newsfirstkannada.com

ದರ್ಶನ್​ ರೆಸಾರ್ಟ್​​ನಲ್ಲಿದ್ದಾರೋ, ಜೈಲಿನಲ್ಲಿದ್ದಾರೋ; ಕಣ್ಣೀರು ಹಾಕುತ್ತ ರೇಣುಕಾಸ್ವಾಮಿ ತಂದೆ ಏನಂದ್ರು?

Share :

Published August 25, 2024 at 7:00pm

    ಮಾಧ್ಯಮಗಳ ಮುಂದೆ ರೇಣುಕಾಸ್ವಾಮಿ ತಂದೆ ಮಾತಾಡಿದ್ದೇನು?

    ಕೋರ್ಟ್​, ಸರ್ಕಾರ, ಪೊಲೀಸರು ನಂಬಿಕೆ ಕಳೆದುಕೊಳ್ಳಬಾರದು

    ಕಣ್ಣೀರು ಹಾಕುತ್ತಲೇ ಮಾತನಾಡಿರುವ ರೇಣುಕಾಸ್ವಾಮಿ ತಂದೆ

ಚಿತ್ರದುರ್ಗ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್​​ಗೆ ರಾಜಾಥಿತ್ಯ ಹಿನ್ನೆಲೆಯಲ್ಲಿ ಮೃತ ರೇಣುಕಾಸ್ವಾಮಿ ತಂದೆ ಶಿವನಗೌಡರ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಅವರು ರೆಸಾರ್ಟ್​ ಅಲ್ಲಿ ಇದಾರೋ, ಜೈಲಿನಲ್ಲಿ ಇದಾರೋ ಎಂದು ಗೊತ್ತಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಜೈಲೊಳಗೆ ಬಿಂದಾಸ್ ದರ್ಶನ.. ದುಡ್ಡಿದ್ರೆ ಏನ್ ಬೇಕಾದ್ರೂ ಸಿಗುತ್ತಾ? ಕಷ್ಟಪಟ್ಟು ಅರೆಸ್ಟ್ ಮಾಡಿದ ಪೊಲೀಸ್‌ ಕಥೆ ಏನು?

ದರ್ಶನ್ ಫೋಟೋ ವೈರಲ್ ಆಗುತ್ತಿದ್ದಂತೆ ನ್ಯೂಸ್​ ಫಸ್ಟ್​ ಜೊತೆ ಮಾತನಾಡಿರುವ ಮೃತ ರೇಣುಕಾಸ್ವಾಮಿ ತಂದೆ ಶಿವನಗೌಡರ್ ಅವರು, ದರ್ಶನ್ ಅವರು ಜೈಲಿನಲ್ಲಿ ಇದ್ದಾರೋ ಇಲ್ಲವೋ ಎನ್ನುವ ಭಾವನೆ ಬರುತ್ತಿದೆ. ಜೈಲು ಜೈಲಾಗಿರಬೇಕೆ ವಿನಃ ಅದು ಮತ್ತೊಂದು ಆಗರಬಾರದು. ಸಾಮಾನ್ಯ ಕೈದಿಯಂತೆ ಇರಬೇಕು. ಆದರೆ ಅವರಿಗೆ ಎಲ್ಲ ರೀತಿಯಲ್ಲೂ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಸ್ನೇಹಿತರು ಫೋಟೋ ತೋರಿಸಿದರು ಅದನ್ನು ನೋಡಿ ನಮಗೆ ಬಹಳ ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಟ್ವಿಸ್ಟ್.. ದರ್ಶನ್ ಫೋಟೋದಿಂದ ಜಾರ್ಜ್‌ಶೀಟ್‌ಗೂ ಮುನ್ನ ಕೋರ್ಟ್‌ನಲ್ಲಿ ಸಂಕಷ್ಟ?

4 ಜನ ಚೇರ್ ಮೇಲೆ ಕುಳಿತು ಅರಮಾಗಿ ಸಿಗರೇಟ್ ಸೇದುತ್ತ, ಚಹಾ ಕುಡಿಯುತ್ತಿದ್ದಾರೆ. ಅವರು ರೆಸಾರ್ಟ್​ ಅಲ್ಲಿ ಇದ್ದಾರೋ, ಜೈಲಿನಲ್ಲಿ ಇದ್ದಾರೋ ಗೊತ್ತಾಗುತ್ತಿಲ್ಲ. ನಮಗೆ ಆತ್ಮಸ್ಥೈರ್ಯ ಹೇಳಿದ್ರು, ಪೊಲೀಸರು ಕೂಡ ನಿಮಗೆ ನ್ಯಾಯ ಸಿಗುತ್ತೆ ಎಂದು ಹೇಳಿದ್ದರು. ಇಲ್ಲಿವರೆಗೆ ಪೊಲೀಸರನ್ನು ನೋಡಿದಾಗ ಆ ಭರವಸೆ, ನಂಬಿಕೆ ಇತ್ತು. ಯಾರದು ತಪ್ಪು ಇದೆಯೋ ಅವರಿಗೆ ಶಿಕ್ಷೆ ಆಗಬೇಕು. ನನ್ನ ಮಗನನ್ನು ಕಳೆದುಕೊಂಡಿದ್ದು ನನಗೆ ಗೊತ್ತು. ಸರ್ಕಾರ ನಿರ್ದಾಕ್ಷಿಣ್ಯವಾಗಿ ತನಿಖೆ ಮಾಡಬೇಕು. ಯಾರು ಈ ಸೌಲಭ್ಯ ಅವರಿಗೆ ಕೊಟ್ಟಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಡೀ ಸರ್ಕಾರ, ಪೊಲೀಸರು, ನ್ಯಾಯಾಂಗವನ್ನು ನಾವು, ಜನ ನಂಬಿದ್ದೇವೆ. ನಂಬಿಕೆ ಕಳೆದುಕೊಳ್ಳಬಾರದು. ಮಗನನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ. ಆದರೆ ಇದರಿಂದ ನಮಗೆ ಭಾರೀ ನೋವಾಗಿದೆ ಎಂದು ಕಣ್ಣೀರು ಹಾಕಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ರೆಸಾರ್ಟ್​​ನಲ್ಲಿದ್ದಾರೋ, ಜೈಲಿನಲ್ಲಿದ್ದಾರೋ; ಕಣ್ಣೀರು ಹಾಕುತ್ತ ರೇಣುಕಾಸ್ವಾಮಿ ತಂದೆ ಏನಂದ್ರು?

https://newsfirstlive.com/wp-content/uploads/2024/08/DARSHAN_RENUKASWAMY.jpg

Load More