊಲೀಸರು ಕೇಳಿದ್ದಕ್ಕೆ ನಾನು ಸಹಕರಿಸಿ ಉತ್ತರಿಸಿದ್ದೇನೆ. ತನಿಖೆ ಆಗ್ತಿರೋದ್ರಿಂದ ನಾನು ಏನೂ ಹೇಳಲೂ ಸಾಧ್ಯವಿಲ್ಲ. ಮುಂದೆ ಅವಶ್ಯವಿದ್ದರೆ ವಿಚಾರಣೆಗೆ ನಾನು ಸಹಕರಿಸಿದ್ದೀನಿ ಅಂತ ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment