newsfirstkannada.com

ಇಂಥವರಿಗೆ ಮನುಷ್ಯತ್ವ ಇದೆಯಾ.. ದರ್ಶನ್​​ ಫೋಟೋ ನೋಡಿ ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದ ರೇಣುಕಾಸ್ವಾಮಿ ತಂದೆ

Share :

Published August 26, 2024 at 10:58am

Update August 26, 2024 at 10:59am

    ಜೈಲಿನಲ್ಲಿ ದರ್ಶನ್‌ ರಾಜಾತಿಥ್ಯ ಕೊಟ್ಟವರಿಗೂ ಶಿಕ್ಷೆಯಾಗಲಿ ಎಂದು ಆಗ್ರಹ

    ತಪ್ಪಿನ ಬಗ್ಗೆ ಚಿಂತೆಯೇ ಇಲ್ಲದೆ ಜೈಲಿನಲ್ಲಿ ದರ್ಶನ್​ ರಾಜ್ಯಾತಿಥ್ಯ ಜೀವನ!

    ಮನೆತನ ಕಣ್ಣೀರಲ್ಲಿ ಕೈತೊಳೆದಿದ್ದೇವೆ ಆದರೆ ಶಿವನಗೌಡರ್ ಹೇಳಿದ್ದೇನು?

ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ಬಿಂದಾಸ್ ಜೀವನ ನಡೆಸ್ತಿದ್ರೆ, ಇತ್ತ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಕಣ್ಣೀರೇ ಗತಿಯಾಗಿದೆ. ಮಗನ ಕಳ್ಕೊಂಡ ದುಃಖದಲ್ಲಿರೋ ಪೋಷಕರು ತಪ್ಪು ಮಾಡಿದವ್ರಿಗೆ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಇಡ್ಕೊಂಡಿದ್ರು. ಆದ್ರೆ, ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ಆರೋಪಿ ದರ್ಶನ್ ಚಿಂತೆಯೇ ಇಲ್ಲದೆ ರಾಜ್ಯಾತಿಥ್ಯ ನೀಡ್ತಿರೋದು ರೇಣುಕಾಸ್ವಾಮಿ ತಂದೆ-ತಾಯಿಗೆ ಮತ್ತಷ್ಟು ಕಣ್ಣೀರಿಗೆ ಕಾರಣವಾಗಿದೆ.

ಇದನ್ನೂ ಓದಿ: ಚೆನ್ನಾಗಿದ್ದೀರಾ ಬಾಸ್.. ಹೂ ಚಿನ್ನ; ದರ್ಶನ್ ಬಿಂದಾಸ್ ಲೈಫ್‌ಗೆ ಹೊಸ ಟ್ವಿಸ್ಟ್‌; ವಿಡಿಯೋ ಕಾಲ್ ಮಾಡಿದ್ಯಾರು?

ಮುಪ್ಪಿನ ಕಾಲದಲ್ಲಿ ನೋಡ್ಕೋಬೇಕಾಗಿದ್ದ ಮನೆ ಮಗ ಕೊಲೆಯಾಗಿರೋದನ್ನೇ ತಂದೆ-ತಾಯಿಗೆ ಸಹಿಸೋಕೆ ಆಗ್ತಿಲ್ಲ. ಮನೆಗೆ ಆಧಾರವಾಗಿದ್ದ ಮಗನಿಲ್ಲದೇ ಮನೆ ಬರಡಾಗಿದ್ದು, ರೇಣುಕಾಸ್ವಾಮಿ ಪೋಷಕರು ನಿತ್ಯವೂ ಕಣ್ಣೀರು ಹಾಕುವಂತಾಗಿದೆ. ಆದ್ರೆ, ಕೊಲೆ ಕೇಸ್‌ನಲ್ಲಿ ಜೈಲು ಸೇರಿರೋ ಆರೋಪಿ ದರ್ಶನ್‌ ಮಾತ್ರ ಆರಾಮಾಗಿಯೇ ಜೀವನವನ್ನ ನಡೆಸ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ಸಿಕ್ತಿರೋ ರಾಜಾಥಿತ್ಯ ನೋಡಿ ಮೃತ ರೇಣುಕಾಸ್ವಾಮಿ ಕುಟುಂಬಸ್ಥರು ಶಾಕ್ ಆಗಿದ್ದಾರೆ.

ಜೈಲಿನಲ್ಲಿ ಯಾವುದೇ ಚಿಂತೆ ಇಲ್ಲದೇ ಆರೋಪಿ ದರ್ಶನ್ ಸಿಗರೇಟ್ ಹೊಡ್ಕೊಂಡು. ಕಾಫಿ ಕುಡಿದು ರೌಡಿಶೀಟರ್‌ಗಳ ಜೊತೆ ಮಾತಾಡ್ತಾ ಎಂಜಾಯ್ ಮಾಡ್ತಿದ್ದಾರೆ. ಇದೆಲ್ಲಾ ನೋಡಿರೋ ರೇಣುಕಾಸ್ವಾಮಿ ಪೋಷಕರು ದಂಗಾಗಿದ್ದಾರೆ. ಇದರ ಬಗ್ಗೆ ಮಾತಾಡಿರೋ ರೇಣುಕಾಸ್ವಾಮಿ ತಂದೆ ಶಿವನಗೌಡರ್ ನಮ್ಮ ಮನೆತನ ಕಣ್ಣೀರಲ್ಲಿ ಕೈತೊಳೆದಿದ್ದೇವೆ. ಇಂಥವರಿಗೆ ಮನುಷ್ಯತ್ವ ಇದೆಯಾ ಅಂತಾ ಕಣ್ಣೀರಾಕಿದ್ದಾರೆ.

ಇದನ್ನೂ ಓದಿ: ದರ್ಶನ್‌ಗೆ ವಿಡಿಯೋ ಕಾಲ್‌ ಮಾಡಿದ ಸೀಕ್ರೆಟ್ ಬಯಲು.. ಬಿಲ್ಡಪ್ ಕೊಟ್ಟು ಸಿಕ್ಕಿಬಿದ್ದಿದ್ದೇ ರೋಚಕ ಸತ್ಯ!

ಪೊಲೀಸರ ಮೇಲೆ ಹಾಗೂ ಸರ್ಕಾರದ ಮೇಲೆ ನಂಬಿಕೆ ಇದೆ. ಎಲ್ಲಿ ತಪ್ಪಾಗಿದೆ ಎಂದು ಪರಿಶೀಲನೆ ಮಾಡಲಿ. ಯಾರಾದ್ರೂ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ. ನ್ಯಾಯಾಂಗ ಇದೆ, ಚಾರ್ಜ್ ಶೀಟ್ ಹಾಕಿದ ಬಳಿಕ ಗೊತ್ತಾಗುತ್ತದೆ. ಜಡ್ಜ್ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಪೂರ್ಣ ನಂಬಿಕೆ ಇದೆ. ಫೋಟೋ ನೋಡಿದ್ರೆ ತಪ್ಪು ಮಾಡಿದ್ದೇನೆ ಎಂಬ ಭಾವನೆ ಇಲ್ಲ. ಆ ಫೋಟೋ ನೋಡಿ ನಮಗೆ ಶಾಕ್ ಆಯ್ತು, ತನಿಖೆ ಆಗಲಿ. ನ್ಯಾಯಾಂಗ ಊಟ ಕೊಟ್ಟಿಲ್ಲ, ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಈ ಘಟನೆ ನೋಡಿ ನನಗೆ ಪರಮಾಶ್ವರ್ಯ ಆಗಿದೆ. ಜೈಲು ಜೈಲು ಆಗಿರ್ಬೇಕು ಮತ್ತೊಂದು ಆಗಿರಬಾರದು. ಕುರ್ಚಿ ಮೇಲೆ ಕುಳಿತು ಚಹ, ಸಿಗರೇಟ್ ಹಿಡಿದು ಕೂತಿದ್ದಾರೆ. ರೆಸಾರ್ಟ್​ನಲ್ಲಿ ಕುಳಿತಂತೆ ಕುಳಿತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದಿದ್ದಾರೆ. ಪೊಲೀಸರ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ. ನನ್ನ ಮಗನ ಕಳೆದುಕೊಂಡಿದ್ದು ನನಗೆ ಗೊತ್ತಿದೆ. ನನ್ನ ಮಗನಿಗೆ ಶಾಂತಿ ಸಿಗಬೇಕು, ಅವರಿಗೆ ಶಿಕ್ಷೆಯಾಗಬೇಕು. ಸರ್ಕಾರ ನಿರ್ದಾಕ್ಷಿಣ್ಯವಾಗಿ ತನಿಖೆ ಮಾಡಬೇಕು. ಕೈಮುಗಿದು ಸರ್ಕಾರವನ್ನ ನಾನು ಕೇಳುತ್ತೇನೆ. ನನ್ನ ಮಗನ ಸಾವಿಗೆ ಈಡೀ ರಾಜ್ಯ ದುಃಖ ಪಟ್ಟಿದೆ. ಗೃಹ ಸಚಿವರು ಕೂಡಾ ಈ ಬಗ್ಗೆ ಗಮನ ಹರಿಸಬೇಕು. ನಮ್ಮ ಮನೆತನ ಕಣ್ಣಿರಲ್ಲಿ ಕೈತೊಳೆದಿದ್ದೇವೆ. ಇಂಥವರಿಗೆ ಮನುಷ್ಯತ್ವ ಇದಿಯಾ? ದಿನ ಬೆಳಕಾದ್ರೆ ಸೊಸೆ ಜೀವನದ ಬಗ್ಗೆ ಸಂಕಟ ಆಗುತ್ತದೆ. ಇಂಥ ದೃಷ್ಯ ನಮ್ಮ ಹೊಟ್ಟೆ ಉರಿಸುತ್ತದೆ. ದಯವಿಟ್ಟು ಅರ್ಥ ಮಾಡಿಕೊಂಡು ಸಮಗ್ರ ತನಿಖೆ ಆಗಬೇಕು. ಈತರ ಆಗುವುದರಿಂದ ಸಿಬಿಐ ತನಿಖೆ ನಡೆಸಬೇಕು

ಶಿವನಗೌಡರ್, ಹತ್ಯೆಯಾದ ರೇಣುಕಾಸ್ವಾಮಿ ತಂದೆ

ಕೊಲೆ ಪ್ರಕರಣದಲ್ಲಿ ಒಂದಲ್ಲ ಒಂದು ಸಾಕ್ಷ್ಯಗಳು ಪೊಲೀಸರು ಕೈ ಸೇರ್ತಿರೋದಂತು ಸತ್ಯ.. ಚಾರ್ಜ್‌ಶೀಟ್‌ ಸಲ್ಲಿಕೆಗೂ ಕೂಡ ಸಿದ್ಧತೆ ನಡೆಯುತ್ತಿದೆ. ಇವೆಲ್ಲದರ ಮಧ್ಯೆ ಜೈಲಿನಲ್ಲಿ ದರ್ಶನ್ ಯಾವುದಕ್ಕೂ ಕೇರ್‌ ಮಾಡದೇ ಬಿಂದಾಸ್ ಆಗಿ ಇರೋದು ರೇಣುಕಾಸ್ವಾಮಿ ಪೋಷಕರನ್ನ ಮತಷ್ಟು ಆತಂಕಕ್ಕೆ ದೂಡಿರೋದಂತು ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಥವರಿಗೆ ಮನುಷ್ಯತ್ವ ಇದೆಯಾ.. ದರ್ಶನ್​​ ಫೋಟೋ ನೋಡಿ ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದ ರೇಣುಕಾಸ್ವಾಮಿ ತಂದೆ

https://newsfirstlive.com/wp-content/uploads/2024/08/darshan-1.jpg

Load More